ಅವರಿವರ ಭಾವನೆಗಳ ಆಲಿಸಲ್ಹೋಗಿ
ನನ್ನ ತಪ್ಪನ್ನು ಎತ್ತಿ ಹಿಡಿದೆನು ಅತೀ ಬುದ್ಧಿವಂತಿಕೆಯಿಂದ!
ಅವರಿವರ ಪ್ರೀತಿಯ ಅಪೇಕ್ಷಿಸಲ್ಹೋಗಿ ನನ್ನ
ಪ್ರೀತಿಯನ್ನೇ ಆಟದ ಸಾಮಾಗ್ರಿಯಂತೆ
ಮಾಡಿದೆನು ಅದೇ ಅತೀ ಬುದ್ಧಿವಂತಿಕೆಯಿಂದ!-
ಇಂಗಿದ ನೀರಲ್ಲಿ
ಬಿಂಬವೆಲ್ಲಿ ಮೂಡುವುದು
ಒಡೆದು ಹೋದ ಹೃದಯದಲ್ಲಿ
ಒಲವೆಲ್ಲಿ ಚಿಗುರುವುದು
ಮೂಢನಂಬಿಕೆ ಇದ್ದಲ್ಲಿ
ಅಜ್ಞಾನವೆಲ್ಲಿ ನಶಿಸುವುದು-
ಎಲ್ಲ ಸಂದರ್ಭದಲ್ಲೂ
ಕಾಲವನ್ನೇ
ದೂಷಿಸುವುದು
ಕೂಡ ತಪ್ಪಾಗುತ್ತದೆ..
ನಮ್ಮದೇ ಅವಸರದ
ಅಜ್ಞಾನವು
ಕೆಲವೊಮ್ಮೆ
ಕಾರ್ಯಲೋಪಕ್ಕೆ
ಕಾರಣವಾಗುತ್ತದೆ...-
ಅಜ್ಞಾನದೊಳ್ ಸುಜ್ಞಾನವ
ಅರಿತು ಆಲಂಗಿಸಿ
ಅಳವಡಿಸಿಕೊಂಡು
ಅಂಗಾರತೆಯ ತೊಡೆದು
ಅಗಂತುಕತೆಯ ಮರೆತು
ಅವಿಜ್ಞಾನಿಯಾಗಿರು-
ದುಡ್ಡು ದುನಿಯಾ ಆಳತಾದ
ಅಳಸತಾದ, ಕುಣಸತಾದ,
ಮಂದಿ ಮನಸ ನೋಡತಾದ,
ಯಾರ ಹೆಗಲ ಮ್ಯಾಲ ಏರಿ
ಗೆನಿಸಿ ಗೆಲಿಸಿ ನಗಸತಾದ..
ಯಾರ ಮನಿಯ ಮಸಣ
ಮಾಡಿ, ಯಾರ ಮನದಿ
ಪಾಷಾಣ ತುಂಬಿ
ಹುಳಕ ಬೀಜ ಬಿತ್ತತಾದ,
ಕೊಳಕ ರೂಪ ಎತ್ತತಾದ..-
ಕಲಿತ ಪಾಠಗಳೆಲ್ಲವನ್ನು ಸಮಯಕ್ಕೆ ತಕ್ಕಂತೆ ಉಪಯೋಗಿಸುವ ವಿವೇಚನೆಯಿರದಿದ್ದರೆ ಅಜ್ಞಾನದ ಪರಮಾಂಧಕಾರದಲ್ಲಿ ಬಿದ್ದ ಹುಳುವಾಗುವಿ.
-
ಉತ್ತಮ ಉದ್ದೇಶ ಹೊಂದಿ
ಒಳ್ಳೆಯ ನಡತೆಯೊಳು ಮಾಡಿದ
ನಿಸ್ವಾರ್ಥ ಸಹಾಯ ಕೂಡ
ಒಮ್ಮೊಮ್ಮೆ ಅಜ್ಞಾನದಿಂದ
ಸ್ವಾರ್ಥದಂತೆ ಕಂಡು ಒಳಗೊಳಗೇ
ಶತ್ರು ಹುಟ್ಟಿ ಬಿಡುತ್ತಾನೆ..
ಒಂದುದಿನ ಜ್ಞಾನದ ಜ್ಯೋತಿ
ಬೆಳಗಲೇಬೇಕು..ಅಲ್ಲಿಯವರೆಗೆ
ಕಾಯಲೇಬೇಕು ಅತೀ ತಾಳ್ಮೆಯಿಂದ...
-
ಜಗತ್ತಿನ ತುಂಬೆಲ್ಲ ಅಜ್ಞಾನದ ಕತ್ತಲು ಆವರಿಸಿರಲು
ದೇವನೊಬ್ಬ ಅವತರಿಸಿ ಬರುವ ಸುಜ್ಞಾನದ ದೀಪವಚ್ಚಲು-