ಹೇ ಶಂಕರಾ ಎಲ್ಲರ ಮನದಾಸೆಗಳು ನೆರವೇರಿಸು,
ಬೇಡಿದ ಪ್ರತಿಯೊಂದು ವರವನ್ನು ಈಡೇರಿಸು.
ಮೂರೊತ್ತು ತನ್ನವರ ಜೊತೆ ಸುಖವಾಗಿ ನಗು ನಗುತಾ ಬಾಳುವ ಜೀವನ ಕರುಣಿಸು.-
ತುಳಿದಾಡಿದರು
ಕುಣಿದಾಡಿದರು
ಭಾರ ಹೊತ್ತ ತಾಯಿ ನಿನಗೆ ಕೊಪವಿಲ್ಲವೇ
ಭೂ ತಾಯಿ ನಿನ್ನ ಸಹನೆಯ ಕಾರುಣಿಸಿ-
ಜಡೆಯಲಿರುವ ಗಂಗೆಯಾ
ಭೂವಿಗೆ ಬಿಟ್ಟು ಮರೆತು
ಹೋದೆಯಾ ಶಿವ
ನಿನ್ನ ಕಣ್ಣಿಗೆ ಕಾಣಲಾರವೇ
ತೇಲಾಡುತ್ತಿರುವ ಶವ
( ಕ್ಯಾಪ್ಟನ್ ನಲ್ಲಿ ಓದಿರಿ )
-
ವಿಭೂತಿಯಗಲ ಭಂಡಾರವ
ಹಣೆಗೊತ್ತಿ ಬೇಡುವೇನಯ್ಯಾ
ಭಂಡಾರದೊಡೆಯ ಭಕ್ತರ
ಬೇಡಿಕೆಯನ್ನಾಲಿಸಿ ಹಾರೈಸೋ
ಓ ಕರುಣಾಮಯ,,-
ಮನ
ಮಿಡಿಯುತ್ತಿದೆ
ಮಮ್ಮಲ
ಮರುಗುತ್ತಿದೆ
ಮಡಿದ
ಮಡದಿಯ
ಮೇಲೆ
ಕನಿಕರಿಸುವ
ಕಣ್ಣಿಗೆ
ಕೃಚ್ಛ್ರವಾಯಿತೆ
ಕೃತಿಸುವುದು
ಕಣ್ಮರೆಯಾದವಳ
ಕರುಣಿಸಲು
ನನ್ನಾಕೆಯಾ!
_ಶೃತಿ ಶೈವ
-
ಇಂದೆಕೋ ವಿಚಿತ್ರ ತಳಮಳ ಮನಸ್ಸಲ್ಲಿ
ನೆಮ್ಮದಿಗೆ ಬರ ಬಂದಿದೆ ಬದುಕಲ್ಲಿ
ಶಾಂತಿಗಾಗಿ ನಿನ್ನ ಸನ್ನಿದಾನಕ್ಕೆ ಬಂದಿರುವೆ ನಾನಿಲ್ಲಿ
ಹರಸಿ,ಹಾರೈಸು ನೀ ನನ್ನಲ್ಲಿ
-
ಅವಳು ಕೇಳಿದ್ದು ಕಡಲಾಳದ
ಒಂದು ಮುತ್ತು,
ರಸಿಕನಾದ ನಾನು ಕರುಣಿಸಿದ್ದು
ಕೆನ್ನೆಯ ಮೇಲೊಂದು
ಸಿಹಿ ಮುತ್ತು-
ಕರುಣಿಸು ನಿನ್ನೊಲವ
ಕರುಣಿಸು ಒಲವನು ಪರಮಾತ್ಮ
ಕಾದಿಹೆನು ನಿನ್ನೋಲವಿಗಾಗೆ
ತುಂಗೆಯ ದಡದಲೆ ಕೂತಿಹೆನು
ಗೋಪಾಲನ ಬರುವಿಕೆಗಾಗೆ..
ಖಾಲಿ ಮನದ ಮಡಿಕೆ ನಾನು
ನಿನ್ನೋಲವ ಕ್ಷೀರವು ತುಂಬದೆ?
ಮೊಳೆತ ಬಯಕೆಯೊಂದೆ ದೇವ
ಕೈ ಹಿಡಿದೆನ್ನ ಬದುಕ ನೆಡೆಸದೆ.?
ಈ ಸಂಜೆ ಹಿತವಾಗಿದೆ ಬಾ ಬೇಗ
ನಲ್ಲೆಯೊಡನೆ ಮೆಲ್ಲನಾಡಲು
ತಂಗಾಳಿ ಬೀಸಿ ಹೂವುದುರಿವೆ
ನಿನ್ನ ಹಾದಿಗೆ ಸ್ವಾಗತ ಕೋರಲು..
ಹೇ ದೇವಾ ನವನೀತ ಚೋರನೆ
ಅಂತರಂಗದ ಪರಮಾತ್ಮನೆ
ಅಷ್ಟು ಪ್ರೀತಿಯ ನಲ್ಮೆ ಕೊಟ್ಟು
ಇಷ್ಟು ಕಾಯಿಸುವಿಕೆ ನನ್ನನೆ..
ನಿನ್ನ ಮುರುಳಿಗಾನ ಕೇಳಲೆಂದೆ
ನಿನ್ನ ನೇಹಕಾಗೆ ನಾ ನಿಂದೆ ..
ಬಾಬೇಗ ಬಿಗಿದಪ್ಪಿ ಎನ್ನೊಲೈಸು
ಒಲವ ವರ್ಷಧಾರೆ ಬರಲಿ ಇಂದೆ.!-