ಬದುಕಿಗೆ ಬಂದು, ಬಂಧುರವಾದ ನಿನ್ನೊಡನಾಟದ ಬಂಧಕ್ಕಾವ ಹೆಸರು?
-
Naresh Kamath
(✍ ನರೇಶ್ ಕಾಮತ್)
2.5k Followers · 1.8k Following
ನಮಸ್ಕಾರ 🙏
ನನ್ನೂರು ಶಿವಮೊಗ್ಗ, (ರಸಋಷಿಯ ನೆಲ)
ನನ್ನ ಬಗ್ಗೆ ಹೇಳೋಕೆ ಹೆಚ್ಚೇನೂ ಇಲ್ಲ.
ಬರೆಯೋದು ಸ್ವಲ್ಪ ಹೆ... read more
ನನ್ನೂರು ಶಿವಮೊಗ್ಗ, (ರಸಋಷಿಯ ನೆಲ)
ನನ್ನ ಬಗ್ಗೆ ಹೇಳೋಕೆ ಹೆಚ್ಚೇನೂ ಇಲ್ಲ.
ಬರೆಯೋದು ಸ್ವಲ್ಪ ಹೆ... read more
Joined 28 January 2018
18 AUG AT 1:39
ಬೊಗಸೆ ಕಂಗಳೊಳು ಹುಟ್ಟಿದ ಕನಸುಗಳ ಪೋಷಿಸುವ ಕನಸಿಗೆ! ನಿರ್ಲಕ್ಷ್ಯಪೂರ್ಣ ನಿರುತ್ತರದ ಕೊಡುಗೆ ಸಮಂಜಸವೇ?
-
18 AUG AT 1:30
ಮನಕೆ ಮೈತ್ರಿಯ ಮತ್ತೇರಿಸಿ ಮತ್ತೆ ಹತಾಷೆಯ ಭಾರ ಹೊರಿಸುವ ಹುನ್ನಾರವಾದರೂ ಹೇಗೆ ಮಾಡಿದ್ದಿ?
-
18 AUG AT 1:24
ಒಲವಿಂದ ಒಲಿವ ಒಲವಿಗಾಗಿ ಹಪಹಪಿಸುವ ಹೃದಯವೇ! ಮತ್ತೆ ಮತ್ತೆ ಮೋಸ ಹೋಗದಿರು! ಇಲ್ಲಿ ಒಲವಿಗೂ ಒಂದು ಬಣ್ಣವಿದೆ! ಸುರಿವ ಮಳೆಗೆ ಮೈಯೊಡ್ಡಿ ನಿಂತು ರಂಗೇರಲಾರದೊಲವಿದು! ದೂರವಿರು..
-
18 AUG AT 1:23
ಮೋಸವರಿಯದ ಮನದಿ
ಮೂಡಿಬಂದ ಮೋಹ!
ಮನ ಮನಗಳ ಹೃದಯಪೂರ್ವಕ
ಮಿಲನ ಮೇಳೈಸಿ ಮತ್ತೆ ಮತ್ತೇರಿಸುವ
ನಿನ್ನ ಮೋಹಕ ಕಂಗಳ ಮೋಹಿ ನಾ..!-
12 JUL AT 0:25
ಅವಳೆಂದರೆ! ಎನ್ನೆದೆಯೊಳಗೆ ಅನುಕ್ಷಣವೂ ಅನುರಣಿಸಿ ಬೆಸೆದುಬಿಡುವ ಅನುಬಂಧದ ಸಂಕೋಲೆ..
-