ಈಗೀಗ ಎಲ್ಲದರ ಮೇಲೆ ಒಂದು
ರೀತಿಯ ನಿರ್ಲಕ್ಷ್ಯ ಆವರಿಸಿ ಬಿಟ್ಟಿದೆ,
ಋಣ ಸಂದಾಯ,
ಋಣ ಇದ್ದಷ್ಟು ದಿನ ಎಲ್ಲವೂ
ಎಂಬ ಸತ್ಯ ಅರಿವಾದ ಕ್ಷಣದಿಂದ..-
ನೀ ಬದುಕಿಗೆ ಬರುವ ತನಕ ಒಲವೆಂದರೆ ನನಗೆ ತಿರುಕನ ಕನಸೇ ಆಗಿತ್ತು ದೊರೆ....
ನೀ ಬಂದ ತರುವಾಯವೆ ಬದುಕಿನ ಪ್ರತಿ ಹೆಜ್ಜೆಗಳು ಸಹ ರಂಗಿನ ಓಕುಳಿ ಚೆಲ್ಲಲು ನಿಂತಿದ್ದು..
ಪ್ರತಿ ಮೌನವು ಕೂಡ ಮಾತಿನ ಚಕಮಕಿಗೆ ಇಳಿದಿದ್ದು.......-
ಒಲವೆಂದರೆ ಹಗಲು ಕಳೆದು ಇರುಳು ಆಗುವ , ಯೌವನ ಕಳೆದು ಮುಪ್ಪಾಗುವ
ಪಯಣಕ್ಕೆ ಸಾಕ್ಷಿ ಅಲ್ಲ..
ಬದುಕಿನ ತೀರದಲ್ಲಿ ಅಸಹಾಯಕತನವನ್ನು ಚಿಮ್ಮಿಸುವ ಚಿಲುಮೆ,
ಸೋಲಿನ ಸರಪಳಿಯನ್ನು ಗೆಲುವಿನ ಹಾರ ಆಗಿಸುವ ಅಂತರ್ಶಕ್ತಿ...
ಎಲ್ಲವೂ ಕಳೆದರೂ ಕಳೆಯದ ಕಾವಲು ..
ಕಳೆದು ಹೋಗುವ ಕಾಲದ ಜೊತೆ
ಕಾಲವಾಗದೆ ಉಳಿಯುವ ನೆನಕೆ...-
ನೀ ಬಂದ ಮೇಲೆ ತಾನೇ ನಿರ್ಭಾವುಕತೆಯೆಲ್ಲ ಮತ್ತೆ ಜೀವ ತಳೆದಿದ್ದು.
ನಿನ್ನಿಂದಲೇ ತಾನೇ ಬದುಕನ್ನ ಮತ್ತಷ್ಟು ಜೀವಿಸಬೇಕು ಎನಿಸಿದ್ದು ...-
ನನ್ನ ಬದುಕಿನ ಆಶಾ
ಗೋಪುರವೆಲ್ಲ
ನಿನ್ನ ಹೆಸರಿನ ಸಂಘವನ್ನೇ
ಸುಪರ್ದಿಗೆ ಪಡೆಯುತ್ತಲಿದೆ..
ಕಟ್ಟುವ ಕನಸುಗಳ ಕಸುವು
ನಿನ್ನೆಡೆಗೆ ಕೈ ಚಾಚಿ ನಿಂತಿದೆ...
ಬದುಕೆಂದರೆ ಭರವಸೆಯ ಕೂಟ..
ಎಲ್ಲ ಸಂಗಮಗಳ ಅಂತಿಮ ಗಮ್ಯ
ನೀನೇ ಆಗಿರುವಾಗ ಮತ್ಯಾವ
ನಿಲ್ದಾಣ ಹುಡುಕಲಿ....
-
ನಿನ್ನ ತಲುಪಲೇ ಬೇಕು ಎಂಬ
ಉತ್ಕಟತೆ ಈಗೀಗ ನನ್ನಲ್ಲಿ
ಜೀವಂತವಾಗಿ ಉಳಿದಿಲ್ಲ...
ನಿನ್ನ ಕಾಣಲು ಕಂಡ ಚಡಪಡಿಕೆಗಳು
ಕೂಡ ಈಗೀಗ ನಿರ್ಜೀವಂತ ...
ಮತ್ಯಾವ ಆಸೆಗಳು ಹುಟ್ಟಲಾರವು
ಮೌನವ ಮಾತಾಗಿಸಲು,
ನಿನ್ನದೇ ಜಪವ ಧ್ಯಾನವಾಗಿಸಲು. .....-
ಪ್ರತಿ ತಿರುವುಗಳು ಸಹ ಒಂದು ಮಹತ್ತರ ಬದಲಾವಣೆಯ ಬೇಡುತ್ತದೆ ..
-
ಅದೆಷ್ಟೋ ಜನರ ತ್ಯಾಗ,
ಬಲಿದಾನದ ಪ್ರತೀಕ ಈ ಸ್ವಾತಂತ್ರ್ಯ
ಅಷ್ಟು ಜನರ ಪರಿಶ್ರಮದ ರೂಪಕವನ್ನು ಕಾಪಿಡಬೇಕಾದ ಜವಾಬ್ದಾರಿ ನಮ್ಮದು...
ಭಿನ್ನ ಭಿನ್ನವಾಗಿ ಚದುರಿ ಹೋಗುವ
ಬದಲು,
ವಿಭಿನ್ನವಾಗಿ ಜೊತೆ ನಡೆಯೋಣ...
77 ನೆಯ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು ..-