ಓಂಪ್ರಕಾಶ್ ಕೆ ಎಂ   (ಪ್ರಕಾಶ್ ಕೋಡಿಹಳ್ಳಿ)
362 Followers · 145 Following

read more
Joined 15 November 2018


read more
Joined 15 November 2018

ಅವಳ‌ ಸೊಬಗ ವರ್ಣಿಸಬಹುದು, ಗುಣವ ವರ್ಣಿಸಲು ಸಾಧ್ಯವೇ??

-



ನಮ್ಮ ಬರವಣಿಗೆಯನು
ತಿದ್ದಿ ತೀಡಿ ಬೆಳೆಸುತ್ತಿಹನು.

-



ಕೈಲಿರೊ ಪೆನ್ನು ಏನಾದ್ರು ಗೀಚ್ತಾ ಇದೆ ಅಂದ್ರೆ,
ಅದು ಮನದಾಳದಲ್ಲಿ ಹುಟ್ಟಿದ ಮುತ್ತುಗಳು.

"ಸ್ವಾತಿ ಮಳೆಯಿಂದ ಮಾತ್ರ ಮುತ್ತಿನ ಸೃಷ್ಟಿ ಸಾಧ್ಯ"

-



ನಮ್ ಹಂಗೆ ಸಿಂಗಲ್ ಆಗಿ ಇದ್ದಾನೆ
ಅದುಕ್ಕೆ ನಗ್ತಾ ಇದ್ದಾನೆ...

-



ಈ ಜಗತ್ತಲ್ಲಿ ಖಾಲಿ ಇರೋ
ಬಿಯರ್ ಬಾಟಲ್‌ಗೆ ಇರೊ ಬೆಲೆ,
ಕಾಲಿ ಇರೊ ತಲೆಗೆ ಇಲ್ಲ.

-



ಅಮವಾಸ್ಯೆ ಗುರೂಜಿ‌‌‌‌🌚
ಚಂದ್ರ ಮನೆಗೆ ಹೋಗವ್ನೆ 🏕
ನಾಳೆ ಲೈಟಾಗಿ ಸ್ಮೈಲ್
ಕೊಟ್ಕೊಂಡ್ ಬರ್ತಾನೆ 🌜

-



ಒಲವ ಹನಿಗಳು ಚಲ್ಲಲು
ಮುನಿದ ಮುಗಿಲಿನ ಮುಸುಕು ಸರಿಯಿತು
ಬೆಳಗ ಭುವಿಗೆ ಹರಿಸಲು.

ಕೋಪ ತಾಪ ಏನೇ ಇರಲಿ
ಬದಿಗೆ ಸರಿದು ಮುಂದೆ ಸಾಗು
ನಗುವೆ ನೀನು ಈ ಜಗದಲಿ.

-



ಸಮಯಕ್ಕೆ ಕೇಳುತ್ತಿರುವಿರೋ
ಅಥವಾ
ಸಮಯದ ಜೊತೆ ಸಾಗಲು ಓಡುತ್ತಿರುವ ಈ ಜೀವಕ್ಕೋ??

-



ಬರಹವನು ಬದುಕಾಗಿಸಿಕೊಂಡವ
ಬದುಕಿನಲ್ಲಿ ಬೆಂದಿದ್ದ.

-



ಮುಳುಗಿದ ಪ್ರೀತಿ

ಜೀವನವೆಂಬ ಸಾಗರದಲ್ಲಿ
ಒಂದು ಮುತ್ತಿನ ಹುಡುಕಾಟ
ಪ್ರೀತಿ ಪ್ರೇಮದ ಬಲೆಯಲಿ ಸಿಲುಕಿ
ಮುಗ್ದ ಜೀವಗಳ ಒದ್ದಾಟ ||

ಹರೆಯದಿ ಬರುವ ಆಕರ್ಷಣೆಗೆ
ಪ್ರೀತಿ ಎಂಬ ಹೆಸರಿಟ್ಟು
ಕಾಲ ಕಳೆಯುವರು ಯವ್ವನವೆಂಬ
ಮೌಲ್ಯವನು ಅಡವಿಟ್ಟು ||

ಮೋಹವೆಂಬ ಮಾಯೆಯೊಳು ಮುಳುಗಿ
ಮಂದಹಾಸವು ಮರೆಯಲಿ
ಇರುವ ಸಮಯವ ನಗುತ ಕಳೆಯುವ
ಚಿಲುಮೆಯೊಂದು ಚಿಮ್ಮಲಿ ||

-


Fetching ಓಂಪ್ರಕಾಶ್ ಕೆ ಎಂ Quotes