QUOTES ON #ಕಲ್ಲುಹೃದಯ

#ಕಲ್ಲುಹೃದಯ quotes

Trending | Latest

ನನ್ನನ್ನು ಪೂರ್ತಿಯಾಗಿ ಬದಲಿಸಿದವಳು
ನಿಜಕ್ಕೂ ಹೂವಿನಂತಹ ಮನಸ್ಸುಳವಳು
ಮುಳ್ಳುಗಳಿಗೂ ಪ್ರತಿದಿನ ನಗಿಸುವವಳು
ಎನ್ನ ಕಲ್ಲು ಹೃದಯದಿ ಪ್ರೀತಿ ಚಿಗುರಿಸಿದವಳು

-



Lock Down
ಆದ ಹೃದಯದೊಳಗೆ
ಹೊಸ ಭಾವನೆಗಳು
No Incoming And
ಹಳೆ ಭಾವನೆಗಳು
No Outgoing
ಕಲ್ಲಾದ ಹೃದಯ!!

-


9 NOV 2021 AT 23:23

ಕಲ್ಲು ಕಲ್ಲೆನ್ನದಿರು ಹುಡುಗಿ; ದೇವರು ಕೂಡ ಕಲ್ಲೆ, ಕೈ ಮುಗಿವ ಜನರೊನ್ನೊಮ್ಮೆ ನೋಡಲ್ಲಿ. ಕಲ್ಲಾದ ನನ್ನ ಕೊಂಚ ಕೆತ್ತಿಬಿಡು, ಶಿಲೆಯಾಗಿ ನಿನ್ನೆದುರು ಬಂದುನಿಲ್ಲುವೆ ನಾನಿಂದು.

-



ಕಲ್ಲು ಹೃದಯ
**********
ಕಲ್ಲು ಹೃದಯದ ಜೊತೆ
ಹೇಳಬಾರದು ನಮ್ಮ ವ್ಯಥೆ
ಹೇಳಿದರೂ ಅದು ಕರಗಲ್ಲವಂತೆ
ಮತ್ತೆ ಯಾಕೆ ಆ ಹೃದಯದ ಚಿಂತೆ
ಆ ಹೃದಯದಿಂದ ದೂರವಿರುವುದೇ ನಮಗೆ ನೆಮ್ಮದಿಯಂತೆ
ಇದೇ ನಮ್ಮ ಜೀವನದ ನಿಜವಾದ ಕಥೆ.

-



ಕಲ್ಲು ಹೃದಯ ನಿನ್ನಿಂದಲೇ
ಹೂವಾಗಿ ಅರಳಿದೆ
ಮತ್ತೆ ಮರೆಯಾಗಿ ದೂರಸರಿದು
ಕಣ್ಣೀರ ಮಳೆಹನಿಗೆ ದಾರಿತೋರದಿರು
ಬಣ್ಣದ ಕನಸುಗಳ ಚೆಲ್ಲಿ
ಕಾಮನಬಿಲ್ಲಿನ ರಂಗುತುಂಬಿ
ಮರೆಯಾಗದಿರು ಮೋಡದೊಳಗೆ
ಇರಲಾರೆ ನಿನ್ನ ಕಾಣದೆ

-


7 NOV 2021 AT 15:36

ಕಲ್ಲು ಹೃದಯವೆಂದುಕೊಂಡೇ ನಿನ್ನ;ಅರ್ಥವಾಯಿತಿಂದು,ಕಲ್ಲಲ್ಲಿ ಕೆತ್ತಿದ ಹೆಸರೆಂದು ಅಳಿಸಲಾರದೆಂದು.!

-



ಆಟ ಆಡಿಸುವಳು ಕೊಡಲು ಅವಳ ದಿಲ್ಲು
ಏನೇ ಕೊಡಿಸಿದರು ಕಟ್ಟುವೆ ನಾನೇ ಬಿಲ್ಲು
ನನ್ನ ಹೃದಯ ಆಗುವುದು ಕಲ್ಲು
ಅವಳು ಕರೆದಾಗಲೆಲ್ಲ ನನ್ನ ಅಂಕಲ್ಲು..!!

-


11 OCT 2020 AT 10:30

ಆಹಾ..ಮರತ ಬಿಟ್ಟ್ಯಾ ನೀ ಸೋರಿಸಿದ್ದ ಜೊಲ್ಲು
ನೋಡಿದ್ರೆ ಸಾಕು ನುಲಿತಾ ಕಿಸಿತಿದ್ದೆ ಹಲ್ಲು
ತಿಂಗಳಿಗೊಂದು ಕೊಡಸ್ತಿದ್ದೆ ಹೊಸ ಸೆಲ್ಲು
ಬಿಲ್ಲ ಕೊಡಂತ ನಾ ಏನ ಗಂಟ ಬಿದ್ದಿರಲಿಲ್ಲ ಏ ಮಲ್ಲು
ಕೇಳು ನಾ ಯಾವತ್ತಿದ್ರೂ twinkle twinkle..

-


18 AUG 2019 AT 16:15

ಕಲ್ಲು ಹೃದಯ ನನ್ನದಲ್ಲ
ನಿನಗಾಗಿ ಕಾದ
ದಿನಗಳ ಮರೆತೆಯಲ್ಲ
ಜೀವ ಎರಡು ಒಂದೇ
ಪ್ರಾಣವಂತೆ ಇದ್ದೆವೆಲ್ಲ
ಕನಸುಗಳು ನಮ್ಮಿಬ್ಬರದೂ
ಒಂದೇಯಾಗಿದ್ದವು
ಕಾಣದ ಕೈಗಳೊಂದು
ನಮ್ಮಿಬ್ಬರ ದೂರ
ಮಾಡಿದ
ಕಳಂಕವನ್ನು
ಅಂಟಿಸಿಕೊಂಡಿದೆ

-


11 DEC 2020 AT 15:17

ಹೃದಯಹೀನರ ಹತ್ತಿರ
ಪ್ರೀತಿ ನಿರೀಕ್ಷೆ ಮಾಡುವುದು
ಮಳೆಯಲ್ಲಿ ಗಿಡಕ್ಕೆ ನೀರು
ಹಾಕುವ ಹಾಗೆ ರೀ

-