ಲಿಪಿ_ಕಾ   (ಲಿpi_ಸಿ✍🏼)
310 Followers · 1 Following

ಕನ್ನಡ ।ಕವಿತೆ ।ಪುಸ್ತಕ📖।ಪ್ರಕೃತಿ🍀।ಮಳೆ🌦️।ಮೌನ🧎‍♀️।ಧ್ಯಾನ🧘🏼‍♀️।🩺।
Joined 29 March 2020


ಕನ್ನಡ ।ಕವಿತೆ ।ಪುಸ್ತಕ📖।ಪ್ರಕೃತಿ🍀।ಮಳೆ🌦️।ಮೌನ🧎‍♀️।ಧ್ಯಾನ🧘🏼‍♀️।🩺।
Joined 29 March 2020
6 MAY AT 17:56

ಮಸಣದಲಿ ಮಣ್ಣಾದವರು
ಚಿತ್ತದಲ್ಲಿ ನೆಲೆಯೂರುವುದು
ಕೆಲವು ದಿನಗಳಷ್ಟೇ,
ಮರುನೆನಪಾಗಲು
ಚಿತೆಯಾದ ದಿನಾಂಕವೇ
ಮರುಕಳಿಸಬೇಕಾದೀತು

-


16 APR AT 23:26

ನನ್ನ ಊರಿಗೆ
ನನ್ನದೇ ಮನೆಗೆ
ನಾನೀಗ ಅತಿಥಿ
ಬದುಕಿನ ಬದಲಾವಣೆಯೋ
ಕಂಡ ಕನಸಿನ ಉಡುಗೊರೆಯೋ
ನಾ ಅರಿಯೆ

-


12 APR AT 22:53

ಮತ್ತೊಮ್ಮೆ ಲೇಖನಿ ಹಿಡಿಯ ಬಯಸಿದ
ಈ ಹೃದಯ
ಮೂರು ವರುಷಗಳ ನಂತರ
ಆಲಿಸುವ ಕರ್ಣಗಳು ಕಾಣೆಯಾದಾಗ
ಪದಗಳ ಪೋಣಿಸುವ ಕಾರ್ಯವೊಂದೇ
ಕೈಹಿಡಿಯುವುದೆಂಬ ಭಾಸದಲಿ

ಮನದಲ್ಲೇ ಅಳಿದುಳಿದ
ಅದೆಷ್ಟೋ ಭಾವನೆಗಳು,
ಬಾಯಂಚಿನಲ್ಲೇ ಅಡಗಿದ
ಅದೆಷ್ಟೋ ಮಾತುಗಳು,
ಇದೀಗ ಉಸಿರಾಡಲು ಯತ್ನಿಸುತ್ತಿವೆ
ಪುಟಗಳ ಮಧ್ಯದಲಿ
ಅಕ್ಷರಗಳ ರೂಪದಲಿ


-


8 APR 2022 AT 19:13

ಮೌನಿಯಾಗಬೇಕಿದೆ ಒಮ್ಮೊಮ್ಮೆ
ಮನುಕುಲದೊಡನೆ ಮಂದಹಾಸದಿ
ಮುನ್ನಡೆಯಲು

ತೋರಿಕೆಯ ನಗೆಬೀರಬೇಕಿದೆ
ತಿಳಿಯದೆ ಅಪ್ಪಳಿಸುವ
ತೊಡಕುಗಳ ತುಂಡಾಗಿಸಲು

ಹುಂ ಊಹುಂ ಗಳಲ್ಲಿಯೇ
ಭಾವನೆಗಳ ಅಡಗಿಸಬೇಕಿದೆ
ಸಂಕಷ್ಟಗಳ ಹೊಡೆದೋಡಿಸಲು

ಅನವಶ್ಯಕರ ಮಾತುಗಳ
ಕರ್ಣಗಳ ಆದಿಯಲ್ಲೇ ಅಂತ್ಯಗೊಳಿಸಬೇಕಿದೆ
ಹೃದಯಂತರಂಗವ ನೆಮ್ಮದಿಯಾಗಿರಿಸಲು



-


20 OCT 2021 AT 2:33

....

-


15 JUN 2021 AT 8:57

.....

-


23 MAY 2021 AT 16:45

ಕಲ್ಪನೆಯ ಬೀದಿಯೊಂದರ ಅಂಚಿನಲಿ
ತರ ತರ ಪೋಷಾಕಿನ ರಂಗಿನಲಿ
ನೆನ್ನೆಗಳ ನೆನಪಿಲ್ಲದೆ
ನಾಳೆಗಳ ಸುಳಿವಿಲ್ಲದೆ
ವರ್ತಮಾನದ ಮಿಲನದಲಿ
ಅಲೆದಾಡುತಿದೆ ಮನ ಅರಿವಿಲ್ಲದ
ಅಲೆಮಾರಿಯಾಗಿ

ಜಾದು ಜಗದ ಜಾಣ ಜನರ
ಮಾಯೆಯ ಮಾತುಗಳ ಕೇಳುತ,
ನಕಲಿ ನಗುವಿನಲಿ ಹೂಂ ಉಹೂ
ಎನ್ನುತ, ಪಯಣ ಬೆಳೆಸಿದೆ ಮನ
ಎಲ್ಲೆ ತಿಳಿಯದ ತಿರುಕನಂತೆ

ಅರಿವಿಲ್ಲದೆ ಅರಳುವ ನುಡಿಸ್ವರಗಳ
ಅಡಗಿಸುತ,
ಭಾವನೆಗಳ ನೀರವತೆಯ ನಶೆಯಲಿ
ಮುನ್ನಡೆಯುತಿದೆ ಮನ,
ಯಾವುದೋ ಚಿತ್ತಾರವ ಚಿತ್ರಿಸುತಾ
ಭ್ರಾಮಕ ಬೀದಿಯಂಗಳದಲಿ

-


5 MAY 2021 AT 1:34

ಮೌನಿಯಾಗಿ ಕುಳಿತಿದೆ ಮನ
ಕಪ್ಪು ಕಡಲೊಂದರ ಮುಂದ

ಬಂಧಿಯಾಗಿದ್ದ ಭಾವವೊಂದು ನಯನದ
ಅಂಚಿನಿಂದ ಜಾರಿ ಸೇರಲೊರಟಿದೆ
ಸದ್ದಿಲ್ಲದೆ ಅಲೆಯೊಂದ

ಮಿಂಚಂತೆ ಬಂದ ನೆನಪೊಂದು
ಮಿಂದೆದ್ದಿದೆ ಭಾವ ಶರದಿಯೊಳು
ಧರಿಸಿ ನಿಶಬ್ದದ ಉಡುಗೆಯೊಂದ

ಮನದ ಚಿಪ್ಪಿನಲ್ಲಿ ಅಡಗಿದ್ದ
ಬೇಸರದ ಪದಗಳ ಸಾಲು ಸದ್ದಿಲ್ಲದೆ
ಜಾರಿವೆ ಬೆರಳ ತುದಿಯಿಂದ

ಕೊರಳ ದನಿಯು ಕಡಲ ತೀರದಲಿ ಕುಳಿತು
ಬಿಕ್ಕಳಿಸಿದೆ ಕಾಲಿ ಆಗಸವ ನೋಡುತ
ಕಳುವಾದ ಮುಗುಳು ನಗೆಯ ಹುಡುಕುತ

~~Latha ಸಿ




































-


26 APR 2021 AT 17:40

ನಮ್ಮದಲ್ಲದ ನಾಳೆ ಗಳಿಗೆ
ಜನಿಸಿದ ಊರ ತೊರೆದು
ಮನೆ ಮಂದಿಯ ಸಂಘ ತೊರೆದು
ಪ್ಯಾಟೆಯ ದಾರಿ ಹಿಡಿದು
ಕೆಲಸದ ಹುಡುಕಾಟದಲ್ಲಿ
ನೆಮ್ಮದಿಯ ಜೀವನ ಬದಿಗೆ ತಳ್ಳಿ
ಝಣ ಝಣ ಹಣವ ಪಡೆಯಲು
ಕಾಲಿಗೆ ಗಾಲಿಯಾಕಿ ಓಡುತಿರಲು

ಕಾಲವೇ ತಕ್ಕಡಿಯಲ್ಲಿ
ಸಂತಸದ ಮೂಟೆಯೊಂದ
ದುಡ್ಡಿನ ಗಂಟಿನೊಂದರ
ಕೂಡಿ ಕಳುಹಿಸಿದರು
ಆನಂದವ ನಿರಾಕರಿಸಿ
ಸಂಪತನ್ನ ಅರಸಿ ಬಯಸಿ
ನಗುವುದನ್ನೇ ಮರೆತಿವೆ
ಈ ಹುಚ್ಚು ಕೋಡಿ ಮನಸುಗಳು

-


29 OCT 2020 AT 22:39

ಮಾಗಿಯ ಸಮಯದಲಿ
ಮನದರಸಿಯ ಮುದ್ದಿಸಲು
ತುಷಾರನು ತಿಳಿ ಮುಂಜಾವಿನಲಿ
ತಡಮಾಡದೆಯಾಕುತ್ತಿದ್ದ ಹಾಜರು

ಪ್ರೀತಿಯಿಂದ ಪುಷ್ಪಳ ಮೊರೆಯೊರೆಸಿ
ಮನಸಾರೆ ಚುಂಬಿಸುತಾ
ಜಗವೇ ಕಣ್ಣರಳಿಸಿ ನೋಡುವಂತೆ
ಮಾಡುತ್ತಿದ್ದ ಕುಸುಮಳಿಗೆ ತಯಾರು

ಇಬ್ಬನಿಯ ಸೋಜುಗಾದ ಸ್ಪರ್ಶವು
ಸುಮಳಿಗೆ ಸ್ವರ್ಗ ಸಂತಸವ ನೀಡಿ
ನಲ್ಮೆಯ ಭಾವದಲಿ ನಲಿದಾಡಿಸಿ
ಮೂಡಿಸಿತು ನವ ಪ್ರೇಮದಳದ ಚಿಗುರು

ಒಂದೊಳ್ಳೆ ಪ್ರಾತಃ ಕಾಲದಲಿ
ಶೀಕರನ ಪ್ರೇಮ ನಿವೇದನೆಯಲಿ
ಅದಲು ಬದಲಾಯಿತು
ಇಬ್ಬನಿ- ಪುಷ್ಪದ ಮನಸು

-


Fetching ಲಿಪಿ_ಕಾ Quotes