ಮೌನದೊಳಗೆ ಮಡಿದು ಹೋಗಲಿ ಮನಸ್ತಾಪ
ಅಜ್ಞಾನದೊಳಗೆ ಅಳಿದು ಹೋಗಲಿ ಮನದ ಕೋಪ..-
Akshata Hiremath
(Akshata H✍️)
1.0k Followers · 81 Following
Joined 14 October 2019
2 JAN 2022 AT 21:20
ನಿನ್ನ ಅಗಣ್ಯ ಒಲವಿನ ಅನುರಾಗಕೆ ಅರಸಿ ಬಂದ ಅಕ್ಷತೆ ನಾನು.
ನನ್ನ ನಗಣ್ಯ ನಲಿವಿನ ಜೀವಕೆ ವರವಾಗಿ ಬಂದ ನವೀನತೆ ನೀನು.-
2 JAN 2022 AT 21:02
ನಿನ್ನ ಆ ದಣಿದ ದೇಹಕೆ ನನ್ನ ಪಿಸು ಮಾತಿನ ಉಸಿರು ಬೇಕು,
ನನ್ನ ಈ ಲೇಖನಿಯ ದಾಹಕೆ ನಿನ್ನ ನೆನೆದು ಬರೆವ ಸಾಲುಗಳೇ ಸಾಕು..-
24 DEC 2021 AT 9:19
ನುಡಿ ನುಡಿಯಲಿ ಎಲ್ಲರೂ ನನ್ನವರು ಎನ್ನುವ ಹೊರ ಭಾವ
ನಡೆಯಲಿ ಕಾಣದಿದ್ದಾಗ, ಕಲ್ಲಾಗಿ ತಿರಸ್ಕರಿಸಿದೆ ನೊಂದ ಜೀವ.-
23 DEC 2021 AT 19:25
ಕೊಂಕು ನುಡಿಯಲಿ ಬಿಂಕ ತೋರುವ ಪ್ರತಿ ಮನ,
ಮಂಕು ಮೆರೆಸುವ ಕೊನೆಗಾಲದಲಿ ನೋವಿನ ಸುಂಕ
ಸುರಿಸದೆ ಮುಗಿಸದು ಭೂಮಿ ಋಣ.-
23 DEC 2021 AT 18:02
ಬೆಣ್ಣೆ ಮಾತಿಗೆ ಬೇಗ ಬೆರಗಾಗುವ ಹುಚ್ಚು ಜನರ-ಮನ,
ಬಣ್ಣ ಹಚ್ಚಿದ ಭಾವನೆಗೆ ಹೆಚ್ಚು ಮರುಳಾಗುವರು ಕ್ಷಣ-ಕ್ಷಣ.-