ಖಾಲಿ ದಾರಿಯಲ್ಲಿ ಸಾಗಿದೆ ಜೀವ
ಅಂದಿನಿಂದ ಇಂದಿನವರೆಗೂ
ಬಡತನವೂ ಬಿಟ್ಟಿಲ್ಲ
ಮನಸ್ಸೆಂದು ಕೆಟ್ಟಿಲ್ಲ
ಕನಸುಗಳ ಕಂಡಿಲ್ಲ
ನನ್ನ ಸೈಕಲ್ ಸವಾರಿಯಲ್ಲಿ ಎಂದೂ
ಕೈ ಕೊಟ್ಟಿಲ್ಲ ರಾಜನಂತಿರುವೆ
ರಾಜ್ಯವೇನಿಲ್ಲ ರಾಜಕುಮಾರಿ
ಗುಡಿಸಲಲಿ ಇರುವಳು
ನಮ್ಮಲ್ಲಿ ಪ್ರೀತಿಗೆ ಕೊರತೆಯೆ ಇಲ್ಲ
ಕಷ್ಟ ವಿದ್ದರೂ ಕಷ್ಟ ವೆಂದವರ ಆಶ್ರಯ
ಕೊಡುವ ಜೀವ ಸಾಗುತಿದೆ ಭಾವ-
ಈ ಜೀವನ ಒಂಥರಾ ಸೈಕಲ್ ಸಾವಾರಿ ಇದ್ದಂಗೆ.
ಸೈಕಲ್ ತುಳಿತಾ ಇರಬೇಕು(ಜೀವನನ ಜೀವಿಸ್ತಾ ಇರಬೇಕು) ಬರೋ ಕಷ್ಟ ಸುಖಗಳನ್ನ ಸರಿಯಾಗಿ ಬ್ಯಾಲೆನ್ಸ್ ಮಾಡ್ತಾ ಸವಾರಿ ಮಾಡಲೇಬೇಕು, ನಮ್ಮ
ದಾರಿ ಮುಗಿಯುವವರೆಗೆ...-
ಸಾಗಿದೆ ಕುವರನ ಸವಾರಿ
ಅಜ್ಜಿಯ ಬೆನ್ನನು ಏರಿ
ಕಾಣದ ದೂರದ ದಾರಿ
ತಲುಪುವ ಪರಿಯನು ತೋರಿ
ಸಂಜೆಯ ಸೂರ್ಯನ ತೇರನು ಏರಿ
-
ಬದುಕಿನೊಂದಿಗೆ
ಹಜ್ಜೆಹಾಕುವಾಗ
ಅದರ ಹೆಗಲ ಮೇಲೆ ಕೈ ಹಾಕಿ ಸಾಗು
ನಾಲ್ಕು ದಿನ ಯಜಮಾನನಾಗಿರುವೇ
ಸವಾರಿ ಮಾಡಲು ಹೋಗಬೇಡ
ಬೇಗ ಸವೆದು ಬಿಡುವೇ
-
ನನಗ್ಯಾಕೋ
ಅನಸಾಕಂತೈತಿ
ಈ ಸಾರಿ...
ನಿನೆಲ್ಲೋ
ಇರಬೇಕು
ಪಕ್ಕಾ
ಸ್ಯಾರಿ
ವ್ಯಾಪಾರಿ-
ಮಗನನ್ನು ಹೆಗಲ ಮೇಲಿರಿಸಿ ಹೊರಟಿಹಳು
ಮೇಲಿಂದ ಜಗವ ಪರಿಚಯಿಸಲು
ತನಗೆ ತ್ರಾಸಾದರೂ ಮಗುವಿಗಾಗಬಾರದು
ಅದಲ್ಲವೇ ಹೆತ್ತಮ್ಮನ ಅನುದಿನದ ಸವಾಲು
ಸೂರ್ಯನ ಹೊಂಗಿರಣದ ಒಡಲು
ದಾರಿಯನು ತೋರುತಿರಲು
ರಾಜನಂತೆ ಸಂತಸ ಪಟ್ಟಿದೆ ಮಗನ ಮನ
ಅರಳಿ ನಗುತ್ತಿದೆ ಅಮ್ಮನ ಮೈಮನ
-
ಅವನೊಬ್ಬ ಪ್ರೀತಿಯ ಕಣ್ಣಿಗೆ ಅಲೆಮಾರಿ..
ಅವಳೊಬ್ಬಳೆ ಅವನಿಗಾಗಿ ಮಾಡುವಳು ಸವಾರಿ..-
ಸಿಂಗಾರಗೊಂಡು ನಿಂತಿರುವ ಬಂಗಾರಿ
ಹಾದಿಯಲಿ ನಿಂತು ನಗೆ ಬೀರಿದ ಕಿನ್ನರಿ
ಒಲವಿನ ಬೀದಿಯಲಿ ಪ್ರೀತಿಯ ಸುಮ
ಚೆಲ್ಲಿ ಹೊರಡೋಣವೇ ಸವಾರಿ-