ತೀರದಿ ಮೋಡ ಕವಿದ
ವಾತಾವರಣ ನೀಡಿದಂತೆ ಭಯದ
ಅನುಭವವ ದೋಣಿ ತೀರವ ತಲುಪಿದರೆ ಸಾಕೆನ್ನುವ ಮನ-
ಗುಂಡಿಗಳ ದರ್ಬಾರು ಜೋರಾಗಿತ್ತು
ಅಲ್ಲಲ್ಲಿ ಈಜುಕೊಳಗಳು ರಚನೆಯಾಗಿತ್ತು
ಇದು ನಮ್ಮ ದೇಶ ಅಂತ ಪದೆ ಪದೆ ನೆನಪಿಸುತ್ತಿತ್ತು-
ಈ ದೇಹವ ನೀಡಿದ ದೇವರಿವಳು..
ಈ ಜಗವ ತೋರಿದ ಕಣ್ಣು ಇವಳು..
ಎದೆ ಬಡಿತದ ಉಸಿರು ಇವಳು..
ತೊದಲು ಕಲಿಸಿದ ಮೊದಲ ಗುರುವು..
ಬದುಕಿನ ಪಯನದಿ ಕಷ್ಟವ ಸಹಿಸಿದವಳು..
ಹಸಿದ ಜೀವಕೆ ಅಮೃತವ ನೀಡಿದವಳು..
ನಿನ್ನ ಮಡಿಲಲೇ ಮಲಗುವ ಮಗುವು ನಾನು..
ಮಡಿಲಲೇ ಮುಗಿಲ ನೀಡಿದವಳಿಗೆ ನೀಡಲಿ ಏನು ?
ಏನೆಂದು ವರ್ಣಿಸಲಿ ಅವಳ ಗುಣವನು ..
ಅವಳೇ ಕಲಿಸಿದ ಪದಗಳಲಿ ಇನ್ನೂ ..
-
ಈ ಮನವು ಬಯಸಿದೆ
ನಿನ್ನ ಒಲವ ಬಣ್ಣಿಸಲು
ಹೃದಯದ ಹಾಳೆಯಲಿ
ಏನೆಂದು ಬರೆಯಲಿ
ಕವನವೇ ನೀನಾಗಿರಲು ...-
ಹೇ ಸುತ 'ಪವನ '
ನಿನ್ನ ನೆನೆದ ಮನ ಪಾವನ
ನಿನ್ನ ನೋಡಿದೊಡೆ ಮೂಡುವುದು 'ಭಕ್ತಿ'
ನೀನಾಗಿರು ನನ್ನ ಬಾಳ 'ಶಕ್ತಿ'
ಕರೆವರು ನಿನ್ನ 'ಮಾರುತಿ'
ಜಗದಗಲ ನಿನ್ನ ಕೀರುತಿ
ಭಕ್ತರಿಗೆ ನೀ 'ರಕ್ಷಕ'
ದುಷ್ಟರಿಗೆ ನೀ 'ಶಿಕ್ಷಕ'
ಲೋಕದಿ ನೀ 'ಚಿರಂಜೀವಿ'
ದುರ್ಬಲ ಮನಕೆ ನೀ 'ಸಂಜೀವಿನಿ'
ನೀ ಭಜಿಸುವೆ ನಿತ್ಯ ನಾಮ
ಅದುವೇ 'ಜೈ ಶ್ರೀರಾಮ'
ಭಜಿಸಲು ನಾ ನಿನ್ನ
ಬಿಡದಿರು ನೀ ನನ್ನ-
ಬಂದ ಬಂದ ಬಂದ ನೋಡು
ರಾಯಲ್ ಬ್ರ್ಯಾಂಡು ಅಣ್ಣಾಬಾಂಡೂ
ಕನ್ನಡಕ್ಕೆ ಇವರೇ ಜೇಮ್ಸ್ ಬಾಂಡೂ
ನಾಡ ತುಂಬ ಇವರದೇ ಸೌಂಡೂ
ಸಿಂಪ್ಲಿ ಸಿಟಿಗೆ ಇವರೇ.. ಬ್ರ್ಯಾಂ..ಡೂ .....!
-
ಮೈ ಸೋಕಿರಲು ಬಿಸಿಯಾಗಿದೆ
ಮರಳಿ ನೆನಪಿಸಿದಂತಿದೆ
ಬೇಸಿಗೆ ಕಾಲ ಶುರುವಾಗುತ್ತಿದೆ ಎಂದು-