ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ
ಸರಿ ದಾರಿಯ ತೋರಿ ಜ್ಞಾನ ದೀವಿಗೆಯ ಬೆಳಗಿದ ಗುರು ನೀವು
ತಪ್ಪು ಮಾಡಿದಾಗ ಮಾತಲ್ಲೆ ಶಿಕ್ಷಿಸಿ ಕ್ಷಮಿಸಿ
ತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕ ನೀವು
ಅಕ್ಕರೆಯಿಂದ ಅಕ್ಷರ ಕಲಿಸಿ ಜಗದ ಶ್ರೇಷ್ಠರ ವಿಚಾರ ತಿಳಿಸಿ
ನಾವು ಅವರಂತಾಗಬೇಕೇಂದು ಪ್ರೇರೇಪಿಸಿದವರು ನೀವು
ನುಡಿಯೊಂದಿಗೆ ಉತ್ತಮ ಮೌಲ್ಯಗಳನ್ನು ಪರಿಚಯಿಸಿ
ಬೋಧನೆಯ ಮೂಲಕ ಸಾಧನೆಯ ದಾರಿ ತೋರಿದವರು ನೀವು
ಪೋಷಕರಂತೆ ಪ್ರೀತಿ ತೋರಿ ಸ್ನೇಹಿತರಂತೆ ಜೊತೆಗೂಡಿ
ಪ್ರತಿ ಸೋಲು ಗೆಲುವಿನಲಿ ಧೈರ್ಯ ತುಂಬಿದವರು ನೀವು
ನಿಮಗುಂಟು ಎಣಿಕೆಗೆ ಸಿಗದ ಶಿಷ್ಯವೃಂದ
ಅದರಲ್ಲಿ ನಾನೊಂದು ಚುಕ್ಕಿ ಎಂಬುದು ಪರಮಾನಂದ
"*ಶಿಕ್ಷಕರ ದಿನಾಚರಣೆಯ ಶುಭಾಶಯಗಳು* "
-
ಅ - ಅಂಬರದಲ್ಲಿರುವ ಕನಸುಗಳನ್ನು ನನಸಾಗಬೇಕೆಂದರೆ
ಧ್ಯಾ - ಧ್ಯಾನವಿಟ್ಟು ಹೇಗೆ ಓದಬೇಕು ಎಂದು ಹೇಳುವ
ಪ - ಪ್ರತಿ ಹಂತದಲ್ಲೂ ಎಡವಿದಾಗ ಸಹಾಯ ಮಾಡುವ
ಕ - ಕೃಷ್ಣನಂತೆ ನಮ್ಮೆಲ್ಲ ಶಿಕ್ಷಕರು...-
ಗಜಲ್
*******
ಇಂದು ಹಸಿವು ತಣಿಸುವ ದಾರಿ ಬದಲಾಗುತಿದೆ ಗಾಲಿಬ್
ಒಡಲ ದಾಹವು ಮೌನವಾಗಿ ಪ್ರತಿಭಟಿಸುತಿದೆ ಗಾಲಿಬ್
ಕಪ್ಪು ಹಲಗೆಯ ಗುರು ಕಪ್ಪಾಗಿ ಹೋಗಿರುವನು ಇಂದು
ಬದುಕಿನ ಮುಂದೆ ಗೌರವವು ಗೌಣವಾಗುತಿದೆ ಗಾಲಿಬ್
ಪುಸ್ತಕ ಹಿಡಿಯುವ ಕೈಗಳಲ್ಲಿ ಗುದ್ದಲಿಯು ಕಂಗೊಳಿಸುತ್ತಿದೆ
ಅಭದ್ರತೆಯ ಬಿಲ ಶಿಕ್ಷಕರನ್ನು ನುಂಗಿ ಹಾಕುತಿದೆ ಗಾಲಿಬ್
ಧೈರ್ಯ ತುಂಬುವ ಮನಸ್ಸುಗಳು ಖಿನ್ನತೆಗೆ ಗುರಿಯಾಗಿವೆ
ಬಾಳಿನ ಗಾಳಿಪಟ ಸಮಾಜದ ಬೇಲಿಗೆ ತುತ್ತಾಗುತಿದೆ ಗಾಲಿಬ್
ಭವಿಷ್ಯ ರೂಪಿಸುವ ಹೃದಯಗಳಿಗೆ ಭವಿಷ್ಯವೆ ಇಲ್ಲದಾಗಿದೆ
'ಮಲ್ಲಿ'ಯ ಮನವು ಮೌನವಾಗಿಯೆ ಬಳಲುತಿದೆ ಗಾಲಿಬ್-
ಶಿಕ್ಷಕರ ದಿನಾಚರಣೆ ವಿಶೇಷ
*******************
ಮನದ ಗುಡಿಯೊಳಗೆ ಗುರುವೆಂಬ ದೈವವು
ಅಕ್ಷರಗಳ ದೀಪ ಹಚ್ಚಿ,
ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕ ನೀಡಿ,
ಶಿಸ್ತು, ಸಹನೆ, ನಂಬಿಕೆ, ಪ್ರಾಮಾಣಿಕತೆ
ಎಂಬ ಜೀವನದ ಮೌಲ್ಯಗಳ ಕಲಿಸಿ,
ನಡೆ ನುಡಿಗಳ ಬಗೆಗೆ ತಿಳಿಸಿ
ಗುರಿ ಸಾಧನೆಯ ದಾರಿಯ ಬಗ್ಗೆ
ಉತ್ತಮ ಮಾರ್ಗದರ್ಶನ ನೀಡುತ್ತಾ,
ಬದುಕಿಗೆ ಶಕ್ತಿಯಾಗಿ, ಜೀವಕ್ಕೆ ಉಸಿರಾಗಿ
ಒಬ್ಬ ವಿದ್ಯಾರ್ಥಿಗೆ ತಂದೆಯಾಗಿ, ತಾಯಿಯಾಗಿ
ಗುರುವಾಗಿ ಕಾರ್ಯನಿರ್ವಹಿಸುವ
ಸಾಮರ್ಥ್ಯ ಇರುವುದು ಒಬ್ಬ ಶಿಕ್ಷಕನಿಗೆ ಮಾತ್ರ...!-
ಒಬ್ಬ
ವಿದ್ಯಾರ್ಥಿ
ಜೀವನಯಾನದ
ಬದುಕಿಗೆ ಆದರ್ಶವಾಗಿ
ದಡ ಸೇರಿಸಲು ನಾವಿಕನಾಗಿ
ಸನ್ಮಾರ್ಗದ ನಡೆಗೆ ಚಾಲಕನಾಗಿ
ಅಜ್ಞಾನದ ಕತ್ತಲೆಯಲಿ ಬೆಳದಿಂಗಳಾಗಿ
ಜ್ಞಾನದಾಹಿಗಳಿಗೆ ಅಕ್ಷರದಾಸೋಹಿಯಾಗಿ
ಸಾಧನೆಯ ಕಿರೀಟಕ್ಕೆ ಸ್ಫೂರ್ತಿಸೆಲೆಯಾಗಿ
ಭರವಸೆಯ ಬಾಳಿಗೆ ಮಾಲಿಕನಾಗಿ
ಮೌಲ್ಯಬಿತ್ತನೆಯ ನೇಕಾರನಾಗಿ
ಆದರ್ಶಕ್ಕೆ ನಾಯಕನಾಗಿ
ನಡೆಯುವವನೇ
ನಿಜವಾದ
ಶಿಕ್ಷಕ.-
ಸಮಯ ಮತ್ತು ಜೀವನ ಜಗತ್ತಿನ
ಅತ್ಯುತ್ತಮ ಶಿಕ್ಷಕರು.
ಜೀವನ ಸಮಯದ ಸಮರ್ಪಕ ಬಳಕೆಯನ್ನು
ಕಲಿಸಿದರೆ,
ಸಮಯ ಜೀವನದ ಪ್ರಾಮುಖ್ಯವನ್ನು
ಮನಗಾಣಿಸುತ್ತದೆ...-
Yq ನ ಎಲ್ಲಾ ಶಿಕ್ಷಕ ವೃಂದಕ್ಕೂ,
ನನ್ನ ತಿದ್ದಿ ತೀಡಿ ವಿದ್ಯೆ, ಬುದ್ದಿ ಕಲಿಸಿದ
ಎಲ್ಲಾ ಸುಂದರ ಮನಗಳಿಗೂ
ಗುರು ಪೌರ್ಣಮಿಯ ಶುಭಾಶಯಗಳು.
🙏🙏🙏-
ಒಂದು ಮಗುವನ್ನು ಅಥವಾ
ವಿದ್ಯಾರ್ಥಿಯನ್ನು
ನಾವು ಹೊಡೆಯಲು ಕಾರಣ
ಆ ಮಗುವಿನ ಹಠವನ್ನು
ನಿಯಂತ್ರಿಸಲು ಆಗದಷ್ಟು
ನಾವು ಅಶಕ್ತರಾಗಿರುತ್ತೇವೆ.-