ಬದುಕಿನಲ್ಲಿ ಸರಿಯಾದ ಮಾರ್ಗದರ್ಶನವಿದ್ದರೆ
ಯಶಸ್ಸು ಯಾವ ಕಾರಣಕ್ಕೂ ಕೈ ತಪ್ಪುವುದಿಲ್ಲ.-
ನಿಷ್ಕಲ್ಮಶ ಪ್ರೀತಿ, ಮಮತೆ, ವಾತ್ಸಲ್ಯದ
ಮಮಕಾರವನ್ನೆಲ್ಲ ಗೋಮಾತೆಯೊಳಗೆ
ಬಚ್ಚಿಟ್ಟ ಆ ಭಗವಂತ ಇದು ಯಾರಿಗೂ
ಅರಿಯಬಾರದೆಂದು ಮೂಕನಾಗಿಸಿಬಿಟ್ಟ-
ಚಂದನದ ಗೊಂಬೆಯಂತೆ ಚೆಂದ ಕಾಣುವಳು..
ಅಬ್ಬಲಿಯ ಹೂವ ಮುಡಿದು ಮೂಡಣದ
ರವಿಯ ಸೆಳೆದು ಬಾನ ತಾರೆಯರಿಗೂ ಸರಿಸಾಟಿ
ಎಂಬಂತೆ ಮುಗುಳುನಗೆಯಲ್ಲೆ ಮಿಂಚುವ
ಮಿನುಗುತಾರೆಯಿವಳು..
-
ಜೀವನದಲ್ಲಿ ನಮ್ಮ ಎದುರುಗಡೆ
ನಿಂತು ಹೊರಾಡುವ ಶತ್ರುಗಳಿಗಿಂತ
ನಮ್ಮ ಬೆನ್ನ ಹಿಂದೆ ನಿಂತು ನಮ್ಮ
ಕಾಲೆಳೆಯುವ ಹಿತ ಶತ್ರುಗಳ ಬಗ್ಗೆ
ಜಾಸ್ತಿ ಜಾಗ್ರತೆಯಿಂದಿರಬೇಕು
-
ಆ ದೇವರೆ ಬದುಕೋಕೆ ಒಂದು
ಸಣ್ಣ ದಾರಿ ತೋರಿಸಿದ್ರು ಕೂಡ
ಕೆಲವೊಂದು ಮನುಷ್ಯರು ಆ
ದಾರಿಗೂ ಅಡ್ಡಗಾಲಿಟ್ಟು ನಿಲ್ತಾರೆ
-
ಯಾರ್ ಗುರು ಹೇಳಿದ್ದು
ಹಣದಿಂದ ಮಾತ್ರ ಎಲ್ಲವನ್ನೂ
ಗಳಿಸಬಹುದು ಅಂತಾ ಯಾಕಂದರೆ
ಕೆಲವೊಂದನ್ನ ಪ್ರೀತಿ,ಮಮತೆ,
ವಾತ್ಸಲ್ಯದಿಂದಲೂ ಗಳಿಸಬಹುದು-
ಕೆಲವೊಂದು ಸಂಬಂಧಗಳೇ ಹಾಗೆ
ಒಮ್ಮೆ ಇಷ್ಟ ಆದರೆ ಅದು ಕೊನೆವರೆಗೂ
ಬಿಡಿಸಲಾಗದ ಬಂಧನವಾಗುತ್ತದೆ..
-
ಮುದ್ದಾದ ಹೆಣ್ಣಿನ ಮೊಗದಲ್ಲಿ
ಕಾಣುವ ನಗುವಿನಲ್ಲಿ ಅಷ್ಟ ದೇವತೆಯರ
ಇಷ್ಟದ ಇರುವಿಕೆ ಇದೆಯಂತೆ..
ಅದೇ ನಗುವನ್ನು ನೋಯಿಸಿ ಕಣ್ಣೀರು
ಹಾಕಿಸುವವರಿಗೆ ಅವರೆಲ್ಲರೂ
ನವದುರ್ಗೆಯರಾಗಿ ಕೋಪದಲ್ಲಿ
ಶಪಿಸುವರಂತೆ..-
ಪಟ ಪಟ ಅಂತ ಮಾತಾಡೋ
ಪಟಾಕಿ ಅವಳು ಅಪ್ಪಿ ತಪ್ಪಿ ಸುಮ್ನೆ
ಚೆನ್ನಾಗಿ ಮಾತಾಡ್ತೀಯಾ ಅಂದ್ರೆ
ಯಾರೂ? ಅಂತಾ ನಮಗೆ ಪ್ರಶ್ನೆ
ಕೇಳಿ ಮುಗುಳುನಗೆಯ ಮೌನದಲ್ಲಿ
ಮುಂಗುರಳ ಸರಿಸುತ್ತಾ ಸುಮ್ಮನಾಗುವ
ಅಭಿನಯ ನಟಿಮಣಿ...
-
ಜೀವನ ದ ಪ್ರತಿ ಕ್ಷಣವೂ ಅತ್ಯಮೂಲ್ಯ
ನೋವು ನಲಿವು ಸೋಲು ಗೆಲುವುಗಳ
ಜೊತೆ ನೆಮ್ಮದಿಯ ಹುಡುಕಾಟದಲ್ಲಿ
ಆಟ ತುಂಟಾಟವ ಮರೆತರೆ ಹೇಗೆ?-