ಅಂದು ಇರಲಿಲ್ಲ ಬಟ್ಟೆಗಳಿಗೆ
ಬೇಧವಿಲ್ಲದ ಭಾವ.....
ಆದ್ರು ಇತ್ತು ಅಂದು ತೊಡಲು
ಬಟ್ಟೆಗಳಿಗೆ ಅಭಾವ.....
ಇಂದು ತೊಡಲು ಇವೆ
ಹಲವಾರು ಬಟ್ಟೆಗಳು......
ಬಟ್ಟೆಗಳೆ ಆಗಿವೆ ಇಂದು ಶಾಲೆಗಳಿಗೆ ಸಮಸ್ಯೆ.
- ಸುರೇಶ.ಆರ್.— % &-
ಮಾಸದ ನೆನಪುಗಳು
ಗೀಚಿದರೆ ಮನಸಿಗೆ ಹಗುರ....💞
ಬಿಸಿಯಾಗಿದೆ ಗೆಳತಿ
ನನ್ನಂತರಾಳದ ಒಲವು .........
ನಿನ್ನ ಪ್ರೀತಿಯ ಒಲುಮೆಗಾಗಿ
ಕಾಯುತ್ತಿದೆ ಮನವು ...........
ನಿನ್ನಾಂತರಾಳದಲ್ಲಿ
ಹುದುಗಿರುವ ಪ್ರೀತಿಯನು
ಹೃದಯದಿಂದ ಹೊರಚಿಮ್ಮಿದರೆ ಸಾಕು
ಬರುಡಾದ ಹೃದಯಕೆ ಅದುವೇ
ಮಹಾ ಚಿಲುಮೆ.
- ಸುರೇಶ.ಆರ್.
-
ಸ್ವ ಭಾಷೆಯಲಿ,
ಮನದಲ್ಲಿ ಮೂಡಿದ ಭಾವನೆಗಳಿಗೆ
ಪದಗಳನು ಪೋಣಿಸಿ,
ತನ್ನದೇ ಆದ,ವಾದ್ಯ-ಮೇಳ ರೂಪ ಕೊಟ್ಟ
ಸಿಂಗಾರದ ಬರವಣಿಗೆಯ ಮೆರವಣಿಗೆ.
- ಸುರೇಶ.ಆರ್.
-
ಬಡತನದಲ್ಲಿ ಬೆಂದು
ಸಾವಿಲ್ಲದ ಸಾಹಿತ್ಯವನು ಕಟ್ಟಿ
ಕುಟ್ಟಿ-ಕುಟ್ಟಿ ಸಾಹಿತ್ಯದ
ರಸದೌತಣವ ಊಣಬಡಿಸಿದ ಕವಿ
ಬೇಂದ್ರೆ ಅಜ್ಜನವರಿಗೆ
ಜನ್ಮದಿನದ ಶುಭಾಶಯಗಳು.💐💐
- ಸುರೇಶ.ಆರ್.-
ಕನ್ನಡದ
ಅಂತರಗಂಗೆಯನ್ನು
ಕೆದಕಿ ನುಡಿಕಟ್ಟಿ ,
ಪದಕಟ್ಟಿ ಕುಣಿಸಿ
ಓದುಗರ ಮನವನ್ನು
ತಣಿಸಿ ಉಣಿಸಿದ ಕವಿ
ದ.ರಾ.ಬೇಂದ್ರೆ.
ಸಾಧನಕೇರಿಯ ಸಂತ
ಕನ್ನಡದ ವರ ಕವಿ
ಬೇಂದ್ರೆಯವರ
125ನೇ ಜನ್ಮದಿನದ
ಶುಭಾಶಯಗಳು.💐💐💐
- ಸುರೇಶ.ಆರ್.
-
ಬಂಧಿಯಾದ
ಹೃದಯದೊಳಗೆ
ಬೆಂದ ಭಾವನೆಗಳು
ನೂರಾರು.
ಅದೇಕೋ ಕ್ಯಾರೇ
ಅನ್ನದ ಹೃದಯ
ಇಂದೇಕೋ
ಹಾತೊರೆಯುತ್ತಿದೆ ನಿನ್ನ,
ಹೃದಯದ
ಈ ಭಾವನೆಗಳು
ಸತ್ತು ಹೋಗುವ ಮುನ್ನ
ಹೃದಯವನ್ನೊಮ್ಮೆ ಪರೀಕ್ಷಿಸಿ
ಚಿಕಿತ್ಸೆಯನು ಕೊಡಬಾರದೇ !......
- ಸುರೇಶ.ಆರ್.-
ಪಂಚಮಿ ಹಬ್ಬದಲಿ
ಮನದಲಿ ಮೂಡಿಸಿದೆ ನೀನು
ನಾಗರ ಹೆಡೆಬಿಚ್ಚಿದ ರಂಗೋಲಿ
ನಾನು ನೀನು ಕೂಡಿ
ಜೊತೆಯಲಿ ಜೋಕಾಲಿ ಹಾಡಿ
ನಾ ಜೋರ ನೀ ಜೋರ
ಇಬ್ಬರು ಜೋರೆಂದು
ಜೋರಾಗಿ ಜೀಕಿ
ಜಿಟಿ ಜಿಟಿ ಮಳೆಯಲಿ
ಮೆಲ್ಲಲು ನೀ ತಂದ
ಬಗೆಬಗೆಯ ಉಂಡೆಗಳ ಜೊತೆಗೆ
ಶ್ರಾವಣದ ಸೊಬಗ ಸವಿದ
ನಾಗರ ಪಂಚಮಿ ಮರೆಯಲಾಗದು
ಗೆಳತಿ.....-
ಇನ್ನೇನು...
ಮುಂದೆ
ಬಂತು
ಶ್ರಾವಣ
ಅದಕ್ಕೆ ....
ತಿನ್ನಾಂಗಿಲ್ಲ
ಅಂದು
ಮಾಂಸ
ಮತ್ತೆ....
ಮುಗಿಯುತ್ತಿದೆ
ಆಷಾಢ ಮಾಸ
ಈಗ....
ಮನೆಯಲ್ಲಿಂದು
ಚಿಕನ್, ಮಟನ್
ಸಾರಿನ ವಾಸನೆ ಜೋರಾಗಿದೆ
ಕೊನೆಗೆ...
ಶ್ರಾವಣ
ಮುಗಿವ ತನಕ
ಭಜನೆ.......-
(ನಾವು ಚಿಕ್ಕವಯಸ್ಸಿನಲ್ಲಿ
ಹೇಳುತ್ತಿದ್ದ ಪದ ನೋಡಿ)
ಕಾಗಿ ಕಾಗಿ ಕವ್ವ
ಯಾರ್ ಬಂದಾರವ್ವ
ಮಾವ ಬಂದನವ್ವ
ಏನ್ ತಂದನವ್ವ
ಅಂಡೆದಂತ ಕುಂಡೆ
ಬಿಟ್ಗಾಂಡ್ ಹಾಗೆ ಬಂದನವ್ವ
ಮಾವ್ಗೇನ್ ಊಟ
ಬೀಸಕಲ್ ಗೂಟ.....
-/ ಸುರೇಶ.ಆರ್.-