ಮನದಲ್ಲಿ ಬೆಟ್ಟದಷ್ಟು ಆಸೆ ಆಕಾಂಕ್ಷೆ ಇದ್ದರು
ಇಲ್ಲದಂತೆ.ನಿಸ್ವಾರ್ಥಿಯಾಗಿ ಜವಬ್ದಾರಿ ಅನ್ನೋ
ಬಹುದೊಡ್ಡ ಭಾರವನ್ನ.ಕೇವಲ ಅಸಹಾಯಕತೆ &
ನೋವು ಅಪಮಾನಗಳಿಂದ ನೊಂದವರಷ್ಟೇ
ನಿಭಾಯಿಸಲು ಸಾಧ್ಯ...
#✍️ಭೀಮೇಶ ಎಸ್.ಡಿ😊
-
"ಬಿಸಿಲಿನ ನಾಡು ರಾಯಚೂರು"
Work at RDCC Bank
From.Jalahalli
(9901715197)
ಬರಹವನ್ನ... read more
ಪ್ರತಿಯೊಂದು ಅನುಭವ ಒಂದೊಂದು ಹೊಸ ಪಾಠವನ್ನೆ ಕಲಿಸುತ್ತದೆ.!
ಸಾಧ್ಯವಾದಷ್ಟು ನಮ್ಮ ಸರಿ ಮತ್ತು ತಪ್ಪುಗಳನ್ನ
ಸರಿಪಡಿಸ್ತಾ ಸಾಗಬೇಕು.!!
✍️ಭೀಮೇಶ ಎಸ್.ಡಿ-
ಬದುಕು ನಾಲ್ಕು ದಿನದ ನಟನೆಯಷ್ಟೇ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದೇ ಶ್ರೇಷ್ಠತೆ..
✍️ಭೀಮೇಶ ಎಸ್.ಡಿ-
ಅವಿವೇಕಿಗಳೊಂದಿಗೆ ವಾದ
ಮಾಡುವುದಕ್ಕಿಂತ.
ವಿವೇಕವಿರುವವರಲ್ಲಿ ಮೌನ
ವಹಿಸುವುದು ಲೇಸು.!
✍️ಭೀಮೇಶ ಎಸ್.ಡಿ-
ಗಜಲ್
ಅಪಹಾಸ್ಯ ಮಾಡಿ ನಗುವವರು ನಗುತಿರಲಿ ಬಿಡು
ಕೊಂಕು ಮಾತಿಂದ ಕಾಲಗಳೆಯುವವರು ಕೊನೆಯಾಗಲಿ ಬಿಡು
ನೂರು ಜನರ ಮಾತಲ್ಲಿ ಒಬ್ಬರಿಂದ ಪ್ರಶಂಸೆ ಸಿಕ್ಕರೆ ಸಾಕಷ್ಟೇ
ಕಡೆಗಣಿಸಿ ಬಂದು ಕೆಣಕುವವರೆಲ್ಲರೂ ಕಳೆದು ಹೋಗಲಿ ಬಿಡು
ನಟಿಸುವುದು ಅವರವರ ಪಾತ್ರ ಮನಬಂದತೆ ನಟಿಸಲಿ
ಹೊಗಳಿ ತೆಗಳುವವರು ಇಹರು ತಲೆ ಕೆಳಕಾಗಿಯೆ ಬಿಳಲಿ ಬಿಡು
ಪಾಪ ಕರ್ಮದ ಹೊರೆ ನಮ್ಮ ನಮ್ಮ ಹೆಗಲಿಗೆ ಹೊರೆ ಆಗುವುದು
ಅವಶ್ಯಕತೆ ಇದ್ದಾಗ ಬಣ್ಣ ಬದಲಿಸುವವರು ಉಸರವಳ್ಳಿಯಾಗಲಿ ಬಿಡು
'ಭೀಮ' ನಂತೆ ಎಲ್ಲರೂ ಜೀವಿಸಬೇಕು ಎನ್ನಲು ನಾನರು ನೀನಾರು.?
ಮೈ ಮರೆತು ಮಾತನಾಡಿ ಮಲುಗುವವರೆಲ್ಲಾ ಮಣ್ಣಾಗಲಿ ಬಿಡು...
✍️ಭೀಮೇಶ ಎಸ್. ಡಿ
-
ಅವಳನ್ನೆ ನೆನೆದು
ನಾ ನಗುತಿರುವಾಗ
ಅವಳು ಮಾತ್ರ
ಇನ್ಯಾರದೋ ನಗುವಲ್ಲಿ
ಜೊತೆಯಾಗಿದ್ದಳಂತೆ.!
✍️ಭೀಮೇಶ ಎಸ್.ಡಿ-
ಎಲ್ಲಾ ಅಡೆತಡೆಗಳ ಮರೆತು ನಗಲು
ಆಸೆ ಆಕಾಂಕ್ಷಿಗಳ ನೆನಪಿಸಿ ಅಳಲು
ಮೌನವಾಗಿಯೇ ಬದುಕು ನಿಗಿಸಲು
ಕತ್ತಲೆ ತುಂಬಿದ ಮನಕೆ ಬೆಳಕು ಬರಿಸಲು.
ಆಗಾಗ ಏಕಾಂಗಿತನ ಬೇಕಿದೆ ಮನಕೆ.!!
ಕಂಡ ಕನಸುಗಳನ್ನೆಲ್ಲಾ ಮೆಲುಕು ಹಾಕಲು
ನಡೆದು ಬಂದ ಹಾದಿಯ ಮತ್ತೆ ನೆನಪಿಸಲು
ಅರಿತು ಬೆರೆತು ಸಾಗಿದ ಸ್ನೇಹವ ನೆನೆಯಲು
ಬಾಡಿದ ಪ್ರೀತಿಯನ್ನೇ ಮತ್ತೆ ಚಿಗುರಿಸಲು.
ಆಗಾಗ ಏಕಾಂಗಿತನ ಬೇಕಿದೆ ಮನಕೆ..!!
~✍️ಭೀಮೇಶ ಎಸ್.ಡಿ-
ಅಧರ್ಮವೆಂಬುದು ಬೊಗಸೆಯಲ್ಲಿ ಹಿಡಿಟಿಟ್ಟ ನೀರಂತೆ
ನಾವು ಅದೆಷ್ಟೇ ಜೋಪಾನವಾಗಿ ಕಾಯ್ದಿರಿಸಿದರು ಕಡೆಗೂ
ಕೈ ತಪ್ಪಿ ಹೋಗುವುದಂತು ನಿಶ್ಚಿತ.
ಧರ್ಮವೆಂಬುದು ವೃಕ್ಷದ ಬೇರಿನಂತೆ ಅದೆಷ್ಟೇ ಶಾಖೆಗಳು
ಬೆಳೆದು ನಿಂತರು ಸಹ ವೃಕ್ಷದ ಬೇರು ಮಾತ್ರ ತಟಸ್ಥವಾಗಿರುತ್ತದೆ
ತಾತ್ಪರ್ಯ.:
ನಮ್ಮ ಆಲೋಚನೆಗಳು ಹಾಗೆಯೇ ವೃಕ್ಷದ
ಬೇರಿನಂತೆಯೇ ತಟಸ್ಥವಾಗಿರಬೇಕು.ಅಂದಾಗ ಮಾತ್ರ
ಜೀವನ ಸಾರ್ಥಕತೆ ಹೊಂದುವುದು.!!-
ಅನುಭವಿಸಿದ ಸಂಕಷ್ಟಗಳೆಲ್ಲವೂ
ಬದುಕಿಗೆ ಸ್ಪೂರ್ತಿ ತುಂಬಲಿ.ಬಾಳಿನ ಬೇಸರಕ್ಕೆ
ಜೀವನವೇ ಭರವಸೆಯಾಗಲಿ.,!-