ಅವರಿಗೆ ಬಾರದ ಭಾವನೆ,
ನಿನಗೆ ಬಾರವಾದ ಭಾವನೆ.
ಮುಖ ನೋಡಿ ಅಷ್ಟೇ ಹೇಳಬಹುದು ಅವರು ಅಳುತ್ತಿದ್ದಾರೆ, ನಗುತ್ತಿದ್ದಾರೆ ಇಲ್ಲ ಹಳಸಿಕೊಂಡಿದ್ದಾರೆ ಅಂತ.
ಮನಸ್ಸು ನೋಡು ಅಂದ್ರೆ ಹೇಗೆ ನೋಡೋಕೆ ಆಗುತ್ತೆ ಅವರ ಮನಸ್ಸು ಅವರಿಗೆ ಸರಿಯಾಗಿ ಗೊತ್ತಿರಲ್ಲ..-
ಹುಟ್ಟಿದ್ದು ಧನಂಜಯಪುರ, ಓದಲ... read more
ಹೊಸ ವರ್ಷ ಹೊಸ ಕನಸುಗಳ ಹಾದಿ,
ಮನುಷ್ಯನ ಆಸೆಗಳು ಅಂತ್ಯವಿಲ್ಲ ಆದಿ.
ಪುಸ್ತಕದ ಪುಟ ಅಷ್ಟೆ ತಿರುಗಿಸಿದ್ದೇವೆ,
ಇನ್ನ ಓದಿ ಮುಗಿದಿಲ್ಲ ಬದುಕಿನ ಪುಸ್ತಕ.
ತಪ್ಪು ಸರಿಗಳ ಲೆಕ್ಕಾಚಾರದಲ್ಲೇ ಇದ್ದೇವೆ,
ತಪ್ಪು ತಿದ್ದಿಕೊಳ್ಳಲ್ಲಿ ಮನುಷ್ಯನ ಮಸ್ತಕ.-
ಹೃದಯ ಕೆಣಕಿದೆ ನಿನ್ನ ತುಟಿಯ ತುಂಟತನ,
ತಬ್ಬಿಕೊಂಡಿವೆ ತೋಳುಗಳು ಮುರಿದು ಮೌನ.
ನಿನ್ನ ಅಂದ ನನ್ನ ಕಣ್ಣಿಗೆ ಸಿಹಿಯಾಗಿದೆ,
ಕೆಂಪಾದ ತುಟಿ ಅಂಚಲಿ ಜೇನು ಜಾರಿದೆ.-
ಜ್ಞಾನ ಎಲ್ಲಾರ ಒಳಗೂ ಇರುತ್ತೆ ಆದ್ರೆ
ಅದ ಆಚೆ ತರೋದು ಒಬ್ಬ ಒಳ್ಳೆ
ಗುರುವಿಂದ ಮಾತ್ರ ಅಷ್ಟೆ ಸಾಧ್ಯ..
ನನ್ನ ಜೀವನದಲ್ಲಿ ಬಂದು ಜ್ಞಾನದ
ಅರಿವು ಮೂಡಿಸಿ ಒಳ್ಳೆ ಮಾರ್ಗದರ್ಶನ
ತೋರಿದ ನನ್ನೆಲ್ಲಾ ಗುರುಗಳಿಗೂ ಧನ್ಯವಾದಗಳು.
ಶಿಕ್ಷಕರ ದಿನಾಚರಣೆ ಶುಭಾಶಯಗಳು..-
ಈ ದಾಂಪತ್ಯ ಜೀವನಕ್ಕೆ ತುಂಬಿದೆ ವರ್ಷ ಮೂರು,
ಗೆಳತಿಯಾಗಿ ಜೊತೆ ಇರು ಇನ್ನೂ ವರುಷ ನೂರು.
ಬಾಳ ಕತ್ತಲ ಸರಿಸುತ್ತಾ ಸಾಗುವ ಜೊತೆಯಾಗಿ,
ಕಷ್ಟದಲ್ಲೂ ಸಿಹಿ ಉಂಡು ಜೀವಿಸುವ ಹಿತವಾಗಿ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಶ್ರೀಮತಿ.-
ಬಾರಿಸು ಮನ ಮನದಲ್ಲಿ ಕನ್ನಡ ಡಿಂಡಿಮವ,
ಹಾರಿಸು ಮನೆ ಮನೆಯಲ್ಲಿ ಕನ್ನಡ ಬಾವುಟವ.
ಎಲ್ಲಾದರೂ ಇರು ಎಂತಾದರೂ ಇರು ಬಳಸು ಕನ್ನಡವ,
ಮರೆಯದಿರು ಕನ್ನಡ ತಾಯಿಯ ಈ ಋಣವ.
ಕಸ್ತೂರಿ ಕಂಪಿನ ಕನ್ನಡ, ಮರೆಯಬೇಡ ಹೆಮ್ಮೆಯ ಕರುನಾಡ.
ನೆಲ ಕನ್ನಡ, ಜಲ ಕನ್ನಡ, ನುಡಿ ಕನ್ನಡ, ತನು ಕನ್ನಡ, ಮನ ಕನ್ನಡ.-
ಚಂದ್ರನ ತಲುಪಿದ ಯಶಸ್ವಿ ಯಾನ,
ಆಚರಣೆ ಮಾಡಿದೆ ಭಾರತದ ಜನ ಮನ.
ಚಂದಿರನ ಮೇಲೆ ನಮ್ಮ ಭಾರತದ ಬಾವುಟ,
ಇಂದು ಭಾರತ ಸೇರಿದೆ ಇತಿಹಾಸದ ಪುಟ.
ಚಂದಿರನ ಅಂಗಳಕ್ಕೆ ನಮ್ಮ ರಣವಿಕ್ರಮ,
ಚಂದಿರನ ದಕ್ಷಿಣ ಧ್ರುವದಲ್ಲಿ ವಿಜಯ ವಿಕ್ರಮ.-
ನಿನ್ನ ಕೋಪಕ್ಕೆ ಕಾರಣವೇ ಸಿಕ್ಕಿಲ್ಲ,
ನಿಜ ಪ್ರೀತಿ ಅವಶ್ಯಕತೆಗೆ ಬರೊದಲ್ಲ.
ನಾನು ಅಂದರೇ ತೊಂದರೆ ನಿನಗೆ,
ನೀನು ಅಂದರೇ ನೆಮ್ಮದಿ ನನಗೆ.
ಇನ್ನ ಸುಖವಾಗಿರು ನನ್ನ ಬಿಟ್ಟು,
ನನ್ನ ಮೇಲೆ ನಿನ್ನ ಪ್ರೀತಿ ಜಾಸ್ತಿ ನೂರುಪಟ್ಟು.-
ಸಂಸ್ಕೃತ ಸಿರಿ ಗೆ ತುಂಬಿದೆ ವರ್ಷ ಆರು,
ಹೀಗೆ ಪ್ರತಿಭೆಗೆ ಬೆಳಕಾಗಿ ಬೆಳಗಲಿ ವರ್ಷ ನೂರು.
ಬೆಳೆಯುವ ಸಿರಿ ಮೊಳಕೆಯಲ್ಲಿ,
ಕಾಣದ ಪ್ರತಿಭೆಯ ಅನಾವರಣ ಸಂಸ್ಕೃತ ಸಿರಿಯಲ್ಲಿ.
ಶುಭಾಶಯಗಳು ಸಂಸ್ಕೃತ ಸಿರಿ,
ಎಲ್ಲರೂ ಮೆಚ್ಚುವಂತಹ ಕೆಲಸ ವೈಖರಿ.-
ಸಮಯ ಕೂಡಿ ಬರಬೇಕು,
ಪುಣ್ಯ ಫಲ ಕೊಡಬೇಕು.
ಕಳೆದುಕೊಂಡ ಆಗಿದೆ,
ಚಿಂತೆಗೆ ಫಲ ಎಲ್ಲಿದೆ.
ಉಸಿರು ಇದ್ದು ಸತ್ತಂತೆ,
ಚಿಂತೆಯ ಚಿತೆ ಏರಿದಂತೆ.
ಮುಗಿಯಿತೇ ಪುಣ್ಯದ ಸರಕು.
ಶುರುವಾಗಿದೆ ಕರ್ಮದ ಬದುಕು.-