ಮುದ್ದು💕 ಖುಷಿ   (ಮುಗ್ಧ ಮನಸ್ಸು💝)
1.4k Followers · 24 Following

ಈ ಜೀವ ಇರುವವರೆಗೂ ನಿನ್ನ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ..😍
Joined 9 February 2019


ಈ ಜೀವ ಇರುವವರೆಗೂ ನಿನ್ನ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ..😍
Joined 9 February 2019

ಉಸಿರಾಡೋದಕ್ಕೂ ಕಷ್ಟ
ಅಂತ ಅನ್ನಿಸುವ ಕ್ಷಣದಲ್ಲಿ
ಕೂಡ ಸುಧಾರಿಸಿಕೊಂಡು
ಹೇಯ್ ನಾನು ಚೆನ್ನಾಗಿ ಇದೀನಿ ಕೋತಿ
ಎನ್ನುತ್ತಲೇ ಮುಗುಳ್ನಕ್ಕು ಮಾತಾಡೋದು
ಇದೆಯಲ್ವ ಅದು ನಾವು ಪ್ರಾಣಕ್ಕಿಂತ ಹೆಚ್ಚಾಗಿ
ಪ್ರೀತ್ಸೋರ ಮುಂದೆ ಅಷ್ಟೇ ಸಾಧ್ಯ!!

-



ಕಣ್ಣು ಮಿಟುಕಿಸದೆ ಅನುರಾಗ ಭಾವದಿ
ನೋಡುವೆನು ನಾನು ನಿನ್ನನೇ
ಅರೇ ಕ್ಷಣದಲ್ಲಿ ಕಣ್ಣು ಹೊಡೆದು
ಹೃದಯದ ಬಡಿತ ಜೋರಾಗುವಂತೆ
ಮಾಡಿ ಸೆಳೆದೆ ನೀ ಒಮ್ಮೆಲೇ ನನ್ನನೇ!!❤️

-



ಸನಿಹಕ್ಕೆ ಅತಿ ಸನಿಹವೇ
ಅಂತೇನಿಸಿದರೂ ಸಹ
ದೂರಕ್ಕೆ ಅಷ್ಟೇ ದೂರವೇ
ನಮ್ಮಿಬ್ಬರ ಸ್ನೇಹ
ಆದರೂ ನೀನು ತೋರಿಸುವ
ಪ್ರೀತಿಗೆ ಕೊನೆಯೆಂಬುದಿಲ್ಲ
ಕೊನೆಯಿಲ್ಲದ ಪ್ರೀತಿ ನನಗೆ ಸಿಕ್ಕಿರುವಾಗ
ನಾನೆಂದಿಗೂ ಕಳೆದುಕೊಳ್ಳಲು
ಇಷ್ಟ ಪಡುವುದಿಲ್ಲ!!

-



ಏನನ್ನೋ ಹೇಳಬೇಕೆಂದು
ಬಂದವಳು ನಾನು
ಹೇಳಲು ಅವಕಾಶ ಒಂದನ್ನೂ
ನೀಡದೆ ದೂರವೇ ಉಳಿದ ಬೆಳದಿಂಗಳು ನೀನು
ಇನ್ನೇನು ಹೇಳಲಿ ಕೇಳಲು
ನೀನೇ ತಯಾರಿರದಮೇಲೆ
ಆದರೂ ಹೇಳಬಯಸಿ ಸುರಿಸಿದೆ ಒಮ್ಮೆಲೇ
ಪ್ರೀತಿಯಿಂದ ಈ ಪದಗಳ ಹೂಮಾಲೆ!!

-



ಸಧ್ಯದ ಈ ಸಮಯದಲ್ಲಿ
ನಿನ್ನನ್ನೂ ನೋಡೋಕಾಗ್ತಿಲ್ಲ
ಮನದುಂಬಿ ನಿನ್ನ ಜೊತೆ
ಮಾತಾಡೋಕಾಗ್ತಿಲ್ಲ
ಆದ್ರೂ ಕೂಡಾ ನಿನ್ನ ಮೇಲೆ
ಬೆಟ್ಟದಷ್ಟು ಪ್ರೀತಿ ಇಟ್ಟಿದೀನಿ!!

-



ನಿನ್ನ ಮೇಲೆ ಮೂಡಿರುವ ಈ
ಮಧುರ ಭಾವನೆ ಸ್ನೇಹಾನೋ ಪ್ರೀತಿನೋ
ನಂಗೊತ್ತಿಲ್ಲ ಆದರೆ ನನ್ನ ಹೃದಯ ಮಾತ್ರ
ನಿನ್ನ ಹೃದಯದ ಪ್ರತಿ ಬಡಿತವನ್ನೂ
ಪ್ರತಿ ಕ್ಷಣವೂ ಆಲಿಸುತ್ತಲೇ ಇರಬೇಕು
ಅಂತ ಬಯಸ್ತಿದೆ ಇದಕ್ಕೆ ಉತ್ತರ ನೀನೇ ಕೊಡಬೇಕು
Because I'm in love with you.....
ನೇರವಾಗಿ ಹೇಳೋಕೆ ನಿನ್ನ ಮುಂದೆ
ಬಂದು ನಿಲ್ಲೋಕೆ ಧೈರ್ಯ ಸಾಲದೆ
ಒಂದೇ ಉಸಿರಿನ ಏರಿಳಿತದಲ್ಲೇ ನನ್ನ ಮನಸ್ಸಿನ
ಮಾತುಗಳನ್ನು ಹೀಗೇ ಹೇಳುತ್ತಿರುವೆ
I love you do you love me..😍

-



ನನ್ನ ಪ್ರಾಣಕ್ಕಿಂತ ಹೆಚ್ಚಾಗಿ
ನಿನ್ನನ್ನು ಪ್ರೀತ್ಸಿದೀನಿ
ಪ್ರೀತಿಸ್ತಾನೇ ಇರ್ತೀನಿ ಯಾಕಂದ್ರೆ
ಪ್ರೀತಿ ಅನ್ನೋದು ಒಂದೇ
ಸಾರಿ ಹುಟ್ಟೋದು!!
i love you forever...❤️

-



ಹರಿದ ಬಟ್ಟೆಗೆ ಇನ್ನೊಂದು
ತುಣುಕು ಬಟ್ಟೆ ಸೇರಿಸಿ ಹೊಸದಾಗಿ
ನವೀಕರಣ ಮಾಡಬಹುದೇನೋ
ಆದರೆ ಈ ಪ್ರೀತಿಯಿಂದ
ಮುರಿದ ಮನಸನ್ನು ನವೀಕರಿಸಿ
ಮತ್ತೇ ಮೊದಲಿನಂತೆ ಮಾಡೋದು
ಅಸಾಧ್ಯ!!

-



ಅತಿಯಾದ ನೋವನ್ನೂ ತಡೆದುಕೊಳ್ಳುವ
ಸಾಮರ್ಥ್ಯ ಕಡಿಮೆಯಾಗುತ್ತಿದೆ!!😔

-



ಸ್ನೇಹಿತೆ..........❤️

ನೂರು ಜನ ಸ್ನೇಹಿತರ ಪರಿಚಯವಂತೂ
ನನಗಿಲ್ಲ ಯಾಕಂದ್ರೆ ನಂಬಿಕೆ ಕೊರತೆ ಜಾಸ್ತಿ ಇತ್ತು
ಆದರೆ ನಿನ್ನಂಥ "ಅಪ್ಪಟ ಅಪರಂಜಿ" ಸ್ನೇಹಿತೆಯ
ಹೊರತು ಇನ್ನಾರು ನಂಗೇ ಬೇಕಿರಲಿಲ್ಲ ಯಾಕಂದ್ರೆ
ನಮ್ಮಿಬ್ಬರ ನಡುವೆ ರಕ್ತ ಸಂಬಂಧಕ್ಕೂ ಮಿಗಿಲಾದ ಪ್ರೀತಿ ವಾತ್ಸಲ್ಯ ಮಮತೆಯೇ ಬೆಳಕಾಗಿತ್ತು!!

ಐ ಲವ್ ಯು ಕಣೋ ಸುಬ್ಬು...🥰

-


Fetching ಮುದ್ದು💕 ಖುಷಿ Quotes