ಅನಿಸುವುದು ಹೀಗೆ ತಲೆಯೇತ್ತಿ ನೋಡಿದಾಗ ನೀನೆಷ್ಟು ವಿಸ್ಮಯಕಾರಿಯೆಂದು, ಮತ್ತಾಗಲೇ ಹೀಗೂ ಅನಿಸಿದ್ದು, ಇರುಳಲ್ಲಿ ನೀನೆಷ್ಟು ವಿಕೃತರೂಪವೆಂದು ದೂರದಿ ನಿಂತು ನೋಡಿದಾಗ..
ನಾನಂದುಕೊಂಡದ್ದು ಸರಿಯೋ ನೀನಿರುವುದೇ ಸುಳ್ಳೋ
ತಿಳಿಯದೆ ಕೇಳದಾಯಿತಾ ಮನದ ಗೋಳು..-
The powerful weapon in all time 'Smile'✨
#ಕಾವೇರಿ_ಸಾಲು
#ಕಾವೇರಿ
❤️ಕನ... read more
ಮುಂಜಾನೆ ಅರಳುವ ಸಂತೋಷದೊಂದಿಗೆ
ಸಂಜೆ ಬಾಡುವೆನೆಂಬ ಬೇಸರವ ಮರೆಚಿ
ಮೊಗ್ಗಾಗಿ ಹಿಗ್ಗುತ್ತಿರುವ ನಿನ್ನ ಸೊಗಸೆ ಹೊಸದು..-
ನೆನಪಿನ ಪುಟಗಳನ್ನು ಮೇಲಕುಹಾಕಿಸುತ್ತಾ ರಂಗೇರಿಸುತ್ತಿರುವ ನೆನಪಿನ ನಾಯಕ ನೀನು....
ಕನಸುಗಳ ಕಟ್ಟಿಸಿಟ್ಟ ರಾಶಿಗಳಲ್ಲಿ ಕನಸಿಗು ಜೀವ ತುಂಬಿ ಜಗಜಾಹೀರಾತು ಮಾಡಿ ಇಂದಿಗೂ ಜೀವಂತ ನೀನು....
ಜೊತೆಯಲಿಲ್ಲ,ಕನಸಲ್ಲಿ ಬರುವುದು ನಿಲ್ಲಿಸಿಲ್ಲ,
ಕಣ್ಣಿಗೆ ಕಾಣಿಸಿಲ್ಲ,ಕಣ್ಣಲ್ಲೇ ತುಂಬಿದೆಯಲ್ಲ,
ಮನಸ್ಸಲ್ಲಿ ಇನ್ನೂ ಮಗುವಿನ ನಗುವಾಗಿ ಉಳಿದೆ ನೀನು-
ಹೇಳಿಕೊಂಡುಬಿಡಲೇ ಹೀಗೊಮ್ಮೆ ನನ್ನೆಲ್ಲ ಅಳಿದುಳಿದ ಭಾವನೆಗಳ ನಿನ್ಮುಂದೆ,,,,ದೂರಿದರು ಸರಿಯೇ ಬೇಡವೆಂದು ಬಿಸಾಡಿದರು ಸರಿಯೇ,ಪಡೆದೆ ತಿರುತ್ತೇನೆ ಎಂಬ ಆಸೆಯ ಹಂಬಲತೆಗಿಂತ ಕಳೆದು ಕೊಂಡರೇನು ಮಾಡಲಿ ಅನ್ನುವ ಅಭದ್ರತೆಯ ಅತಿಯಾದ ಭಯವೇ ಹೆಚ್ಚಾಗಿದೆ...ಬಂದೋಮ್ಮೆ ಕೇಳಿಬಿಡು ಮನವೇ ನನ್ಮದ ಮಿಡಿತವ ನೀನೊಮ್ಮೆ ನಿನಗಾಗಿ ಹಪಹಪಿಸುತ್ತಿರುವ ಈ ಮನದ ಗೋಗರೆತವ....
-
ಹೃದಯವೆಂಬ ಹಣತೆಯಲ್ಲಿ ಪ್ರೀತಿಯೆಂಬ ಎಣ್ಣೆ ಸೇರಿಸಿ ನಂಬಿಕೆಯೆಂಬ ಬತ್ತಿಜೊತೆಗೆ ಪ್ರಜ್ವಲಿಸುವ ಬೆಳಕಿಗೆ ಕಾರಣವಾಗುಬಾ ಒಲವ ದೀಪವೇ❤️❤️
-
ಕಾಣದ ಕನಸ್ಸೊಂದು ಕಣ್ಮುಂದೆ ಬಂದಂತಿದೆ,
ಕಾಣುವ ಕಣ್ಣಿಗೂ ಪೊರೆಯೊಂದು ಸುತ್ತಿಕೊಂಡಂತಿದೆ,
ಪೊರೆಯ ಬಿಡಿಸಿಕೊಂಡರೆ ನೋವಾಗುವ ಭಯ ಬಿಡಿಸಿಕೊಳ್ಳದಿದ್ದರೆ ಕನಸೇ ಕಾಣದ ಭಯ
ಭಯಕ್ಕೂ ಭಯವುಂಟು ಮಾಡುವ ಭಯ ಆವರಿಸಿದಾಗ
ಭಯದ ಹಿಂದೆಯೂ ಅದೊಂದು ತಿಳಿಯದ ಭಾವ ಕಾಡುವುದೇ..?
-
ಏನು ಇಲ್ಲದೆ ಬಡವರು ಆಗಲ್ಲ,ಎಲ್ಲ ಇದ್ದು ಶ್ರೀಮಂತರು ಅನಿಸಿಕೊಳ್ಳಲ್ಲ,ಏನು ಇಲ್ಲದೆ ಎಲ್ಲ ಇದೆ ಅನ್ನೋತರ,ಎಲ್ಲ ಇದ್ದು ಏನು ಇಲ್ಲ ಅನ್ನೋತರ ಇರ್ಬೇಕು.
ಇದೆ ಇಲ್ಲ ಅನ್ನುವುದರ ನಡುವೆ ಏನಿದೆ ಏನಿಲ್ಲ ಅನ್ನುವುದರ ಹುಡುಕಾಟವಾಗಬೇಕು ಇಲ್ಲವೇ ಇದೆ ಇಲ್ಲ ಅನ್ನುವುದನ್ನೇ ಮರೆತುಬಿಡಬೇಕು.!-
ಹಚ್ಚ ಹಸಿರಿನ ಸ್ವಚ್ಛ ವಾತಾವರಣದ ಹಾದಿಯ ಮಧ್ಯದಲ್ಲಿ ಕೈ ಹಿಡಿದು ಜೊತೆಜೊತೆಗೆ ನಡೆಯುತ್ತ ಮನಬಿಚ್ಚಿ ಮಾತನಾಡಬೇಕಿದೆ.
-