ಒಳಿತು ಕೆಡಕುಗಳ ಈ ಜೀವನ
ಆಳವೆಷ್ಟು...ಅರಿತವರೆಷ್ಟು..
Read caption
-
ಈ ಜಗದಲ್ಲಿ ಒಳ್ಳೆಯವರು ಎಂದು,
ಅನ್ಯರ ಬಾಯಲ್ಲಿ ಹೇಳಿಸಿಕೊಳ್ಳುವುದು ತುಂಬಾ ಕಷ್ಟ..!
ಆದರೆ ಕೆಟ್ಟವರಾಗಲು ಹೆಚ್ಚು ಸಮಯ ಬೇಡ,
ಕೆಡುಕೂ ಸಹ ಮಾಡಬೇಕೆಂದೇನಿಲ್ಲ..!
ತಪ್ಪುಗಳ ಎತ್ತಿ ತೋರಿ ತಿಳಿ ಹೇಳಿದರೆ ಸಾಕು..
ತಿದ್ದಲು ಹೋದ ನೀವೇ ಆ ಕ್ಷಣದಿಂದ,
ಅವರ ಕಣ್ಣಿಗೆ ಯಾವಾಗಲೂ ಕೆಟ್ಟವರಾಗೇ ಕಾಣುವಿರಿ..!!
— % &-
ಒಳ್ಳೆಯವರಿಗೆ ಒಳ್ಳೆಯವರು ಸಿಗುವುದಿಲ್ಲ ಎಂದಾದರೆ 🤔
ಒಳ್ಳೆಯವರಂತೆ ನಂಬಿಸಿ ಮೋಸ ಮಾಡಿದ/ಮಾಡುವ ಕೆಟ್ಟವರೆನ್ನುವ ಮುಖವಾಡದಾರಿಗಳನ್ನೇಕೆ ಅವರ ನೈಜ ಬಣ್ಣ ಬಯಲಾಗುವಂತೆ ಮಾಡಿ
ಸ್ವತಃ ಪರಮಾತ್ಮನೇ ನಿನಗವರು ಅರ್ಹರಲ್ಲವೆಂದು ದೂರವಾಗಿಸಿದ..?
👉 ಕೊಂಚ ಯೋಚಿಸಿ..! ಉತ್ತರ ಸಿಕ್ಕರೂ ಸಿಗಬಹುದು 🙏-
ಭಗವಂತನಲ್ಲಿ ಪ್ರಾರ್ಥಿಸಬೇಕು ಜಗತ್ತಿನ ಒಳಿತು,
ಅರಿಯದ ವಿಚಾರ ಕೇಳಿ ತಿಳಿದರೆ ತುಂಬಾ ಒಳಿತು.
-
ಜೊತೆ ಇದ್ದಾಗ ದೂರ ಮಾಡಿ,
ದೂರಾ ಇದ್ದಾಗ ಮತ್ತೆ ಸನಿಹ ಕರೆದರೆ
ಮರೆತಂತಿರುವ ದೂರಾದ ನೋವ ಕಹಿ ನೆನಪುಗಳು ಹೆದರದಿರದೆ?
ಒಳಿತು ದೂರವಿದ್ದು ಶುಭ ಕೊರುವುದು.-
ಕೆಟ್ಟದ್ದು ಕಾಲ ಸುತ್ತ ಸುಳಿತಿದೆ
ಅದ ಮೆಟ್ಟಿ ನಡೆ ನೀ...
ಒಳಿತಿನ ಅರಿವು
ಅಂತರಂಗದಲ್ಲಿದೆ
ಅದ ಮುಟ್ಟಿ ನಡೆ ನೀ...-
ಪ್ರತಿಯೊಬ್ಬರ ಮನದಲ್ಲೂ
ಪಾಂಡವ ಕೌರವರ (ಒಳಿತು ಕೆಡುಕು)
ಘರ್ಷಣೆ ನಡೆಯುತ್ತಲೆ ಇರುತ್ತದೆ
ಆದರೆ ನಿಮ್ಮ ಬುದ್ದಿಯನ್ನು
ಎಂದಿಗೂ ಶಕುನಿಯ (ಬೇರೊಬ್ಬರ)
ನಿರ್ಧಾರಕ್ಕೆ ಒಪ್ಪಿಸದಿರಿ.
-
ನೀ ಏನನ್ನು ಬಯಸದೇ
ಒಳಿತನ್ನು ಬಯಸುವ ಮನಸ್ಸು
ಮುಂದೆ ಸಾಗಲು ಪ್ರೇರೇಪಣೆ ನೀಡಿದೆ
ಎಂದು ಎಂದೆಂದೂ...
ಅದೇ ನೀನು ನಿನ್ನ ಒಳಿತಿಗಾಗಿ
ಪರರ ಬಲಿ ಕೊಟ್ಟು ನಿನು ಸುಖ
ಸಂಸಾರ ಪ್ರಾರಂಭಿಸುವುದು
ಎಸ್ಟು ಉತ್ತಮ ನೀವೇ ಹೇಳಿ...?-