'ಸುಳ್ಳು ' ಹಿಂದೆ ಮುಂದೆ ನೋಡಲೂ ಟೈಮ್ ಇರದಂತೆ ಅತೀ ಬೇಗ ನಂಬುವಂತೆ
ಮಾಡುತ್ತದೆ.
ಆದರೆ 'ಸತ್ಯ ' ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿ ಅತೀ ನಿಧಾನವಾಗಿ ಅರಿವು
ಮೂಡಿಸುತ್ತದೆ.
ಸತ್ಯಕ್ಕೆ ಸಾವಿಲ್ಲ ನಿಜ.ಆದರೆ ಸ್ವಲ್ಪ ಕಾಲ ಸುಳ್ಳಿನ ವಿಜೃಂಭಣೆಯಿಂದ ಸತ್ಯದ ಅರೆಜೀವವಾಗಿರುತ್ತದಷ್ಟೇ..-
ನಿಜವಾದ ನಿಸ್ವಾರ್ಥತೆಯ ಕಾಳಜಿ ಯಾರ
ಆಂತರ್ಯವನ್ನೂ
ತಟ್ಟದು.ನಾಟಕ ಎಂದೇ ತಿಳಿಯುತ್ತಾರೆ.
ಆದರೆ ತೋರಿಕೆಯ ನಾಟಕದ ಕಾಳಜಿ ಸೀದಾ ಹೃದಯದಾಳಕ್ಕೆ ಇಳಿಯುತ್ತದೆ.ಹಾಗೂ ನಿಜವಾದ ಕಾಳಜಿ ಇದೆ ಎಂದು ಭ್ರಮಿಸಿ ಮೋಸ ಹೋಗುತ್ತಾರೆ.-
ಹೃದಯದಿಂದ ಓದಲು ಕಲಿಯಬೇಕು
ಪ್ರೀತಿಯನ್ನು
ಒರೆಹಚ್ಚಿ ನೋಡಬೇಕು ಮನದ
ಮೂಲೆ ಮೂಲೆಯನ್ನು
ಹಣ,ಅಂತಸ್ತು ಆಸ್ತಿಯಿಂದ ಹುಟ್ಟದು
ಎಂದಿಗೂ ಪ್ರೀತಿ
ಹೃದಯದಾಳದಿಂದ ಭಾವನೆಗಳು
ಉಕ್ಕಿ ಬರುವವು ಸಾಗರದ ರೀತಿ.
-
ಹಿಂದಿನವರು ಕೂಡಿಟ್ಟ
ಆಸ್ತಿ ಇದ್ದರೆ ಮಾತ್ರ ಬದುಕು ಕೂತು
ಉಣ್ಣಲು ಬಲು ಸುಲಭ.
ಏನೂ ಇಲ್ಲದೇ ಶೂನ್ಯ ಎಂದಾದರೆ
ಬದುಕು ಸುಲಭವಲ್ಲ.
ತುಂಬಾ ತಾಳ್ಮೆ, ಗಟ್ಟಿಯಾದ ಕೆಲ ನಿರ್ಧಾರ,
ಅಷ್ಟೇ ಕಠಿಣ ಪರಿಶ್ರಮ ,ಬೆವರಿನ ತೊರೆ
ಹರಿಯಬೇಕು.ಚಿಕ್ಕ ವೈರಾಗ್ಯ ನಮ್ಮ ಆವರಿಸಬೇಕು.ಮುಂದಿನ ಭವಿಷ್ಯ ನಮ್ಮ ಕಣ್ಣಿನ ಹೊಳಪಿಗೆ ಕಾರಣವಾಗಬೇಕು.
ಪರಿಶ್ರಮದಿಂದ ಬದುಕು ಕಟ್ಟಿ ಒಮ್ಮೆ ನಿಂತರೆ
ಬದುಕು ಸುಲಭ ಹಾಗೂ ಸ್ವಾಭಿಮಾನದ ಪ್ರತೀಕವಾಗುತ್ತದೆ.-
ಎಲ್ಲದರಲ್ಲೂ ಬರೀ ನೆಗೆಟಿವ್ ಆಗಿ ಯೋಚಿಸುವ ಬದಲಿಗೆ
ಆಗುವುದೆಲ್ಲಾ ಒಳ್ಳೆಯದಕ್ಕೆ
ಎಂದು ಆಗಿರುವುದರಲ್ಲೂ ಪಾಸಿಟಿವ್ ಹುಡುಕಲು ನಿಂತರೆ
ಹತಾಶೆ ಎನ್ನುವುದು ನಮ್ಮನ್ನು ಬಾಧಿಸದು.
ಮುಂದಿನ ನಿರ್ಧಾರ ದ ದಾರಿ ತಾನಾಗಿಯೇ
ಗೋಚರಿಸುತ್ತದೆ.
ಎಂತಹ ಕ್ಲಿಷ್ಟ ಪರಿಸ್ಥಿತಿ, ಸಂಕಷ್ಟ, ಆಪತ್ತು ಎದುರಾದರೂ ಅದು ನಮ್ಮದೇ ಕರ್ಮದ ಫಲ.ಆಪತ್ತಿಗೆ ದೂಡಿದವರು ನಿಮಿತ್ತ ಮಾತ್ರ ಅಷ್ಟೇ.-
ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು
ಆಗ ಹೊರ ಜಗತ್ತನ್ನು ಸುಲಭವಾಗಿ ತಿದ್ದಬಹುದು
ಸಮಾಜ ಅದೊಂದು ದರ್ಪಣದಂತೆ.
ನಾವು ಅತ್ತರೆ ಅದೂ ಅಳುತ್ತದೆ.ನಕ್ಕರೆ ನಗುತ್ತದೆ..
ಅಂದರೆ ನಾವೇನು ಸಮಾಜಕ್ಕೆ ನೀಡುತ್ತೇವೋ
ಅದನ್ನೇ ಸಮಾಜ ನಮಗೂ ಮರಳಿ ನೀಡುತ್ತದೆ.-
ಸುತ್ತಲೂ ಹೊಗಳು ಭಟರಂತೆ ಮಂದಿ ತುಂಬಿ ತುಳುಕಿರಲಿ
ಎನ್ನುವ ಕಾರಣಕ್ಕಾಗಿ ನಿನ್ನ ಆತ್ಮಸಾಕ್ಷಿಯ
ವಿರುದ್ಧ ಬದುಕಲು ಸನ್ನದ್ಧನಾಗಬೇಡ.
ಬದಲಿಗೆ ನೇರ ನಿಷ್ಠುರ ಎನಿಸಿ,ನೀ ಒಂಟಿ ಆದರೂ ಸರಿ,ಸತ್ಯಕ್ಕೆ ಬದ್ಧನಾಗಿ ಬಾಳು.
ಏಕೆಂದರೆ ಸತ್ಯಕ್ಕೆ ಎಂದಿಗೂ ಸಾವಿಲ್ಲ. ಸುಳ್ಳು ಎಂದಿಗೂ ಶಾಶ್ವತವಲ್ಲ.ಜಗತ್ತೇ ಕೈ ಬಿಟ್ಟರೂ ಸತ್ಯ ನಿನ್ನ ಕೈ ಬಿಡದು..ಜಗತ್ತು ಚರ್ಮ ಮಾಂಸ ತುಂಬಿದ ತೊಗಲಿನ ಅಂದಕ್ಕೆ ಮಾರು ಹೋಗುತ್ತದೆ. ಆದರೆ ಸತ್ಯ ನಿನ್ನ ಅಂತರಂಗದ ನಿಶ್ಕಲ್ಮಶ ಸೌಂದರ್ಯಕ್ಕೆ ಮಾರು ಹೋಗುತ್ತದೆ.-