ಒಲವಿನೋತ್ಸವದಲ್ಲಿ
ನಿನ್ನನ್ನು ನೀ
ಅನಾವರಣಗೊಳಿಸುವುದಿದೆಯಲ್ಲಾ;
ಅದೇ ನೋಡು
ಹಾಡು ಹಗಲೇ
ನನ್ನ ದೋಚುವುದು..!-
ಉತ್ತರವಿಲ್ಲದ ಪ್ರಶ್ನೆಗಳ ಜೊತೆ ....
ನಾನು ಮತ್ತು ಅವಳು...
ಒಲವಿನೋತ್ಸವದಲ್ಲಿ
ನಿನ್ನನ್ನು ನೀ
ಅನಾವರಣಗೊಳಿಸುವುದಿದೆಯಲ್ಲಾ;
ಅದೇ ನೋಡು
ಹಾಡು ಹಗಲೇ
ನನ್ನ ದೋಚುವುದು..!-
ಪ್ರೇಮವೆಂಬುವುದು ಯಾವಾಗಲು
ಒಂದೆ ಕಡೆಯಿಂದ
ಶುರುವಾಗುತ್ತದೆ ಅಂತೆ;
ಅದೇ ಎರಡು ಕಡೆಯಿಂದ ಆಗುವುದನ್ನೆ
ಹಣೆ ಬರಹ ಎನ್ನುತ್ತಾರೆ ಗಾಲಿಬ್..!
-
ಲೇ ಇವಳೇ
ಭಾವನೆಗಳ
ಸಂತೆ ಮುಗಿದು ಹೋಗುವ ಮುನ್ನ
ಬಂದು ಬಿಡು;
ಆ ಖಾಲಿ ಎದೆಯ
ಒಂಟಿ ದಾರಿ
ತರವಲ್ಲ ನಿನಗೆ...!-
ಕೆಲವೊಂದು ಸಾಮೀಪ್ಯತೆಗಳು
ಕೂಡುವ ನೋವುಗಳಿಗಿಂತಲೂ;
ಆ ಸಾವು ಕೂಡ
ಸುಂದರ ಎನಿಸುತ್ತದೆ..!-
ಆಕಾಶದ ಅರಿವಿಗೂ
ಬಾರದ
ಪ್ರೇಮವೊಂದು ಘಟಿಸಿತ್ತಲ್ಲ ಹುಡುಗಿ;
ಅದಕ್ಕೀಗ
ಹದಿ ಹರೆಯ ನೋಡು..!
-
ನಿನ್ನೆ ಮೊನ್ನೆ ವರೆಗೆ
ನಾ
ನಿನ್ನೊಳಗೆ ಇದ್ದೆ,
ಆದರೆ
ಇವತ್ತಿಲ್ಲ;
ಇದೆ ಅಲ್ಲವೇ ಬದುಕು..!-
ಯಾವುದಕ್ಕೂ
ಒಂಚೂರು
ಕೀರುನೋಟವಿಡು,
ನಿನ್ನೋಲವ ಹಂಗಿಲ್ಲದೇ
ಹಗಲೇ
ಅನಾಥ ಶವವಾಗಲಾರೇ..-
ಇಲ್ಲಿ
ಪ್ರತಿ ಹಂತದಲ್ಲಿ
ನನ್ನಲ್ಲೆ ನಾನು ಸವೆಯುತ್ತಿದೆನೇ
ನೋಡು ಗಾಲಿಬ್...
ಯಾವುದೋ ಘಳಿಗೆಯಲ್ಲಿ
ಮತ್ತದೆ ಅವರಸದಲ್ಲಿ
ಸಮಾಗಮವಾಗುವುವೆನೋ
ಅವಳಲ್ಲಿ...!-