ಮತ್ಯಾಕೆ ನಿನಗೆ ಇನ್ನೊಬ್ಬರ ಹಂಬಲ
ಆಮಿಷಗಳಿಗೆ ನೀನಾಗಬೇಡ ಚಂಚಲ
ನಿಷ್ಠೆ ಪ್ರಾಮಾಣಿಕತೆಯಿಂದ ದುಡಿದರೆ
ನೀನಾಗುವೇ ಸಬಲ-
ಉಸಿರುಗಟ್ಟುವ ಬಂಧಗಳಿಂದ
ಹೆಸರಿಲ್ಲದಂತೆ ದೂರವಾಗಬೇಕು
ನಿನ್ನನ್ನು ಮರೆತು ಬದುಕುವ ವ್ಯಕ್ತಿಗಳಿಂದ
ತಡವಿಲ್ಲದೆ ಮರೆಯಾಗಬೇಕು
ಬಣ್ಣದ ಮಾತುಗಳ ಪ್ರಪಂಚದಿಂದ
ಬೇಡವೆನ್ನುವಷ್ಟು ಬದಲಾಗಬೇಕು
ನಿನ್ನ ಕಷ್ಟ ನಷ್ಟಗಳಿಗೆ ಸ್ಪಂದಿಸಿದ ಮನಗಳಿಂದ
ಮೌನದಿಂದ ಹಿಂದೆ ಸರಿಯಬೇಕು-
ನನ್ನ ಮರೆತು ನಡೆಯುವರೊಂದಿಗೆ
ನಾ ಬೆರೆತು ಬದುಕಲು ಹೋದರೆ
ನನ್ನ ಮನಸ್ಸಿಗೆ ಮೋಸ ಮಾಡಿದಂತೆ,
ನನ್ನರಿತವರೊಂದಿಗೆ ನಂಬಿಕೆಯಿಟ್ಟು
ನೆಮ್ಮದಿಯಿಂದ ಜೀವಿಸಿದರೆ
ಆ ಭಗವಂತನು ಸಹ ಮೆಚ್ಚುವನಂತೆ
-
ನನ್ನವ್ವ
ಸದಾ ಮಕ್ಕಳಿಗಾಗಿ ಶ್ರಮಿಸುವ ಜೀವ
ಅವಳೇ ನನ್ನ ಪ್ರೀತಿಯ ಅವ್ವ
ಸಾವಿರ ಕಷ್ಟಗಳು ಎದುರಾದರೂ ಸದಾ ಧೈರ್ಯ
ತುಂಬುವಳು ನುಂಗುತ್ತಾ ನೋವ
ಬೆಡಗು ಬಿನ್ನಾಣಗಳಿಲ್ಲದೆ ಮತ್ತೊಬ್ಬರ ಮಾತುಗಳ
ಮನ್ನಿಸದೆ ಬೀರುವಳು ಮುಗ್ಧ ನಗುವ
ಅದೇಷ್ಟೇ ತಪ್ಪುಗಳು ಸಿಟ್ಟು ಸೆಡೆವುಗಳ ಮಾಡಿದರು
ಪ್ರೀತಿ ಮಮತೆಯಿಂದ ಕ್ಷಮಿಸುವ ಜೀವ
ನನ್ನ ಪ್ರತಿ ಜನ್ಮದಲ್ಲೂ ನಿನ್ನ ಮಗನಾಗಿ ಜನಿಸಿ
ಅದೇಷ್ಟೇ ಸೇವೆ ಮಾಡಿದರು ತೀರದು ನನ್ನವ್ವನ ಋಣವ-
#ನನ್ನ ನಂಬಿಕೆ
ಕೆಲವು ನಂಬಿಕೆಟ್ಟ ಮನಸ್ಥಿತಿಗಳು
ಹಲವು ನಂಬದೇ ಕೆಟ್ಟ ಪರಿಸ್ಥಿತಿಗಳು
ಇನ್ನುಳಿದಿರುವವು ನಂಬುವಂತೆ ನಟಿಸಿದ ಉಪಸ್ಥಿತಿಗಳು-
ಮಹಿಳೆ
ಮ - ಮುಗ್ಧ ಮ-ನಸ್ಸಿನ ದೇವತೆ
ಹಿ - ಸದಾ ಎಲ್ಲರ ಹಿ-ತವನ್ನು ಕಾಪಾಡುವಳು
ಳೆ - ಕ್ಷಮಯಾಧರಿತ್ರಿಯಾಗಿ ಪ್ರಕೃತಿಯಿಂದ ತುಂಬಿರುವ ಇ-ಳೆ
-
ಅವಳೊಂದು ಪುಟ್ಟ ಕಲ್ಪನೆ
ಆ ಮುಗ್ಧ ಮನಸ್ಸಿಗೆ ಮನಸೋತೇನೆ
ಅವಳಂದಕೆ ನಾ ಮರುಳಾದನೆ
ನೀಡಿವಳು ಮನಸ್ಸಿಗೆ ಮುದ್ದಾದ ಯಾತನೆ
ಮೌನದಿ ಕಾಡುವಳು ಸುಮ್ಮನೆ
ಅದೆಷ್ಟೇ ಪದಗಳ ಗೀಚಿದರು ಮುಗಿಯದವಳ ವರ್ಣನೆ
ಸಣ್ಣ ಸಂಶಯ ಅವಳ ಪ್ರೀತಿಯ ಪಡೆಯಲು ನಾ ಯೋಗ್ಯನೆ
ತಿಳಿಸುವಷ್ಟರಲ್ಲಿ ಮರೆಯಾದಳು ನನ್ನ ಪ್ರೇಮ ನಿವೇದನೆ-
ಈ ನನ್ನ ಬದುಕಿನೊಳಗೆ
ಕಾಡುವ ಕಷ್ಟಗಳುಂಟು
ಈಡೇರದ ಆಸೆಗಳುಂಟು
ನನಸಾಗದ ಕನಸುಗಳುಂಟು
ನಂಬಿಕೆ ಇರದ ನೆನಪುಗಳುಂಟು
ನೊಂದ ನೋವುಗಳುಂಟು
ಕ್ಷಣಮಾತ್ರ ನಗಿಸುವ ಸಂತೋಷವುಂಟು
ಹೇಳದೆ ಕೇಳದೆ ಬಂದು ಹೋದ ಬಂಧಗಳುಂಟು
ಸಾಕೆನಿಸುವ ಸಂಬಂಧಗಳುಂಟು
ಬದುಕಿನ ಅರ್ಥವ ಸಾರಿ ಸಾರಿ ಹೇಳುವ ನೀತಿ ಪಾಠಗಳುಂಟು
ಆದರೆ ಸದಾ ಜೊತೆಗಿರುವ ಸ್ವಲ್ಪ ಮಾತ್ರ ಸ್ನೇಹಿತರುಂಟು
ಬೇಕಾದಾಗ ಭಗವಂತ ಕೈಹಿಡಿದಿರುವ ನೆಮ್ಮದಿಯುಂಟು
ಇಂದಲ್ಲ ನಾಳೆ ಗೆಲ್ಲುವ ಎಂಬ ಭರವಸೆಯುಂಟು-
#ಬೇಡಿದ ಭಕ್ತರಿಗೊಲಿವ ಭಕ್ತವತ್ಸಲ
ಹರನಾಗಿ ಅರಿವು ಮೂಡಿಸುವ
ಶಿವನಾಗಿ ಶಕ್ತಿ ತುಂಬುವ
ಪರಮೇಶ್ವರನಾಗಿ ಪ್ರೀತಿಯಿಂದ ಪೋಷಿಸುವ
ಮಹೇಶ್ವರನಾಗಿ ಮೌಡ್ಯತೆಯ ತೊಲಗಿಸುವ
ಕೈಲಾಸದೀಶನಾಗಿ ಕಷ್ಟಗಳಲ್ಲಿ ಕೈ ಹಿಡಿಯುವ
ಸ್ಮಶನವಾಸಿಯಾಗಿ ಸನ್ಮಾರ್ಗದಲ್ಲಿ ನಡೆಸುವ
ಬಿಲ್ವಪ್ರಿಯನಾಗಿ ಬದುಕ ಬಂಗಾರವಾಗಿಸುವ
ಶಂಕರನಾಗಿ ದುಷ್ಟರನ್ನು ಶಿಕ್ಷಿಸುವ
ಜಗದೀಶ್ವರ ನಾಗಿ ಜಗತ್ತನ್ನು ರಕ್ಷಿಸುವ
ಈಶ್ವರ ನಾಗಿ ಈ ನಶ್ವರ ಬದುಕಿಗೆ ನೆಮ್ಮದಿ ನೀಡುವ
ಮಹಾಶಿವರಾತ್ರಿಯಂದು ಮನಸಿಟ್ಟು ಭಜಿಸಿದರೆ
ಮಹಾದೇವನಾಗಿ ಮನ:ಶಾಂತಿಯ ನೀಡಿ ಆಶೀ್ವದಿಸುವ
ಓಂ ನಮಃ ಶಿವಾಯ-
#ನಿನ್ನನ್ನು
ಬಳಸಿಕೊಂಡವರ ಮುಂದೆ ಮತ್ತೊಬ್ಬರು
ಬೆರಳು ಮಾಡದಂತೆ ಬೆಳೆಯಬೇಕು
ಆದರೆ
ಉಳಿಸಿಕೊಂಡವರೊಂದಿಗೆ ಯಾರೊಬ್ಬರೂ
ಊಹಿಸದಂತೆ ಜೊತೆಯಾಗಿ ಬದುಕಬೇಕು-