🐾ಭಾವನೆಗಳ ನೆರಳಲ್ಲಿ   (✍ ಭಾವನೆಗಳ ನೆರಳಲ್ಲಿ💕)
512 Followers · 170 Following

read more
Joined 4 July 2020


read more
Joined 4 July 2020

ಹುಚ್ಚು ಭಾವಗಳನ್ನು ಹರಡುವುದಕ್ಕಿಂತ, ಹಿಡಿದಿಡುವುದು ಹೆಚ್ಚು ಲಾಭಧಾಯಕ..

-



ಹೆಣ್ಣಿನ ದೇಹಕ್ಕೆ, ಮಣ್ಣಿನ ಮೋಹಕ್ಕೆ
ದುಡ್ಡಿನ ದಾಹಕ್ಕೆ ನಾನು ನೀನೇನ್ ಗುರು
ಇಡೀ ಪ್ರಪಂಚಾನೆ ಸೋತೋಗಿದೆ.
ಸತ್ವಕ್ಕ ಸೋತೋರನ್ನ ಸತ್ಯದ ಕಣ್ಣು
ತೆರೆದು ನೋಡೋದಕ್ಕು ಪ್ರಪಂಚದ
ಕಣ್ಣಿಗೆ ಶಕ್ತಿ ಸಾಕಾಗ್ತಿಲ್ಲ..!

-



ಪ್ರಪಂಚದ ಸುಖ ದುಃಖಗಳೇಲ್ಲ ನನ್ನನ್ನ
ನಾನು ಮರೆಯಲೆಂದಷ್ಟೇ ಬರುತ್ತವೇ.
ಅವುಗಳಿಂದ ದೂರ ನಿಂತು ಸ್ಪಂದಿಸುವ
ವ್ಯವಸ್ಥೆಯನ್ನು ನಮ್ಮೊಳಗೆಯೇ
ಸೃಷ್ಟಿಸಬೇಕು. ಸಮಾಜದಲ್ಲಿನ
ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತಿಹಾಕಲು
ಪಡಬೇಕಾದ ಪರಿಶ್ರಮವೇಷ್ಟೋ ಅಷ್ಟೇ
ಪರಿಶ್ರಮವನ್ನು ನಮ್ಮನ್ನು ನಾವು
ಕಾಣಲು ಕೂಡಾ ಪಡಬೇಕಾಗುತ್ತದೆ..!

-



ಆಗೊಮ್ಮೆ ಈಗೊಮ್ಮೆ ಬಂದು ಹೋಗೋ
ಈ ಮಂದ ನಗೆ ಕಂಡು ಭಾವಿಸಿದೆಯಾ?
ಪ್ರೀತಿ ಪ್ರತಿ ನನ್ನೊಳೇನಿಹುದೆಂದು.?
ನಾ ನುಡಿವೆ ಸದಾ ನಿನ್ನೊಳಗೆಯೇ
ನೀನಲ್ಲದೇನ್ನೊಳಗೆ ಇರುವುದೇನು?

-



ಭಾವಗಳ ನೆರಳಲ್ಲಿ ಬಸವಳಿದು ಕುಳಿತವಗೆ
ಜೀವನದ ಸೌಗಂಧ ಸಿಗುವದೆಲ್ಲಿ.?
ಮನಸು ಮಧುರತೆಯಿಂದ ತುಂಬದಿದ್ದರೆ
ಹೊರನಿಸರ್ಗ ಸೌಂದರ್ಯ ಕಾಣುವದೆಲ್ಲಿ.?

-



ಆಗೊಮ್ಮೆ ಈಗೊಮ್ಮೆ ಬಂದು ಹೋಗೋ
ಈ ಮಂದ ನಗೆ ಕಂಡು ಭಾವಿಸಿದೆಯಾ?
ನಿನಿಲ್ಲದೆ ನಾನು ಖುಷಿಯಾಗಿರುವೆನೆಂದು
ಆದರೆ ಹೃದಯ ಅತ್ತದ್ದು ಪ್ರೀತಿಗೆ ಮಾತ್ರ
ಗೊತ್ತು, ಆ ಪ್ರೀತಿಯಿಂದ ನೋಡುವ
ಮನಸ್ಸನ್ನೇಕೆ ತಡೆಯುತ್ತಿರುವೆ ಗೆಳತಿ.?

-



ನೊಂದವರು ಕೋಟಿ, ನೆನೆದವರು ಕೋಟಿ
ಬಿಕ್ಕಿ ಅತ್ತವರು ಕೋಟಿ, ಆಲಿಸಿದೊಂದು ತತ್ವವ
ಹೃದಯದಿ ನೆಟ್ಟವರ ನಾ ಕಾಣೆ ಕೃಷ್ಣಪ್ರಿಯ.!

-


Fetching 🐾ಭಾವನೆಗಳ ನೆರಳಲ್ಲಿ Quotes