.............
-
ಅರಿಯದೆ ದೊರಕಿತು ಈ ಬಂಧ🤗
ಬೆಸೆಯಿತೊಂದು ಅನುಬಂಧ💝
ಪ್ರೀತಿ ಕಾಳಜಿ ತೋರುವ ತಂಗಿಯಾದೆ👭
ಸ್ನೇಹದೊಲವು ತೋರುವ ಗೆಳತಿಯಾದೆ👩❤️💋👩
ನಿನ್ನೊಳಗಿನ ಹೃದಯವಂತಿಕೆ ಎಂದೂ ಮಾಸದಿರಲಿ❤️
ನಿನ್ಮೊಗದ ಮೇಲೆ ಸದಾ ನಗುವಿರಲಿ😍
ಸದಾ ಬೆಳಗಲಿ ನಿನ್ನೊಳಗೆ ಭರವಸೆಯ ಜ್ಯೋತಿ✌️
ಹೀಗೆ ಇರಲಿ ನಮ್ಮ ಈ ಪ್ರೀತಿ💟
ನೀನತ್ತ ಮೊದಲ ದಿನವಿಂದು💐
ನಾ ಬಯಸುವೆನು ನಿನಗೆ ಶುಭವಾಗಲೆಂದು👍
👇👇👇👇👇-
ಮುಖವಾಡ ಧರಿಸಿದ ಜನರ ಮಧ್ಯೆ
ಸಿಕ್ಕಳು ಶುದ್ಧ ಮನಸ್ಸಿನ ಸ್ನೇಹಿತೆ..
ಸಹಾಯ ಹಸ್ತ ಚಾಚಿ ದೂರ ಮಾಡಿದಳೆನ್ನ ಖಿನ್ನತೆ!
ಜಾತಿ ರಾಜಕಾರಣವ ಮೆಟ್ಟಿ ನಡೆದೆ ನೀ ನನ್ನ ಜೊತೆ..
ಮರೆಯದಿರು ನೀ ನನ್ನ, ನಿನಗಾಗಿ ಬರೆದಿರುವೆ
ಈ ಪುಟ್ಟ ಕವಿತೆ....
-
❣️ರಶ್ಮಿ❣️
ರೇಷ್ಮೆಯಂತೆ ಕೋಮಲ ನಿನ್ನ ಮನಸ್ಸು
ಜೀವನದ ಮೇಲೆ ಬಾರದಿರಲಿ ಮುನಿಸು
ಬಂದ ಹಾಗೆ ಎಲ್ಲವನ್ನು ನೀನು ಸ್ವೀಕರಿಸು
ಆಗ ನಡೆವ ಪತ ಕಾಣುವುದು ಸೊಗಸು🤗
ಶಿವ ನಿನ್ನ ನೆಚ್ಚಿನ ಆರಾಧ್ಯ ದೈವ
ಪದಗಳಲ್ಲಿ ಹೊರ ಹಾಕುವೆ ಮನದ ಭಾವ
ನೋಯದಿರಲಿ ಯಾವತ್ತೂ ಈ ಮುದ್ದು ಜೀವ
ಬಿಡದಿರು ಎಂದಿಗೂ ನಿನ್ನ ನೈಜ ಸ್ವಭಾವ❤️
ನಕಾರಾತ್ಮಕ ಮಾತುಗಳಿಗೆ ತಲೆಗೊಡದಿರು
ಧೈರ್ಯದಿಂದ ಯಾವಾಗಲೂ ಮುನ್ನುಗ್ಗುತ್ತಿರು
ಸದಾ ಹಸಿರಾಗಿರಲಿ ನಮ್ಮ ಸ್ನೇಹದ ಪೈರು
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಡಿಯರು💐-
ಶಾಹಿಯಲಿ ಪದಗಳ ಅದ್ದಿಸಿ
ಕವನಗಳ ಸೃಷ್ಟಿಸುವ ಪದಗಾಹಿ
ಕ್ಲೇಶವ ತಳ್ಳಿ ಹಾಕಿ ನಗುವಿನಲೇ
ನಗಿಸುವ ಅಂಬರದ ನಕ್ಷತ್ರ
ಕ್ಷೀರದಾರೆಯಂತೆ ನಿಶ್ಕಲ್ಮಷ
ಹೃದಯವುಳ್ಳ ಅಪ್ಪಟ ಮಿಸುನಿ
ಪ್ರಕೃತಿಯ ಸೊಬಗನು
ಸೆರೆಹಿಡಿಯುವ ಛಾಯಾಗ್ರಾಹಕಿ
ಮನದ ಮಂಟಪದಲಿ ಮನೆ
ಮಾಡಿರುವ ನನ್ಮುದ್ದು ಸ್ನೇಹಿ
ಜೀವನದ ಉಯ್ಯಾಲೆಯೂ
ಸದಾ ಖುಷಿಯಿಂದ ಜೀಕುತ್ತಿರಲಿ
ಕನಸುಗಳೆಲ್ಲಾ ನನಸಾಗಿ
ಯಶಸ್ಸಿನ ಶಿಖರ ನಿನ್ನದಾಗಲಿ ❤
ಹ್ಯಾಪಿ ಹುಟ್ಟಬ್ಬ ಅಶು ❤💙❤-
ಕಳೆದೋದ ಹಳೇ ಸ್ನೇಹವೊಂದು ಮರಳಿ ದೊರಕಿತು
ಹಳೆ ಸ್ನೇಹ ಹೊಸ ಭಾವದಲಿ ಬಳಿ ಬಂದಿತು
ನಿನ್ನೊಲವ ಸವಿ ನುಡಿಗೆ ಮನವು ಕುಣಿಯಿತು
ಈ ಸ್ನೇಹವು ಹೀಗೆಯೇ ಇರಲೆಂದು ಮನ ಬಯಸಿತು
-
ನನ್ನೊಲವ ಸೌಧಕ್ಕೆ
ಸ್ನೇಹಿತೆಯಾಗಿ ಕಾಲಿಟ್ಟವಳು😍
ಹೃನ್ಮಂದಿರವನಾಳುವ
ದೇವತೆಯಾಗಿ ಮೆರೆಯುತಿರುವಳು🧡-
ಕಟ್ಟಿಸಲೇ ಬೇಕಿಲ್ಲ ಪ್ರೀತಿಗೆ ನೆನಪಿನ ಸ್ಮಾರಕ
ಇದ್ದರೆ ಸಾಕು ಅವಳ ನೆನಪು ನಿನ್ನ ಸ್ಮ್ರಿತಿಯಲಿ ಜ್ಞಾಪಕ
ಪ್ರೀತಿಯಲಿ ಪ್ರತಿ ಘಳಿಗೆಯೂ ತುಂಬಾ ಕೌತುಕ
ನಿನ್ನ ಪ್ರೀತಿಯ ಸೇವೆಗೆ ಮಾಡಿಕೊ ನನ್ನನು ನೇಮಕ
ಬಾಳಿನುದ್ದಕ್ಕೂ ನಾನಾಗಿರುವೆ ನಿನ್ನ ಪ್ರೀತಿಯ ಸೇವಕ-
ನೀ ಬಯಸಿದಂತೇ ನಾ ನಿನ್ನ ಸ್ನೇಹಿತೆ
ನಿನ್ನ ಬುದ್ದಿಅನುಗುಣವಾಗಲ್ಲಾ ನನ್ನ ಮನಸ್ಸಿಗನುಗುಣವಾಗಿ,
ಸ್ವೀಕರಿಸಿಬಿಡು ಏನನ್ನೂ ಯೋಚಿಸದೆ
ಮರುಕಳಿಸಲಿ ಮನಮೆಚ್ಚಿದ ಸ್ವಚ್ಚಂದ
ಗೆಳೆತನ ಉಸಿರಿರುವವರೆಗೆ...
-