ಹದಿ ಹರೆಯದ ನಮ್ಮೊಲವಿಗೆ
ಕದ ತೆರೆದ ಪರಿ ಬಲು ಚೆನ್ನ
ಹದವಿದ್ದ ಪ್ರಾಯವದು
ಹಾದಿಗುಂಟ ಬೆನ್ನ ಹತ್ತೋ ಕೂಲಿ ನೀಡಿದ ಕಾಲವದು...-
ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣನ ನಾಡು ಕುಂದಾನಗರಿ ನನ್ನೂರು..ವಿಕ... read more
ನಗೆಯ ಬೀರಿ
ಮೊಗವ ತೋರಿ
ಸನಿಹ ಬಾ ಒಂದೇ ಸಾರಿ..
ಭಾವಗಳೆಲ್ಲ ಹೋಗದಿರಲಿ ಕೈ ಜಾರಿ
ನಿರಾಸೆಯ ಮೂಟೆ
ಎಷ್ಟೊಂತು ಹೊರಲಿ ಪ್ರತಿ ಬಾರಿ..
ನಿತ್ಯ ಉಪವಾಸ ಕಣ್ಣಿಗೆ
ಬೇತಾಳನಾಗಲಾರೆ ಬೆನ್ನಿಗೆ
ಬೀಡು ಬಿಟ್ಟಿರುವೆ ನನ್ನೊಳಗೆ ತಣ್ಣಗೆ..-
ಒಂದೇ ಬಾರಿ ಹೇಳಿ ಬಿಡು
ನೆಪಕ್ಕಂತೂ ಸಾಕಾಗಿದೆ
ಅಸೆಯಂತೂ ಬಯಲಾಗಿದೆ
ಹೃದಯಕ್ಕಂತೂ ನೀನೇ ತಾಗಿದೆ
ಎಲ್ಲ ಮೀರಿ, ಎಲ್ಲ ಮರೆಸೋ ಒಲವಾಗಿದೆ..-
ಎದುರಿದ್ದಾಗ ಅದೆನೋ ಮರೆವು
ಉದರಿಸಬೇಕೆಂಬ ಮಾತಿಗೆಲ್ಲ ಗರ ಬಡಿದು
ಸದರದಲ್ಲೇ ಮೂಕನಾಗುವೆ
ಗದರಿಸಬೇಡ ಹೊತ್ತು ಗೊತ್ತಿಲ್ಲದೆ ಮುದ್ದು ಮಾಡುವೆ-
ಹಳಾಹಳಿಗೆ ನೀ ಹುಳಿ ಹಿಂಡಬೇಡ
ಬಳಿ ಇರದಿದ್ದರೇನಂತೆ
ಉಳಿ ಪೆಟ್ಟು ತಿಂದ ಕಲ್ಲಂತಾದರೂ ಸರಿ
ಅಳಿಯದ ಒಲವಿಗೆ ಜೋತು ಬೀಳುವೆ..-
ಯಾಕಾದರೂ ಸಿಕ್ಕಿಕೊಂಡೆ ನಾ
ನಿನ್ನ ಪ್ರೇಮದ ಪರಿಗೆ
ಅಪರಚಿತನಾದೆ ನಾನೀಗ
ಫಲವತ್ತಾದ ಖುಷಿಯ ಪೈರಿಗೆ.-
ಒಲವು ಚಿಗುರಲಿ ಬಿಡಿ ಮರಳಿ
ಹಲವಿರಲಿ ಕಾರಣ ದೂರಾಗಲು
ನಲಿಯುತಲಿರಲಿ ಮನವು ಹಗುರಾಗಲು
ಬೇಲಿ ತೆರೆಯಲಿ ,ಒಲವೊಂದೆ ಬಾಳ್ವೆಗೆ ಹೆಗಲಾಗಲಿ..-
ಸೆಪ್ಟೆಂಬರ್ 5 1940 ರಂದು ಬಿಜ್ಜರಗಿ
ಗ್ರಾಮದೊಳು ಉದಯವಾಯಿತೊಂದು ನಕ್ಷತ್ರ
ಭೂಮಂಡಲದ ಅಜ್ಞಾನ ತೊಲಗಿಸಿ,
ಜ್ಞಾನ ಉಣಬಡಿಸಲು ಭಾವ್ಯಕ್ಯತೆ ಸಾರಲು,.
ಅಡಿ ಬರಹ
👇👇👇
-
ಗುಬ್ಬಿಯ ಮರಿಯೊಂದು ಕಂಡು
ಈಗೀಗ ನಿಬ್ಬೆರಗಾಗುತಿರುವೆವು
ದಿಬ್ಬದ ಮೇಲೊಂದು ಗಿಡವುಂಟು
ಹೆಬ್ಬಾವಿಯೂ ಅಲ್ಲಲ್ಲಿ ಇರುವುದುಂಟು
ಎತ್ತಲೋ ಕಣ್ಮರೆಯಾಗಿ ಕಳಚಿತು
ನಮ್ಮ ಅವರ ನಂಟು
"ಗುಬ್ಬಿಯೆಂದರೆ ಬಿಡಿಸುವಂತಾಗಿದೆ ಚಿತ್ರ
ಗತಕಾಲವಾಯಿತಲ್ಲ "ಗೂಡು" ಎಂತ ವಿಚಿತ್ರ..
-
ರಭಸದಿ ಸಾಗಿದೆ ಚಡಪಡಿಕೆ
ಇನ್ನೆಲ್ಲಿಂದ ಬರಬೇಕು ತೂಕಡಿಕೆ
ರಸವತ್ತಾದ ಘಳಿಗೆಯ ಮಳಿಗೆಯಲಿ
ಬಿಸಿಯುಸಿರಿನ ಅಗಳಿಯು
ತನವುಗಳೆರಡರನು ತೋಳ್ಬಾಗಿಲೊಳಗೆ
ಶೃಂಗಾರದಿ ಭದ್ರಪಡಿಸಿದೆ
ಮುಖ ನೋಡಿ ಉಕ್ಕುತಲಿದ್ದ
ಶಯನ ಕೋಣೆಯನ್ನಾವರಿಸಿದ್ದ
ನಾಚಿಕೆಯ ಮಡಿಕೆ ಸನ್ನೆಯಲೇ ಛಿದ್ರವಾಗಿದೆ..
-