ಲವರ್ಸ್ ಗಳಿಗಾಗಿಯೇ ಇರುವುದು ಪ್ರೇಮಿಗಳ ದಿನ
ಲವರ್ ಇಲ್ಲದೆ ಕಳೆದೆಹೋಯಿತು ನನ್ನ ಜೀವನ
ಈಗ ಬರೆದರೇನು ಪ್ರಯೋಜನ ಪ್ರೀತಿ ಪ್ರೇಮ ಕವನ
ಮದುವೆಯಾದ ಮೇಲೆ ಜೀವನ ವಿಕೆಟ್ ಪತನ..!!-
ಅವನ ಮಾಜಿ ಪ್ರೇಯಸಿ ನನಗಾದಳು ರೂಪಸಿ
ಅವಳಿಗೆ ಸಮಯ ಕೊಡುತ್ತಿದ್ದೆ ದಿನವಿಡೀ ಹುಚ್ಚನಂತೆ ಪ್ರೀತಿಸಿ
ನನ್ನ ಪರ್ಸ್ ಎಲ್ಲಾ ಖಾಲಿ ಅವಳಿಗೆ ಕೇಳಿದ್ದೆಲ್ಲ ಕೊಡಿಸಿ
ಕೊನೆಗೆ ನನಗೂ ಕೈಕೊಟ್ಟು ಹೋದಳು ನುಣ್ಣಗೆ ಬೋಳಿಸಿ..!!-
ಅವಳದೇನು ಇರಲಿಲ್ಲ ತೆಳು ಮೈಕಟ್ಟಿನ ಫಿಗರು
ಆದರೂ ಕಮ್ಮಿ ಏನಿಲ್ಲ ಅವಳಲ್ಲಿದ್ದ ಖದರು
ಧೈರ್ಯ ಮಾಡಿ ಕೊಟ್ಟೆ ಅವಳಿಗೊಂದು ಫ್ಲವರು
ಫ್ಲವರ್ ಇಡಿಯಬೇಕಿದ್ದ ಕೈಯಲ್ಲಿ ಹಿಡಿದಳು ಸ್ಲಿಪ್ಪರು..!!-
ದಿನಾ ರಾತ್ರಿ ಏಕೋ ಏನೋ ಅವಳದ್ದೇ ಫೀವರ್
ಮರುದಿನವೇ ಕೊಡಲು ಹೋದೆ ಅವಳಿಗೊಂದು ಕೆಂಪು ಫ್ಲವರ್
ಆದರೆ ಅಷ್ಟರಲ್ಲಿ ಅವಳಾಗಿದ್ದಳು ಬೇರೆಯವನ ಲವರ್
ಅಂದು ರಾತ್ರಿಯೇ ಸುಟ್ಟಿತು ನನ್ನ ಲಿವರ್..!!-
ಅವಳು ಒಪ್ಪಲಿಲ್ಲ ಏಕೋ ಏನೋ ನನ್ನ ಪ್ರಪೋಸು
ಕಟ್ಟರೂ ಸಹ ಅವಳ ಕೈಗೆ ಕೆಂಪು ರೋಸು
ಬೇಕಂತಲೇ ಅವಳೆದುರು ಕೊಡುತ್ತಿದ್ದೆ ನಾನಾ ರೀತಿಯ ಪೋಸು
ಅವಳು ಹತ್ತಿರ ಬಂದು ಅಂದಳು "ಹೋಗೋ ಲೂಸು"..!!-
ಕಣ್ಣಾಲಿಯಲಿ ನೀ ಸುಡಲು
ಕಡು ಮೌನ ವಹಿಸಿದೆ ಕಡಲು
ರವಾನಿಸಿದೆ ಅಲೆಗಳು ಸಂದೇಶ
ಕೊಡಬಾರದೇ ಮುತ್ತಿನ ಆದೇಶ
ಮರಳುಗಾಡಿನ ಒಲವ ನೆನಪು
ಮರುಳಾದೆ ಕಂಡು ನಿನ್ನ ಒನಪು
ನಡು ಹಿಡಿದಿರುವೆ ನಲುಗದಿರು
ಬಿಸಿಉಸಿರ ಸೋಕಿಸುವೆ ಕರಗದಿರು
ನಾಚಿದ ಕೆನ್ನೆಯ ಮೇಲೆ
ನಾಟಿದೆ ತುಟಿಗಳ ಲೀಲೆ
ಕಾಮನೆಗಳ ಕಾಮನಬಿಲ್ಲು
ಕಾದಿವೆ ಕನಸುಗಳು ಕಾದಿರುಳಲ್ಲು..!!-
ಕಳೆದೋಗುವೆ ಚೆಲುವೆ ನಿನ್ನಯ ಒಲವಲಿ
ಕರಗೋಗುವೆ ಮನವೇ ನಿನ್ನಯ ನಗುವಲಿ
ಕೆನ್ನೆಯ ಕದವನು ತುಸು ತಟ್ಟಲೆ ಹೇಳು
ಸನ್ನೆಯ ಸರಸವನು ವಿವರಿಸುವೆ ಕೇಳು
ಎದೆಯೂರಿನಲಿ ನಿನ್ನದೇ ಚಿತ್ತಾರದ ಕಲರವ
ಬಿಗಿದಪ್ಪಿದರೆ ಬಿಸಿ ಉಸಿರಿನ ಸಂಭವ..!!-
ಅದರಗಳು ಅಮಲೇರಿದೆ
ಮನಸುಗಳ ಮದವೇರಿದೆ
ಸೋಕಿದೆ ಬಿಸಿ ಉಸಿರಿನ ಶಾಖ
ಹೆಚ್ಚಾಗಿದೆ ತವಕದ ತೂಕ
ತೋಳಿನ ಅರಮನೆಯಲ್ಲಿ
ಭಾವನೆಗಳ ಮಡಿಲಲ್ಲಿ
ಸೆರೆಯಾಗಿರುವೆ ನಿನ್ನೊಲವಿಗೆ
ಸಿಹಿ ಮುತ್ತಿನ ಮನವಿಗೆ
ಕಾಡದಿರು ಕಾಯಿಸದೇ
ಸುಖಿಸು ನೋಯಿಸದೆ
ತುಟಿಗಳ ಹೀರುತ
ನಿನ್ನೊಳಗೆ ಸೇರುತ
ಸಂಪೂರ್ಣ ಶಾಮೀಲು
ಅನುರಾಗದ ಅಮಲು..!!-
ಸಂಜೆ ಮೇಲೆ ಹೋದಳು ನನ್ನಾಕೆ ಎಳ್ಳು ಬೀರಲು
ನಾನು ಸಹ ಹೋದೆ ಬಿಯರ್ ಬಾಟಲಿ ತರಲು
ಕುಡಿದು ಏನೂ ಗೊತ್ತಿಲ್ಲದಂತೆ ನಾ ಸುಮ್ಮನೆ ನಿಂತಿರಲು
ಹಿಡಿದಳು ಕೋಲು ನನಗೆ ಎರಡೇಟು ಬಾರಿಸಲು..!!-
ಹೊಸ ವರ್ಷಕ್ಕೆ ಹೊಸ ಹಬ್ಬ ಬಂದರೂ ನಾನಿರುವೆ ಇನ್ನು ಸಿಂಗಲ್ಲು
ಈ ವರ್ಷನು ಸಹ ಆಗುವ ಹಾಗೆ ಕಾಣುತ್ತಿಲ್ಲ ಅವಳು ಮಿಂಗಲ್ಲು
ಏನೇ ಹೇಳಿ ಅದೃಷ್ಟನೆ ಇಲ್ಲ ನನಗೆ ತಿನ್ನಲು ಸಿಹಿ ಪೊಂಗಲ್ಲು
ಚಿಕ್ಕ ಮಕ್ಕಳೆಲ್ಲ ಕರೆಯಲು ಶುರು ಮಾಡಿದ್ದಾರೆ ನನ್ನ ಅಂಕಲ್ಲು..!!-