ಚಂದಮಾಮನ ಕತೆಗಳು
ಹೃನ್ಮನಗಳಿಗೆ ರೋಚಕ ಕಂಪು
ಬರೀ ಬೆಳಕಲ್ಲವದು
ಮನದಾಳಕ್ಕದುವೇ ತಂಪು
ಕಥಾಕವನಕ್ಕಂತೂ ಬಲು ಇಂಪು-
ದೇವಪ್ರಿಯಾ
384 Followers · 296 Following
Joined 26 January 2019
9 OCT 2022 AT 22:18
7 OCT 2022 AT 13:19
ಬಲಶಾಲಿಗಳೆಲ್ಲ ರಚಿಸಿದರದು ಮಹಾಭಾರತದ ಚಕ್ರವ್ಯೂಹ
ಕೈಲಾಗದವರೆಲ್ಲ ರಚಿಸಿದರದು ಕರ್ಮಜೀವಿತದ ಚಕ್ರವ್ಯೂಹ-
6 OCT 2022 AT 22:22
ಕನಸಿನ ಬಾಗಿಲು ಮುಚ್ಚಿದಾಗ
ಕನವರಿಕೆ ಚಿಲಕ ಎಳೆದು
ಆತ್ಮಬಲದ ಬೀಗ ಜಡಿದು
ಕೈಕಟ್ಟಿ ಕುಳಿತಷ್ಟು ನೋವಾಗುವುದು-
6 OCT 2022 AT 15:17
ಕಾಗದದ ದೋಣಿ
ಕನಸಿಗದುವೇ ಬೋಣಿ
ಕರಗಬಾರದಿಲ್ಲಿ ಬಣ್ಣದ ಪೇಣಿ
ಕಾದು ಕಾಳಜೀಲೀ ಸೇರಬೇಕು ಬಾಳ ದಡದ ಏಣಿ-
9 AUG 2022 AT 22:25
ಕಳೆದು ಹೋಗಿವೆ ಬಯಕೆ
ಜನರ ಮೆಚ್ಚಿಸೆ ಹೊರಟುದಕೆ
ಬಯಕೆಗಳೆಲ್ಲ ಕೊಚ್ಚಿ ಹೋದ ರಭಸಕೆ
ನನ್ನನೇ ನಾ ಮರೆಯುವಂತೆ ಬದುಕಿನಾಟಕೆ
-
12 MAR 2022 AT 22:12
ಬರುವಾಗಲೂ ಏನನ್ನೂ ತಂದಿಲ್ಲ
ಹೋಗುವಾಗಲೂ ಏನನ್ನೂ ಒಯ್ಯುವುದಿಲ್ಲ
ಇರುವಷ್ಟು ದಿನ ಮುಚ್ಚಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ
ಮುಚ್ಚಿಡದೆ ಹಂಚಿ ಹೋಗಲಷ್ಟೇ ಎನ್ನ ಭಾವನೆಗಳು— % &-