✍ಹರೀಶ್ ಕಜೆ✍  
2.8k Followers · 10.0k Following

read more
Joined 2 March 2019


read more
Joined 2 March 2019

ಜಲಪಾತದ ನೀರ ಹನಿಗಳ ಸೋಕುವಿಕೆಯೊಳು
ತನುವಿದು ಗ್ರಹಿಸುತ ಕೋಮಲತೆಯ ತಂಪಿನೆಸಳ
ಹೃದಯವಾಯಿತು ತಂಪಿನಿಂಪಲಿ ಕೋಮಲ॥




-



ನಗುತ ನಗು ನಗುತ
ಒಲವಾ ಸುಮ ಬೀರುತ
ಸುಮದ ಘಮಲ ಪಸರಿಸುತ॥

ನಾಳೆಯ ಬಾಳ ತೀರಕೆ
ನಾಂದಿಯ ಹಾಡು ಕವನಕೆ
ನಮ್ಮದೀ ಬದುಕ ಚಿತ್ರಕೆ॥

ಸಂತಸ ಸನಿಹ ಕಾಣಿಕೆ
ಸವಿತನ ಮೊಗದ ಚಂದ್ರಿಕೆ
ಸಿಹಿತನ ಚೆಲುವ ವದನಿಕೆ॥

-



ನಿನ್ನೊಲವ ಮುಂಜಾವಿನ ಬೆಳಕಿನಲ್ಲಿ
ಒಲವ ಸಿಂಪಡಿಸುವ ಕಿರಣಗಳಲ್ಲಿ
ಹೂವಾಗಿ ಅರಳುವಾಸೆ ಎನ್ನಲ್ಲಿ॥

-



ನೀನಿರದ ಬಾಳಿನೊಳು
ನಾದಕ್ಕೆಲ್ಲಿದೆ ಒಲವು
ನೀಲಾಂಬರವೇ ಕಳವು
ನೀಲ್ಗಡಲುಗಳಿಗೂ ದಣಿವು॥

ನೀಲಾಂಬರದ ಲತೆಯೊಳು
ದುಗುಡ ಕನಸಿನ ಛಾಯೆಯು
ದುಃಖ ತುಂಬಿದ ಮಾಯೆಯು
ಮುಸುಕು ಮೌನದ ಛಾಯೆಯೂ॥

-



ಚಹಾ ಕುಡಿಯುವಾಸೆ
ಬಿಸಿ ಬಿಸಿ ಚಹಾ ಕುಡಿಯುವಾಸೆ
ಚಹಾದೊಡನೆ ಕುರು ಕುರು ಎನುವ
ತಿಂಡಿ ಸವಿಯುವಾಸೆ॥

ಚಹಾ ಕುಡಿಯುವುದು
ಒಂದು ಹವ್ಯಾಸವಾಗಿ
ಬೇರೂರಿದೆ ಎನ್ನೊಳಗೆ
ಬಿಡಲಾರದ ನಂಟಿನಂತೆ॥


-



ಸುಮದ ಎಸಳಲೂ
ನಿನ್ನದೇ ವದನ
ಶೋಭಿಸಿ ನಿಂದಿದೆ
ನಿನ್ನದೇ ಹದನ॥

ಕೇಸರ ನಳನಳಿಸಲು
ನಿನ್ನದೇ ಬಿಂಬವು
ಕಾಡಿಸಿ ತುಂಬಿದೆ
ನಿನ್ನದೇ ಮನವು॥

-



ಕಡಲಿನ ಅಲೆಗಳ
ನೊರೆಗಳ ಹಾವಳಿ
ನನ್ನೆದೆ ಪೂರಾ
ನಿನ್ನದೇ ಹಾವಳಿ॥

ಕರಗಿಸು ಕಡಲಲಿ
ಸವಿತನ ಸುಮದಲಿ
ನನ್ನೆದೆ ಕಡಲಲಿ
ನಿನ್ನದೇ ರಂಗವಲ್ಲಿ॥

-



ಅಕ್ಕರೆ ಮೊಗದ ನಗುವಿನಲಿ
ಸಕ್ಕರೆ ನಗುವಿನ ಹೊಳಪಿನಲಿ
ನೀನೊಂಥರಾ ಮರಭೂಮಿಯ ಚಿಲುಮೆ॥

ಒಲವ ಹನಿ ಹನಿಗಳ ಬೆಸುಗೆ
ನಿಲುವಿನಲಿ ಏನಿದು ಸಲುಗೆ
ಮಳೆ ನೀರು ಸೋಕಿದ ಮನಸು
ಮುದವಾಗಿದೆ...॥ಅಕ್ಕರೆ॥

ಬದುಕೊಳಗೆ ನೂತನ ಬೆಳಕು
ಹೊಮ್ಮಿರಲು ಒಲುಮೆಯ ಝಳಕು
ಕಳೆದಿರುವ ಕನಸುಗಳೆಲ್ಲ
ನಿಜವಾಗಿದೆ...॥ಅಕ್ಕರೆ॥

ಒಲವಾ.. ಮಿಡಿತ ತುಡಿತ
ಮಿಂಚಿ ಹೊಳೆದು ನಲಿದು
ಅರಳೋ ಸುಮವು ನಗಲು
ಸವಿಯೋ ಒಲವ ಸುಧೆಯೂ..॥ಅಕ್ಕರೆ ಮೊಗದ ॥

-



ಬೆಳದಿಂಗಳೆನ್ನ ಬಾಳಲಿ
ಇರಬೇಕು ನಿನ್ನ ಹಾವಳಿ
ತುಂಬಿಕೊಳುವೆ ಎನ್ನ ಕಂಗಳಲಿ॥

ನೀ ಗಗನದಂಚಿನಲಿ
ಹಾಗೆ ಎನ್ನೆಡೆ ಇಣುಕುತಲಿ
ಸೆಳೆದಿರುವೆ ನೀ ಒಲವಲಿ॥

ಸುಳಿವುಗಳ ಬೀಸುತಲಿ
ಕಂಪನ್ನು ಸೂಸುತಲಿ
ಪ್ರಭಾವಿಸು ಬಾಳಿನಲಿ॥

-





ಸುಂದರ ಸಂಜೆಯ ಕಳೆಯಲು ಬಯಸಿದೆ ನನ್ನ ಮನ ಕಡಲ ತೀರದಲ್ಲಿ
ಮನಸು ತೋಯುತಿದೆ ಕಡಲ ಅಲೆಅಲೆಗಳಲ್ಲಿ!

ಹರುಷದ ವಾತಾವರಣ ಕರೆದಿದೆ ಹೂ ನಗುವ ಚೆಲ್ಲಿ
ತನುಮನವು ಮೀಯುತಿದೆ ಬೀಸುತಿಹ ತಂಗಾಳಿಯಲ್ಲಿ!

ಅದೆಷ್ಟೋ ಭಾವಗಳು ಮಿಳಿತವಾಗಿದೆ ಕಡಲ ಗರ್ಭದಲ್ಲಿ
ನನ್ನ ಮನ ಸಮ್ಮಿಳಿತವಾಗುತಿಹುದು ಆ ಭಾವಗಳಲ್ಲಿ!

ಕಡಲಲೆಗಳು ಮೇಲೇಳುತಿವೆ ಭಾವಬಂಧಿಯ ಮನದಲ್ಲಿ
ಮನವದು ಒಂದಾಗುತಿದೆ ಕಡಲ ಕಿನಾರೆಯ ಬಿಳಿ ನೊರೆಯಲ್ಲಿ!

ಈ ಸಂಜೆ ಮಧುರವಾಯಿತು ಎನಗೆ ಸಾಗರದ ತಟದಲ್ಲಿ
ಮನವಿದು ಮರೆಯಾಯಿತು ಮಾಧುರ್ಯ ಮುಸ್ಸಂಜೆಯಲಿ!

-✍ಹರೀಶ್ ಕಜೆ.



-


Fetching ✍ಹರೀಶ್ ಕಜೆ✍ Quotes