ಮನದೊಳ್ ಇರದ ಜಾಗ
ಮನೆಯೊಳು ಸಿಕ್ಕಿತೆ,
ಮನದೊಳ್ ಇರುವ ಚಿಂತೆಗೆ
ಮಸಣದ ಚಿತೆ ಶಾಂತಿ ನೀಡಿತೆ,
ಮನದ ನೋವಿಗೆ ಕಂಬನಿ ಹರಿದರು
ಮನ ಹಗುರವಾದೀತೆ,
-
ಕವಿಯಲ್ಲ ಆದರೂ
ಕವನ ಬರೆಯುವ
ಪುಟ್ಟ ಹೃದಯ ನನ್ನದು
ಈ ಜೀವದೊಳು ಉಸಿರಿರುವರೆಗೂ
ಬರೆಯುತ... read more
ನಿನ್ನದೆ ನೆನಪಿನಲ್ಲಿ ಕಾದಿಹ ಮನಕ್ಕೆ
ನಿನ್ನ ಆಗಮನ ತುಸು ತಂಗಾಳಿಯ ತಂದು
ಮನಕ್ಕೆ ಸವರಿದಂತಾಗಿದೆ,
ಮಾತಿಲ್ಲ ಕತೆಯಿಲ್ಲ
ಆದರು ಮನಕ್ಕೆ ನಿನ್ನದೆ ಜಪವಾಗಿದೆ
ಸೇರಿಬಿಡಲೇ ನಾ ನಿನ್ನ ಒಮ್ಮೆ
ಬಿಗಿಯಾಗಿ ಅಪ್ಪಿ ಸಾವಿರ ಮಾತ ಹೇಳಬೇಕಿದೆ.
ಅದ್ಯಾವುದೋ ಬೇಡಿ ಕೈ ಕಟ್ಟಿ ಹಾಕಿದೆ,
ನೆಪವಿಲ್ಲದೆ ನೆನಪಾಗುವೆ ನೀ
ನಿನ್ನದೆ ಜಪ ಹಿಡಿದಿರುವೆ ನಾನು,
ಮತ್ತೆ ನಿನ್ನದೆ ದಾರಿಯ ಕಾಯುತ್ತಿರುವೆ
ಮತ್ತದೆ ದಾರಿಯಲ್ಲಿ ನೀ ಬರುವೆಯೆಂದು.
-
ಕಂಬನಿ
ಮೌನಿ ನಾ
ಮಾತು ಬಾರದ ಮೂಗಿ ನಾ
ಮನ ನೊಂದಾಗ
ಮರುಗುವುದಷ್ಟೇ ನನ್ನ ಕಾಯ,
ಹೇಳಲಾಗದ ನೋವ ಕಂಬನಿಯಾಗಿ
ಹರಿಸುವ ಮಾತು ಬಾರದ ಮೂಗಿ ನಾ....
-
ನೀ ಇರದೆ ಸನಿಹ
ನಗುವು ಮುನಿಸಿಕೊಂಡು
ದೂರಾದಂತಿದೆ,
ಜಾರದ ಕಂಬನಿ ಕಣ್ಣಲ್ಲೇ
ವಿರಹದ ನೋವ ಹಿಡಿದಿಟ್ಟಿದೆ,
ಇನಿಯನಲ್ಲ ನೀ ಏನಗೆ,
ಇರದೆ ಹೇಗಿರಲಿ ನಾ
ಸ್ಮೇಹಿತನಾದ ನೀ ಬಳಿಯಿರದೆ.-
ಕಂಬನಿಯ ಕಣ್ಣಲ್ಲೇ ಬತ್ತಿಸಿದವಳು ನಾನು
ನಿನ್ನ ವಿರಹದ ನೋವ ಮೊಗದಲ್ಲಿ
ಕಾಣದಿರಲೆಂದು,
ಮನವನ್ನು ಕಲ್ಲಾಗಿಸಿದವಳು ನಾ
ನಿನ್ನ ವಿರಹದ ಭಾವನೆ ಮನದೊಳ್
ನುಸುಳದಿರಲೆಂದು,
ಉಸಿರಿದ್ದು ಶವವಾದವಳು ನಾನು
ಸತ್ತ ನಿನ್ನ ನೆನಪುಗಳು ಸುತ್ತಿ ಸುತ್ತಿ ಕಾಡದಿರಲೆಂದು.-
ಮೌನ
ನಿನ್ನ ಪಂಜರದೊಳ್
ಬಂಧಿಯಾದೆ ನಾ
ನಿನ್ನಿಂದ ತಪ್ಪಿಸಿಕೊಂಡು
ದೂರ ಹಾರಿದವಳು ನಾನು
ಭಾವನೆಗಳ ಬೇಗೆಯಲ್ಲಿ ಬೆಂದು
ಮತ್ತೆ ನಿನದೆ ಪಂಜರವನ್ನು
ಬಿಗಿದಪ್ಪಿಕೊಳ್ಳಲು ಬಂದಿರುವೆ
ಪರಿತಪಿಸಿ ಕೇಳುತಿರುವೆ
ಬಂಧಿಸುವೆಯ ನನ್ನೂಮ್ಮೆ
ಮತ್ತೆ ಹಾರಿಹೋಗದ ಹಾಗೆ
ಮೌನ.
-
ಒಂಟಿ ಪಯಣಿ ನಾನು
ಒಂಟಿ ಪಯಣದಿ ಜಂಟಿಯಾದೆ ನೀನು
ಭಾವನೆಗಳ ಚಾಲಕನಾಗಿ ಏರಿ
ಪ್ರೀತಿಯ ಪಯಣ ಬಹು ದೂರ ಸಾಗಿತು,
ಪ್ರೀತಿಯ ಪಯಣದಿ ನಡು ಮಧ್ಯೆ
ಬಿಟ್ಟು ಹೊರಟವ ನೀನು,
ನಿನದೆ ನೆನಪಿನಲ್ಲಿ ಜಾರಿದ ಕಂಬನಿಯೊಂದು
ತುಟಿಯಂಚಿನಲ್ಲಿ ಬಂದು ಹೇಳಿತು
ಮತ್ತದೆ ಒಂಟಿ ಪಯಣಿಗಳು ನೀನು.
-
ನಾನೊಂದು ನಕ್ಷತ್ರ
ಪ್ರತಿ ದಿನ ನಿನ್ನ
ಬರುವಿಕೆಗಾಗಿ ಹಾತೊರಿಯುವ
ನಿನಗೆಂದೂ ಕಾಣಿಸದೆ
ಸಾವಿರಾರು ನಕ್ಷತ್ರಗಳ ನಡುವೆ
ನಿನ್ನನ್ನೇ ಪ್ರೀತಿಸುವ
ನಾನೊಂದು ನಕ್ಷತ್ರ.-