ಸುನೀತಗೌಡ   (✍️ಉಸಿರು❤️)
3.3k Followers · 20 Following

read more
Joined 26 July 2019


read more
Joined 26 July 2019

ಕೊನೆಯವರೆಗೂ ಜೊತೆ
ಇರುವೆ ಎಂದವನು..
ಬಯಸಿದರು ಸಿಗದವನು
ನನ್ನ ಕಲ್ಪನೆಯ
ಕವನಗಳಲ್ಲಿ ಅರಳಿದವನು
ಹಿಡಿಯಲೋದರೆ
ಕೈಗೆ ಸಿಗದವನು
ಅಂದು ನನಗಾಗಿ
ಕೊರಗಿದವನು
ಇಂದು ನನ್ನ ಪ್ರೀತಿಗೆ
ಕರಗದವನು
ನನ್ನ ಮನಸು ಅರಿತು
ಅರಿಯದಂತೆ
ನಟಿಸುತ್ತಿರುವವನು
ಎಂದಿಗೂ ಸಿಗುವುದಿಲ್ಲ
ಎಂದವನು
ಸಿಕ್ಕರೂ
ಜೊತೆಗಿರುವುದಿಲ್ಲದವನು
ಹೇಗೆ ಹೇಳಲಿ ನೀನು
ಏಳೇಳು ಜನ್ಮದಲ್ಲೂ
ನನ್ನವನು ನನ್ನವನು..

-



ನನ್ನ ಬದುಕಲ್ಲಿ ನಿನಗೆ ಎಲ್ಲದಕ್ಕು ಸಮ್ಮತಿ ಇದೆ,
ನಿನ್ನ ನಿರ್ಗಮನದ ಹೊರತು..

-



ನನಗಾಗಿ ಸಮಯ ಕೊಡದೆ ಇದ್ದರು
ನಿನ್ನ ಮೇಲೆ ನನಗೇಕೆ ಇಷ್ಟೊಂದು ನಿರೀಕ್ಷೆ..??
ನೀನು ನನ್ನ ಪ್ರಶ್ನೆಗೆ ಉತ್ತರ ಕೊಡೋಲ್ಲ ಅಂತ
ಗೊತ್ತಿದ್ದರು ನನ್ನಲ್ಲಿ ಇಷ್ಟು ಪ್ರಶ್ನೆಗಳೇಕೆ..??
ನನ್ನ ಬಗ್ಗೆ ಸ್ವಲ್ಪವೂ ಯೋಚಿಸದ
ನಿನ್ನ ಮೇಲೆ ನನಗೇಕೆ ಇಷ್ಟೊಂದು ಪ್ರೀತಿ..??

-



ಪ್ರೀತಿಯನ್ನು ಉಳಿಸಿಕೊಳ್ಳುವ ಭರದಲ್ಲಿ
ನನ್ನ ಆತ್ಮಗೌರವ ಆತ್ಮಹತ್ಯೆ ಮಾಡಿಕೊಂಡಿತ್ತು..
ಯಾರ ಮಾತಿಗೂ ಸೋಲದ ನನ್ನ
ವ್ಯಕ್ತಿತ್ವ ನಿನ್ನ ಕಾಲಡಿಯ ಧೂಳಾಗಿತ್ತು..

-



ಹೊರಗೆ ಧಗಧಗಿಸುವ ಬಿಸಿಲಿನ ಬೇಗೆ,
ದಟ್ಟವಾದ ನೋವಿನ ಕಾರ್ಮೋಡ ಮನದೊಳಗೆ..
ದಗೆ ತಾಳದ ದೇಹದಿಂದ ಸುರಿದ ಬೆವರು
ಮನದ ನೋವಿನ ಕಂಬನಿಗೆ ಕಂಗಳೇ ತವರು..
ಮಳೆಯಾದರೆ ಧರಣಿ ಆಗಬಲ್ಲದು ತಂಪು,
ಎಷ್ಟೇ ಮರೆಯಲು ಯತ್ನಿಸಿದರು ಮನದಲ್ಲಿರುವವನ ನೆನಪು ಆಗಲೊಲ್ಲದು ಮೂಲೆಗುಂಪು..

-



......

-



ನನ್ನ ಹಣೆಬರಹದಲ್ಲಿ ನೀನು ಇಲ್ಲವಾದರೆ ಏನಂತೆ..??
ನನ್ನ ಮನದ ಬರಹದಲ್ಲಿ ನೀನು
ಎಂದೆಂದಿಗೂ ಅಜರಾಮರ..

-



ಅವನೇ ಬೇಕೆನ್ನುವ ನನ್ನ ಹಠದ  ಮುಂದೆ
ನಾನು ಬೇಡವೆನ್ನುವ ಅವನ ಆಯ್ಕೆಯೇ ಗೆದ್ದಿತ್ತು..
ಅವನ ಕಥೆಯಲ್ಲಿ ನನ್ನ ಪಾತ್ರ ಮುಗಿದಿತ್ತು
ಆದರೆ ನನ್ನ ಕವನದಲ್ಲಿ ಅವನ ಪಾತ್ರ ಕೊನೆಯವರೆಗೂ
ನೆನಪಲ್ಲೇ ಉಳಿಯಿತು..

-



ನೀನು
ತಿರಸ್ಕರಿಸಿದ್ದರು
ನಾನು ಬದುಕುತ್ತಿದ್ದೆ..
ನೀನು ನನ್ನಿಂದ
ದೂರ ಇದ್ದರೂ
ನಾನು ಮರೆತಂತೆ
ನಟಿಸುತ್ತಿದ್ದೆ..
ಆದರೆ,
ನೀನು
ದಿನೇ ದಿನೇ
ಕೊಲ್ಲುತ್ತಿರುವೇ
ನನ್ನೊಳಗಿದ್ದೇ..

-



ನಿನ್ನೊಂದಿಗೆ ಪ್ರೀತಿ, ಪ್ರೇಮಕ್ಕೂ
ಮೀರಿದ ಭಾವವೊಂದಿದೆ..
ಇಲ್ಲಿ ಕನಸಿನ ಅಗತ್ಯವಿಲ್ಲ..
ನಮ್ಮಿಬ್ಬರ ಭಾಂದವ್ಯಕ್ಕೆ ಹೆಸರೇ ಇಲ್ಲ..
ನೀನು ಎಂದೆಂದಿಗೂ ನೆನಪಷ್ಟೇ..
ನಮ್ಮಿಬ್ಬರ ಆಕಸ್ಮಿಕ
ಪರಿಚಯ ಕೇವಲ ನೆಪಕಷ್ಟೇ..

-


Fetching ಸುನೀತಗೌಡ Quotes