ಏಕೋ ತಳಮಳ
ಬಿಕೋ ಎಂದಿವೆ ಕನಸುಗಳು
ತೊರೆದದ್ದು ಅರಗಿಸಿಕೊಂಡಿರುವೆ
ಅರಿವಾಗಿದೆ ವ್ಯತ್ಯಾಸಗಳು
ಹಿಂತಿರುಗದಿರು
ಮತ್ತೆ ಜೀವ ಬರದು ಈ ನಿರ್ಜೀವ ಮನಕ್ಕೆ.-
ಪ್ರೀತಿ ಪ್ರೇಮದ ಬರಹಗಳ ಕಡೆ ತುಸು ಒಲವು ಹೆಚ್ಚು
ಇದ ನೋಡಿ ನನ್ನ ಪತಿರಾಯ ... read more
ಓ ಒಲವೆ ನಿನಗಾಗಿ ನಾ ಕಾಯುವೆ
ಕನಸಲ್ಲೂ ಬಿಟ್ಟುಬಿಡದೆ ನೀ ಕಾಡುವೆ
ಕದಪು ಕೆಂಪಾಗಿಸಿವೆ ನಿನ್ನ ನೆನಪುಗಳು
ದೂರ ಮಾಡಿರುವ ವಿಧಿಯ ನಾ ದೂರುವೆ.-
ಮೆಲ್ಲಮೆಲ್ಲನೆ ಬಂದು
ಕದ್ದು ಕದ್ದು ನೋಡುವಳು
ಬೇಗಬೇಗ ಬಳಿಬಂದು
ಪಟಪಟನೆ ಮುತ್ತಿಟ್ಟು
ಪಕಪಕನೆ ನಕ್ಕು
ಹೆಚ್ಚೆಚ್ಚು ಹಚ್ಚಿಕೊಂಡಂತೆ
ರಾಶಿರಾಶಿ ಕನಸು ಕೊಟ್ಟು
ಪದೇ ಪದೆ ನೋಡುತ
ಸರಸರನೆ ಓಡುವಳು.-
ಕೆಲವರಿಗೆ ಬಣ್ಣ ಕುರುಡು
ಅವನಿಗಿತ್ತು ಒಲವು ಕುರುಡು
ತಪ್ಪವನದ್ದ ಗೆಳತಿ?
ಕೆಲವರಿಗೆ ಕಿವಿ ಮಂದ
ಅವನಿಗಿತ್ತು ಹೃದಯ ಮಂದ
ತಪ್ಪವನದ್ದ ಗೆಳತಿ?
ಅವಳೊಲವ ಭಾಷೆ
ಅವನಿಗರ್ಥೈಸುವಲ್ಲಿ
ಸೋತಿದ್ದಳು
ಅವನಿಗರಿವಿದ್ದಿದ್ದು ದೇಹ
ಭಾಷೆಯಷ್ಟೇ
ತಪ್ಪವನದ್ದ ಗೆಳತಿ?
ಅವರವರಿಗೆ ಬೇಕಾದ್ದು
ಸ್ವಾತಂತ್ರ್ಯ ಅವರವರಿಗಿದೆ
ತಪ್ಪೆಂದು ನಿಂದನೆಯೇಕೆ?
ಅವಳಾಯ್ಕೆ
ತಪ್ಪಾಗಿದ್ದು ಗೆಳತಿ.-
ಗಜಲ್
ನಿರ್ಮಲ ಪ್ರೀತಿ
ರಾಮನ ನೀತಿ
ಹೆಣೆದ ಜಡೆ
ನಲ್ಮೆಯ ಪತಿ
ತುಂಬಿದ ಒಲವು
ನಾನವನ ರತಿ
ಜಗದ ಹಂಗಿಲ್ಲ
ಲಜ್ಜೆಗೊಂದಿದೆ ಗತಿ
ಸುಮವಿದೆ ಧುಂಬಿಗೆ
ಪ್ರಣಯಕ್ಕಿಲ್ಲ ಮಿತಿ.-
ಬಣ್ಣ ಬಳಿಯದೆ
ಸರಿ ತಪ್ಪು ಮುಚ್ಚುಮರೆಯಿಲ್ಲದೆ
ಹೇಳುವ ಸ್ವತಂತ್ರವಿದ್ದರೆ
ಅದಕ್ಕಿಂತ ಸ್ವಸ್ಥ ಸಮಾಜ ಬೇರೊಂದಿಲ್ಲ.-
ಮನದೊಲೊಂದು
ಸಪ್ಪಳವಾಗಿತ್ತು
ಇಣುಕಿ ನೋಡಿದರೆ
ಅವನೊಲವಿತ್ತು
ಸಂಭ್ರಮವೊಂದು
ಚಿಮ್ಮುತಲಿತ್ತು
ಕಿರುಬೆರಳ್ಹಡಿದು
ನಿಂತಂತ ಕನಸೊಂದಿತ್ತು
ಕಾಮನಬಿಲ್ಲಿಗೆ
ಜೋತಾಡಿದ್ಹಗಿತ್ತು
ಕ್ರೂರ ವಿಧಿಯೊಂದು
ದೃಷ್ಟಿ ಹಾಕಾಗಿತ್ತು
ಮಾತುಗಳೆಲ್ಲ
ಮೌನವಾಗಿತ್ತು
ಅವನೊಲವು
ಅನ್ಯರ ಪಾಲಾಗಿತ್ತು.-