ಸ್ನೇಹಿತರೆ೦ದರೆ ಒಡಲಾಳಕ್ಕಿಳಿದು
ಮನಸಿನಾಳವ ಕದಕಿದ
ಹೃದಯದ ಕದವ ತಟ್ಟಿದ
ಮನಸಿನ ತಡಿಯ ಮುಟ್ಟಿದ
ಅಮೃತತ್ವವನ್ನು ಜೊತೆಯಾಗಿಸಿದ
ಸುಮಧುರ ಮನಗಳು!!!
ನೋವಿನಲ್ಲೂ ಸದಾ ಜೊತೆ
ನಲಿವಿಲ್ಲೂ ಸದಾ ಜೊತೆ
ಅವರೇ ನನ್ನ ಸ್ನೇಹಿತರ ಮನದ ಲತೆ!!!
-
ಎಲ್ಲಾ ರಕ್ತಸಂಬಂಧಗಳನ್ನು ಮೀರಿದ ಬಂಧ...
ಜನುಮ ಜನುಮಗಳು ಕಳೆದರೂ ತೀರಿಸಲಾರದ
ಅನನ್ಯ ಬಂಧ....
ಎಲ್ಲಾ ಸುಖಾ ದುಃಖಗಳನ್ನು ನಾವು ಮೊದಲು ಹಂಚಿಕೊಳ್ಳುವ ಅನುಬಂಧ ....
ಅದೇ ನಮ್ಮ ಸ್ನೇಹ ಹಾಗೂ ಸ್ನೇಹಿತರು...
ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು🤝🤝🤝👥👨❤️👨👩❤️👨👩❤️💋👩
ನಿಮ್ಮ ಗೆಳೆಯರನ್ನು ಎಂದಿಗೂ ಕಳೆದುಕೊಳ್ಳಬೇಡಿ...
ಸ್ನೇಹಿತರೇ ನಮ್ಮ ಶಕ್ತಿ, ಯುಕ್ತಿ, ಧೈರ್ಯ ಎಲ್ಲ....
ನಿಮಗೆ ಎಲ್ಲೇ ಹೋದರು ಅತಿ ಹೆಚ್ಚು ವ್ಯಕ್ತಿಗಳು ಸ್ನೇಹಿತರಾಗಲು ಬಯಸುತ್ತಾರೆ ಎಂದರೆ ಅದು ನಿಮ್ಮ ದೌರ್ಬಲ್ಯ
ಅಲ್ಲ....
ಅತಿ ದೊಡ್ಡ ಶಕ್ತಿ.....
-
ಸ್ನೇಹದ ಒಡಲು ಅಮೂಲ್ಯ ಮುತ್ತು
ಪ್ರೀತಿಪ್ರೇಮ ತುಂಬಿದ ಸಿರಿ ಸಂಪತ್ತು
ಒಳ್ಳೆಯ ಗೆಳೆತನಕ್ಕೆ ಬಾರದು ಆಪತ್ತು
ದುಷ್ಟರ ಸಂಗದಿಂದ ಬರುವುದು ಕುತ್ತು
ನಿಷ್ಕಲ್ಮಶ ಸ್ನೇಹವು ಬೆಲೆಬಾಳುವ ಸ್ವತ್ತು
ಈ ಬಂಧನದಲ್ಲಿದೆ ಅಮೃತಧಾರೆ ತುತ್ತು-
ನೋವ ಮರೆಸಿ ನಗುವ ಮೂಡಿಸುವ,
ಪ್ರತಿ ಹೆಜ್ಜೆಗೂ ನೆರಳಂತೆ ಜೊತೆಯಾಗಿರುವ,
ಸೋಲು ಗೆಲುವಲ್ಲಿ ಪಾಲುದಾರರಾಗಿರುವ,
ರಕ್ತ ಸಂಬಂಧಗಳಿಗು ಮಿಗಿಲಾಗಿರುವ,
"ಮಧುರ ಸ್ನೇಹ ಅನುಬಂಧವೇ"
ಬದುಕಲಿ ಸಿಗುವ ಬಹು ದೊಡ್ಡ ಉಡುಗೊರೆ...!
ಬದುಕಿನ ಪಯಣದಲಿ ಜೊತೆಯಾಗಿರುವ ನನ್ನೆಲ್ಲಾ ಆತ್ಮೀಯ ಮನಸ್ಸುಗಳಿಗೆ.,
ಸ್ನೇಹಿತರ ದಿನದ ಶುಭಾಶಯಗಳು..!-
ಸ್ನೇಹವೆಂದರೆ ಸುಂದರ ಸಂಬಂಧ
ಅದಕ್ಕಿಲ್ಲ ಯಾವುದೇ ನಿರ್ಬಂಧ
ಸ್ಪಂದಿಸುವ ಮನಗಳು ಬೆರೆತಿರುವ ಅನುಬಂಧ
ಬದುಕಿನುದ್ದಕ್ಕೂ ಕಷ್ಟ ಸುಖಗಳಲ್ಲಿ ನಮಗೆ ಹೆಗಲು ಕೊಟ್ಟು ಜೊತೆಯಲ್ಲಿರುವ ಈ ಬಂಧ
ಗೆಳತನವು ಜೀವಿಸಿರುವುದೇ ನಂಬಿಕೆಯೆಂಬ ಉಸಿರಿನಿಂದ
ಜೀವನದಲ್ಲಿ ಸಂಪಾದಿಸಬೇಕು ಸದಾಕಾಲ ನಮ್ಮ ಜೊತೆ ಉಳಿಯುವ ಸ್ವಚ್ಛಂದ ಮನಗಳ ಸ್ನೇಹ-ಸಂಬಂಧ
-ಶಿವು-
ನೀನಗೆ ಸ್ವಲ್ಪ ಜನ ಸ್ನೇಹಿತರು ಇದಾರೆ ಅಂತಾ ಕೋರಗಬೇಡ
ಏಕೆಂದರೆ.
ಸಿಂಹದ ಜೋತೆ ಸ್ನೇಹ ಮಾಡೋದು ಇನ್ನೂಂದು ಸಿಂಹಾನೆ.! 🤟
-
ಸ್ನೇಹವಿದು ಸುಂದರ,
ಸ್ನೇಹವಿದು ಅಮರ.
ಸ್ನೇಹದ ಪ್ರೀತಿಯ ಸಿಂಚನ,
ಮನಸ್ಸುಗಳ ಪ್ರೇಮ ಬಂಧನ.
ವರ್ಷದಲ್ಲಿ ನೂರು ಸ್ನೇಹಿತರ
ಮಾಡಿಕೊಳ್ಳುವುದು ಸ್ನೇಹವಲ್ಲ,
ಸ್ನೇಹಿತರು ಜೊತೆ ನೂರು ವರ್ಷಗಳು
ಜೊತೆಯಾಗಿರುವುದು ನಿಜವಾದ ಸ್ನೇಹ.
ನನ್ನ ಎಲ್ಲಾ ಮನಸ್ಸಿನ ಬಂಧಿತರಿಗೆ
ಸ್ನೇಹಿತರ ದಿನದ ಶುಭಾಶಯಗಳು-