ಬದುಕಿನ
ಪ್ರತಿ ಕ್ಷಣಗಳು
ಕಳೆದು ಹೋಗುತ್ತಿವೆ
ಈ ಪಯಣ
ಕೊನೆಯಾಗಲು...!-
ಸಾಗುವ ಪ್ರತಿ ಹೆಜ್ಜೆಯ ಆಯ್ಕೆಯು ನನ್ನದೇ ಆಗಿರುವಾಗ..
ತುಸು ದೂರ ಜೊತೆ ಸಾಗಿ ಹೋದವರನ್ನು ನಾನು ಹೇಗೆ ದೂರಲಿ...
ಎಲ್ಲವೂ ನಾನು ಕಲಿಯಬೇಕಾದಾಗ ಒಂದು ಅನುಭವದ ಪಾಠವೇ...
ಆ ಅನುಭವಗಳಿಂದ ನನ್ನನ್ನು ನಾನು ಸರಿಪಡಿಸಿಕೊಳ್ಳುತ್ತಾ...
ಸಾಗುತ್ತಿರುವೆ ಗಮ್ಯದ ಕಡೆಗೆ...!-
ಕೈಜಾರಿ ಹೋದ ಅಪರೂಪದ ಸ್ವಾತಿ ಮುತ್ತು
ಅವಳು..
ಮತ್ತೆಂದು ಸಿಗದು ಎಂದು ತಿಳಿದಿದ್ದರು.,
ಹುಡುಕುವ ನೆಪದಲಿ ಕಾಲ ಕಳೆಯುತ್ತಿರುವ ಹುಂಬ
ಅವನು..!-
ನನ್ನೆದೆಯ ಗೂಡಿಗೆ.,
ಬಲಗಾಲಿಟ್ಟು ಬಂದವಳು..
ಜೀವ ಕೊಟ್ಟ
ಅಮ್ಮನ ಪ್ರತಿರೂಪದಂತವಳು...!-
ಅವಳೆಂದರೆ...
ಮುಂಜಾನೆಯ ಕನಸಿನಲ್ಲಿ ಕಂಡ
ಅಸ್ಪಷ್ಟ ಚಿತ್ರಣದಂತವಳು..
ನೆನಪಿಗು ತಾಕದೆ.,
ಭಾವಕ್ಕೂ ಸಿಗದೆ.,
ಬಿಡದೆ ಸುಮ್ಮನೆ ಕಾಡುತ್ತಿರುವಳು..!-
ಪ್ರೀತಿಯೆಂದರೆ ಬೇರೇನಿಲ್ಲ.,
ನೀ ನನ್ನನ್ನು.,
ನಾ ನಿನ್ನನ್ನು.,
ಬಲವಾಗಿ ನಂಬುವುದು ಅಲ್ಲವೇ...!-
ಸುಳ್ಳನ್ನು ಸಂಭ್ರಮಿಸುವ ಈ ಲೋಕಕ್ಕೆ.,
ಸತ್ಯವನ್ನು ಪರಿಗಣಿಸಲು ಪುರಾವೆಗಳು ಬೇಕಂತೆ..!-
ಉಳಿಪೆಟ್ಟು ತಿಂದ ಶಿಲೆಗಾದರೂ ರೂಪ ಸಿಕ್ಕಿತು.,
ಒಲವಿನಲ್ಲಿ ನೊಂದು ಬೆಂದ ಮನಸ್ಸಿಗೆ ಬೆಲೆಯೇ ಇಲ್ಲ ಗಾಲಿಬ್..!-
ಜಗದ ಮುಖವಾಡಗಳಿಂದ ದೂರ ಇರಲು ಸಾಧ್ಯವಾಗಲಿಲ್ಲ.,
ರಂಗುರಂಗಿನ ಪ್ರಪಂಚವಿದು, ನಮ್ಮಷ್ಟಕ್ಕೆ ನಾವಿದ್ದರೆ ತಪ್ಪಿಲ್ಲ..!-
ಈ ಬದುಕು ಹೇಗೆ ತಾನೇ ಬರೀದಾದಿತು.,
ನಿನ್ನಯ ರಾಶಿ ನೆನಪುಗಳು ನನ್ನ ಜೊತೆ ಇರುವಾಗ...!-