Ankita Koparde   (ಅಂಕಿತಾ ಕೋಪರ್ಡೆ)
1.4k Followers · 198 Following

read more
Joined 9 January 2020


read more
Joined 9 January 2020
6 JUN 2022 AT 19:48

ತುಂಬಾ ಹೇಳಬೇಕಿತ್ತು ಆದರೆ ಹೇಳೊಕೆ ಆಗಿಲ್ಲಾ
ಆಗ ಹೃದಯಕ್ಕೆ ಹಾಕಿದ ಬೀಗ ಈಗಲೂ ತೆಗೆಯೊಕೆ ಆಗಿಲ್ಲಾ !

-


3 MAY 2022 AT 10:59

ಅವರಿವರ ಹೂಳನ್ನು ಅಗೆಯುವ ಅವಶ್ಯಕತೆ ಏನಿತ್ತು
ನಿನ್ನೊಳಗೆ ನೀ ಇಣುಕಿ ನೋಡಿದರೆ ಸಾಕಾಗಿತ್ತು!

-


17 FEB 2022 AT 15:49

ಒಂದು ಘಟಿಕೆಯಲ್ಲಿನ ಜೀವನ
ತಟವಟಿಸದೆ ನಗುವೆಂಬ ಸುಂಕವ ಕಟ್ಟುತಾ
ಗಳಿಗೆಗಳನು ಇಕ್ಷುವಿನ ಸಿಹಿಯಂತೆ
ಸವಿದು ಬಿಡೋಣ...!

-


10 OCT 2021 AT 8:35

ಪರಿಸರ ಪ್ರೇಮಿಗೆ 💚❤
ಹುಟ್ಟು ಹಬ್ಬದ ಶುಭಾಶಯಗಳು

👇👇👇👇

-


14 APR 2021 AT 7:31

ಪುಸ್ತಕದಲ್ಲಿನ ಅಕ್ಷರಗಳನ್ನೇ ಬದುಕನ್ನಾಗಿಸಿಕೊಂಡ ಬಾಲಕ
ಸಮಾನತೆಯ ದೀಪ ಹಚ್ಚಲು ಓದುವುದೆ ಇವರ ಕಾಯಕ
ದೀನ ದಲಿತರಿಗೆ ಭರವಸೆಯ ಚಿಗುರಿಸಿದ ನಾಯಕ
ಜಗತ್ತೇ ಬೆರಗಾಗಿ ಕೊಂಡಾಡಿದ ಮಹಾನಾಯಕ

ನೋವು ಅವಮಾನಗಳ ಮೆಟ್ಟಿನಿಂತ ಧೀಮಂತ
ನೊಂದವರಿಗೆ ಸಾನುರಾಗ ತೊರಿಸಿ ಹೆಗಲಾದ ಹೃದಯಲಿ ಶ್ರೀಮಂತ
ದಲಿತ ವರ್ಗದವರ ಸಮಾನತೆಗಾಗಿ ದುಡಿದರು ಅನವರತ
ಇವರು ಧೈರ್ಯ ಸಾಹಸಗಳಿಂದ ಸಾಧಿಸಿದ ಸಾಧನೆ ಅನಂತ

ಉಳಿಪೆಟ್ಪೇ ಬದುಕುವುದಕ್ಕೆ ಛಲ ಅನ್ನುವುದಕ್ಕೆ ಇವರೆ ಸ್ಪೂರ್ತಿ
ಸಂವಿಧಾನದ ಶಿಲ್ಪಿಯನ್ನಾಗಿಸಿತು ಇವರ ಪುಸ್ತಕದ ಭಕ್ತಿ
ಜಾತಿ ಖಂಡನೆಯಿಂದ ಸೋತ ಮನಸ್ಥಿತಿಗಳಿಗೆ ಇವರೆ ಶಕ್ತಿ
ಏಕತೆಯ ಪ್ರಜ್ವಲಿಸಿ ಶೋಷಣೆಯಿಂದ ಕೊಡಿಸಿದರೂ ಮುಕ್ತಿ

-


21 FEB 2021 AT 19:20

ಅಲೆದಾಡಿ ಸುಮ್ಮನಾದ ಭಾವನೆಗಳಿಗೂ
ಅವನದೇ ಧ್ವನಿ ಕೇಳುವ ಆಸೆಯಂತೆ
ಹೃದಯಕೆ ಹಚ್ಚಿಕೊಳ್ಳುವಂತೆ ಮಾಡಿ
ಈಗ ಹೆಸರೇ ಇಲ್ಲದೆ ನಾಪತ್ತೆಯಾಗುವುದು
ಯಾವ ರೀತಿ ಸರಿ..??

-


9 NOV 2020 AT 13:36

ಕಡಲ ನಗರಿಯ ಸಾಧನೆಯ ಗಿರಿಮೆ
ಸಕಲ ಕೆಲಸಗಳ ಸಾವಧಾನದ ಅರಿಮೆ
ಕಷ್ಟ ಎಂದವರಿಗೆ ಭರವಸೆಯ ಪ್ರತಿಮೆ
ಸಾಂಗ್ಲಿಯಾನ ಹೆಚ್ಚಿಸಿತು ಚಿತ್ರರಂಗದ ಗರಿಮೆ


ಕಥೆಯಲ್ಲಿ ನೈಜತೆಯ ತೋರಿಸಿದ ಬರಹಗಾರ
ಪ್ರೀತಿಯ ಸತ್ಯತೆಯ ತಿಳಿಸಿದ ಪ್ರೇಮಗಾರ
ಕಲೆಯನ್ನು ಪೂಜಿಸಿ ಆರಾಧಿಸುವ ಕಲೆಗಾರ
ಅಭಿಮಾನಿಗಳ ಅಭಿಮಾನದ ಸೊಗಸುಗಾರ


ಕರಾಟೆಕಿಂಗ್ ಸೂಪರ್ ಸ್ಪಾರ್ ಆಟೋರಾಜ
ಕರುನಾಡು ಕಂಡ ಹೃದಯವಂತ ದಿಗ್ಗಜ
ಸರ್ವರನ್ನು ಪ್ರೀತಿಸುವ ಬಂಗಾರದ ಮನುಜ
ಕಲಾವಿದರಿಗೆ ಸ್ಪೂರ್ತಿಯ ಚಿಲುಮೆಯ ಅನುಜ

-


2 NOV 2020 AT 20:57

ಮೊದಲ ಮಳೆಯ
ಹನಿ ಮೊದಲಬಾರಿ
ನನ್ನ ಕೈ ಮೇಲೆ
ಬಿದ್ದಾಗ ಮೊದಲು
ನೆನಪಾಗುವುದು
ನಿನ್ನದೆ
ಮರಕಳಿಸುವ
ನೆನಪುಗಳು
ಸುಳಿದಾಡುವ ಕಾಟಗಳು
ಮೇಘದಾರೆಯಲಿ
ನನ್ನೊಂದಿಗೆ ನೀನು
ಮಿಂದು ಕ್ಷಣವ
ರಂಗೇರಿಸುವ ನಿನ್ನ
ಶೈಲಿಯೂ ಮೊದಲಿಗಿಂತ
ನಿನ್ನನ್ನು ಇನ್ನು
ಹೆಚ್ಟು ಪ್ರೀತಿ
ಮಾಡುವಂತೆ ಮಾಡಿದೆ.

-ಅಂಕಿತಾ ಕೋಪರ್ಡೆ

-


11 JUN 2020 AT 14:20

ಮಾವಿನ ಮರ ನಾಲ್ಕು ವರ್ಷ
ನಮ್ಮನ್ನು ಕಾಯಿಸಿ ಅಮೇಲೆ
ವರ್ಷಾನುಗಟ್ಟಲೆ ನಮಗೆ
ಸಿಹಿಯಾದ ಹಣ್ಣು ಕೊಡುತ್ತೆ
ಹಾಗೆ ಸಫಲತೆಯ ಹಾದಿಯಲ್ಲಿ
ನಾವು ಎಷ್ಟು ಕಷ್ಟದ ಸಂಘರ್ಷ
ಮಾಡ್ತಿವೋ ಅಷ್ಟೇ ಸಿಹಿಯಾದ
ಪರಿಣಾಮ ಹಾಗೂ ಫಲ ನಮ್ಮದಾಗುತ್ತೆ.

-


8 JUN 2020 AT 10:02

....

-


Fetching Ankita Koparde Quotes