Archana Kannantha   (✍️ಅರ್ಚನಾ ಯಳಬೇರು ❣️)
555 Followers · 210 Following

read more
Joined 7 October 2020


read more
Joined 7 October 2020
5 MAR AT 16:06

ಸ್ವಪ್ನಗಳ ಸಮ್ಮೋಹನ

ಮತ್ತೆ ಮತ್ತೆ ಕಣ್ಣ ಕಾಡುವ ಕನಸು
ಮ್ಲಾನವದನದ ಮೇಲೆ ಮೌನದ ಮುನಿಸು
ಕತ್ತಿನ ಸುತ್ತ ಕಗ್ಗಂಟಾದ ಜಂಜಾಟದ ನಂಟು
ಸಡಿಲಿಸಿದಷ್ಟು ಬಿಗಿದ ಗಂಟು

ಎತ್ತ ನೋಡಿದರತ್ತ ಬಂಧದ ಶೃಂಕಲೆ
ಕೈಗಲ್ಲ ಕೋಳ, ಭಾವಗಳ ಸಂಕೋಲೆ
ಪ್ರಸವವಾಗದ ಭರವಸೆಯು ಹೊತ್ತಿದೆ ಬಸಿರು
ಕಮರಿದ ಕನಸುಗಳಿಗಿಲ್ಲಿ ಕೊನೆ ಉಸಿರು

ಬಿರಿದ ಎದೆ ನೆಲದಲ್ಲಿ ಬಂಧಗಳ ಬಿತ್ತನೆ
ಹಸಿಯಾಗುವುದೋ ಹುಸಿಯಾಗುವುದೋ ನಾ ಕಾಣೆ
ಹಪ್ತಾ ವಸೂಲಿಗೆ ನಿಂತಂತಿದೆ ಬವಣೆ
ಕಂಡು ಕೇಳರಿಯದ ಹಣೆಬರಹಕ್ಕಾರು ಹೊಣೆ

ಅರ್ಚನಾ ಯಳಬೇರು ❣️






-


3 MAR AT 8:53

*ಕನಸುಗಳ ಕದನ*
ಕನಸಿನ ಕೌಮಾರ್ಯಕ್ಕೆ ಕರಿನೆರಳ ಕುಪ್ಪಸ
ತೊಟ್ಟ ಅಂದುಗೆಯಲಿ ತತ್ವಾರದ ಸಪ್ಪಳ
ಕಂಗಳ ಕುಪಿತದಲಿ ಕರಕಲಾದ ಕನಸು
ಜಾರುವ ಕಣ್ಪನಿಗಳಲಿ ಕುಹಕಗಳ ಹೊಳಪು

ಬಡಬಡಿಸುವ ಭಾವಗಳಿಗೆ ಬೇಸಿಗೆಯ ಬರ
ಬತ್ತಿದ ಎದೆ ಕೊಳದಲ್ಲಿ ಸುಡುಬಿಸಿಲಿನ ಝಳ
ಆವರಿಸದ ಆರುಮೆಯಲಿ ಆಪ್ತತೆಯ ಗಂಟು
ನರಳುವ ನೆನಹುಗಳಿಗೆ ಬಿಕ್ಕಳಿಕೆಯ ನಂಟು

ಸ್ವಪ್ನಗಳ ಸರಸದಲಿ ಅಂಕುರಿಸದ ಅರ್ತಿ
ಬಸಿರಾದ ಭಾವಗಳು ಮಸೆಯುತಿವೆ ಕತ್ತಿ
ಬಡವಾದ ಬಯಕೆಗಳಲಿ ನಡೆಯುತಿವೆ ಕುಸ್ತಿ
ಬೇಕು ಬೇಡಗಳ ನಡುವೆ ಮೋಜು ಮಸ್ತಿ

ಕನಸಿನ ಮೊಗದಲಿ ಹಸುಳೆಯ ಸೊಗಸು
ಬೊಚ್ಚು ಬಾಯಗಲಿಸಿ ನಗುವ ಸುಕನಸು
ನಕ್ಕು ನಲಿವ ಹಂಬಲದಿ ಎಳಸಾಗಿದೆ ಮುನಿಸು
ಮತ್ತದೇ ವಾಸ್ತವದ ಹಂಗಲಿ ದಂಗಾದ ಮನಸು
✍🏻 ಅರ್ಚನಾ ಯಳಬೇರು ❣️




-


2 MAR AT 7:48

*ಬಾ(ಗೋ)ಳು*
ಧರಿಸಿದ ಮುಖಗವಸಿನ
ಹಿಂದೆ ತುಟಿ ಕಚ್ಚಿದ ನಗು
ಎದೆಯ ಬದುವಲ್ಲೊಂದು
ಬೇರೂರದ ನಲಿವು
ಕಣ್ಣ ಕುಡಿನೋಟದೊಳು
ಕದಡಿದ ಭಾವ ಗೊಂಚಲು
ಗಿರಿದ ಹಲ್ಲುಗಳೆಡೆಯಲ್ಲಿ
ನುಂಗಲಾದ ಹಸಿ ಬಿಸಿ ನೋವು

ಮಾಡದ ಪಾಪದಲ್ಲಿ ತಾಪದ ಕೂಪ
ಪರಿತಪಿಸುವ ಅಖಾಡದಲ್ಲೇ ಪವಾಡ
ಮನದ ಮೂಲೆ ಮೂಲೆಗೂ
ಕಟ್ಟಿದ ತಡೆಗೋಡೆ
ಒಡೆದ ಹೃದಯದಲ್ಲಿ
ಗೂಡು ಕಟ್ಟಿದ ಗೆದ್ದಲುಗಳು
ಭರವಸೆಯ ಹುತ್ತದಲ್ಲಡಗಿ
ಬುಸುಗುಡುವ ಅಸಹನೆಯ ಹೆಡೆ

ಜನಿತ ಅಸುವಿನ ಜೇಷ್ಠತೆಗೆ ಕುತ್ತು
ಅಪರಾಧಕ್ಕಲ್ಲ, ಅಪವಾದಕ್ಕೂ ಅಲ್ಲ
ಅವ್ಯಾಹತವಾಗಿಹ ದಟ್ಟ ದಾರಿದ್ರ್ಯ
ನೀಚ ಭಾವಗಳ ಕಸರತ್ತು
ಮನದ ಕರಗಳಿಗೆ ತೊಡಿಸಿದ ಕೋಳ
ಕಾರಾಗೃಹದಲ್ಲಲ್ಲ ಸ್ವಗೃಹದಲ್ಲಿ
ತಪ್ಪಿಗಲ್ಲ, ಪಡೆದ ಹೆಣ್ಣು ಜನ್ಮಕ್ಕಾಗಿ
ಬಾಳೆಲ್ಲ ಗೋಳು ಉಂಡುಂಡು
ತೇಗಿದಷ್ಟು ಮುಗಿಯದ ಕೂಳು
✍🏻 ಅರ್ಚನಾ ಯಳಬೇರು ❣️








-


26 FEB AT 20:08

ನನ್ನಿರವ ಬಿಂಬಿಸಲು
ಬಳಸಿದ ಲೇಖನಿಯ ಬೆಸ್ತು
ಸುಸ್ತಾಗಿ ಕುಳಿತ ಶಾಯಿಯಲ್ಲಿ
ಅವಿತ ಶಾಯರಿಯ ಮಸಲತ್ತು
ಮತ್ತೆ ಮತ್ತೆ ಹಳಸಲಿನ ಹಂಗಲಿ
ಕುಸ್ತಿ ಪಟುಗಳಾದ ಪದಗಳ ಕಸರತ್ತು
ನೋಡಿಯೂ ನೋಡದಂತೆ
ಅವಿತ ಭಾವಗಳು ಒಳಗೊಳಗೆ ಸುಸ್ತು

ಖಾಲಿ ತುತ್ತಿಗೆ ಬಾಯಿಯೊಡ್ಡಿದ
ಮರಿಹಕ್ಕಿಯ ಹಸಿವಲ್ಲಿನ ಹಂಗು
ದಂಗಾದ ತಾಯೊಡಲು ಬೆಂದು
ಕರಕಲಾಗಿ ಉರಿವ ಕಲ್ಲಿದ್ದಲು
ಭಾವ ಕ್ಷುಧೆಗೆ ಬತ್ತಿದೆಯ ಬಂಧ
ಅನುಬಂಧ ಸಂಬಂಧಗಳ ಕಮಟು
ಘಾಟುಂಡ ನಾಸಿಕವನಪ್ಪಿ ಮುದ್ದಿಸುತ
ನಿತ್ಯ ನಿರವಿಸುವ ಅರ್ತಿಯ ಅಂಟು

ಭಾವಗಳ ಬಂಡಾಯದಲಿ
ನೇಣಿಗೆ ಗೋಣೋಡ್ಡಿದ ನನ್ನತನ
ಸದ್ದಿಲ್ಲದೆ ಹೂಡಿದ ಸಮರದಲಿ
ಕಗ್ಗೊಲೆಯಾಗಿ ಕುಸಿದ ಬಿದ್ದ ಕುಪಿತ
ಬರೆಸಿಕೊಂಡ ಪದಗಳ ಕಂಗಳಲಿ
ಸುರಿದ ಅಶ್ರುಧಾರೆಗಳ ಹಗೆತನ
ಕಾಡಿ ಕೊಲ್ಲುವ ಭಾವದಾಟಕೆ
ಬರೆದ ಸಾಲುಗಳ ನೀರವ ಮೌನ
✍🏻 ಅರ್ಚನಾ ಯಳಬೇರು ❣️


-


10 DEC 2024 AT 8:05

ಬೇಕೆಂಬ ಭೂತ
ಬೆಂಬಿಡದೆ ಕಾಡುವುದು
ಬೇಕುಗಳ ನಡುವೆ
ಬೇಡಿಕೆಗಳು ಬೆಳೆವುದು
ಬೇಡವೂ ಬೇಕಾಗಿ
ಬದುಕನ್ನು ನುಂಗುವುದು

ಬರಹ ಅಡಿಬರಹದಡಿ
👇🏻👇🏻👇🏻

-


8 DEC 2024 AT 20:44

ಅಹಮ್ಮಲ್ಲ... ಹಮ್ಮು... ???
ಅಲ್ಲ ಅಲ್ಲ ಹೆಮ್ಮೆ... !!!

ನಾನೆಂದರೆ ನನಗೇ ಹೆಮ್ಮೆ... !!!

ಹೆದರಬೇಡಿ... ಇದೇನೆಂದು... ??

ಬರಹ ಅಡಿಬರಹದಡಿ
👇🏻👇🏻👇🏻

-


4 DEC 2024 AT 8:08

ಬೈಗು ಬೆಳಗಾಗಬೇಕು...
ಬೆಳಕಾಗಬೇಕು...‌
ಹೇಗೆ.. ??? ಹೀಗೆ....!!!!

ಬರಹ ಅಡಿಬರಹದಡಿ
👇🏻👇🏻👇🏻

-


3 DEC 2024 AT 13:31

ಹಬ್ಬ... ಹಬ್ಬ... ಹಬ್ಬ...
ಹೀಗೊಂದು ಹಬ್ಬ!!???

ಕಣ್ಣರಳಿಸಿ, ಕಿವಿಯಗಲಿಸಿ
ಚಿತ್ತ ಏಕಾಗ್ರವಿರಿಸಿ
ಈ ಹಬ್ಬವನ್ನಾಲೈಸಿ

ಬರಹ ಅಡಿಬರಹದಡಿ
👇🏻👇🏻👇🏻

-


21 NOV 2024 AT 17:58

✨ಗಝಲ್✨
ಹರಿವ ಭಾವ ಗಂಗೆಯಲಿ ಕೊಚ್ಚಿ ಹೋಗುವ ಮುನ್ನ ಹಿಡಿದು ಬಿಡು ಮನವನು
ಸೋಕುವ ಕುಳಿರ್ಗಾಳಿಯ ಹಿತಕೆ ಮೈಒಡ್ಡುವ ಮುನ್ನ ಹಿಡಿದು ಬಿಡು ಮನವನು

ನರಳುತಿವೆ ಮೌನ ಶರಧಿಯಲಿ ಸದ್ದಿಲ್ಲದೆ ಅಪ್ಪಳಿಸುವ ಅಧರದುಲಿಗಳ ದಂಡು
ಮೈದಡವಿ ಮುದ್ದಿಸುವ ಪಾಶಗಳು ಬರ ಸೆಳೆವ ಮುನ್ನ ಹಿಡಿದು ಬಿಡು ಮನವನು

ಭವ್ಯ ಬಂಗಲೆಯಲ್ಲ ಶೃಂಕಲೆಯಿದು ಅರಿತು ಬೆರತು ಸಾಗಿದರೆ ಹಸನು ಬದುಕು
ಸರಸ ಸಲ್ಲಾಪಗಳ ಗುಡುಗು ಸಿಡಿಲಾಗಿ ಬಡಿವ ಮುನ್ನ ಹಿಡಿದು ಬಿಡು ಮನವನು

ಕೊನರುವ ಕಾಮನೆಗಳ ಕುಚೋದ್ಯಕೆ ಕಟಿಬದ್ಧರಾದರೆ ಕೆಡುಕು ತಪ್ಪಿದ್ದಲ್ಲ ನಿನಗೆ
ಕಂಗಳ ತೀಟೆಗೆ ಚಿತ್ತದ ಚಿತ್ತಾರ ಛಿದ್ರ ಆಗುವ ಮುನ್ನ ಹಿಡಿದು ಬಿಡು ಮನವನು

ಬಾಳ ಚಕ್ಕಡಿಯ ಸುಗಮ ಪಯಣಕೆ ಕೀಲಾಗಿ ಶ್ರೀಕಾರ ಬರೆದುಬಿಡು ಅರ್ಚನಾ
ತೊನೆದಾಡುವ ತನುವಿನ ತೃಷೆಯ ನೀಗಿಸುವ ಮುನ್ನ ಹಿಡಿದು ಬಿಡು ಮನವನು
✍🏻 ಅರ್ಚನಾ ಯಳಬೇರು ❣️




-


18 NOV 2024 AT 19:42

ಝಗಮಗಿಸುವ ಮೌನ ಚಿತ್ತಾರ
ಒಳಕೋಣೆಯೀಗ ರುದ್ರ ಭೂಮಿ
ಹೊರ ಮನೆಗೆ ಬಳಿದ ಸುಣ್ಣ ಬಣ್ಣ
ಕೊರಗಿನ ಕುಣಿಕೆಗೆ ಕೊರಳೊಡ್ಡಿದ ಮನ

ರೆಕ್ಕೆ ಬಲಿತ ಭಾವ ಭೃಂಗ
ಮುಗ್ಗರಿಸುತಿದೆ ಹಾರಲಾಗದೆ
ಕೆಣಕುವ ಕಂಗಳಿಗೆ ರಸದೌತಣ
ಅಣಕಿಗಿದು ಹೊಸ ಆವಿಷ್ಕಾರ

ಮನದ ಮುಕುರದಲ್ಲಿ ಬಿರುಕು
ಹರುಕು ಮುರುಕಿನಿಂದ ತೇಪೆ ಕಾರ್ಯ
ಅಂಟಿಸಿದಷ್ಟು ಎದ್ದು ಕಾಣುವ ಒಡಕು
ಕೆಡುಕಲ್ಲ ಕೆದಕಿ ಕೊಲ್ಲುವ ಪರಿ

ಅಂತರಂಗದ ಮೃದಂಗ
ಬಡಿದಷ್ಟು ಬತ್ತದ ಚಿಲುಮೆ
ಹರಿವಿಲ್ಲ ಹೊಳಪಿಲ್ಲ ನೆತ್ತರ ಝರಿ
ನಡುಮನೆಯಲ್ಲೊಂದು ನೆಡುತೋಪು

ಒಡೆದ ಹೃದಯದ ಚೂರು
ಹೆಕ್ಕುವ ನೆಪದಲ್ಲಿ ಬಿಕ್ಕುಗಳ ಬಿರುಸು
ಚುಚ್ಚುವ ಮುಳ್ಳುಗಳ ಬಿಗುಮಾನ
ಎದೆಯಂಗಳದಿ ಅರಳದೆ ನಿಂತ ಅರ್ತಿ
✍🏻 ಅರ್ಚನಾ ಯಳಬೇರು ❣️









-


Fetching Archana Kannantha Quotes