ಆಲೋಚನೆಗಳು ಶಕ್ತಿಯುತವಾಗಿರಬೇಕು,
ಆಗಲೇ ಕನಸುಗಳು ಗಟ್ಟಿಯಾಗೋದು...
ನಂಬಿಕೆಗಳು ಬಲವಾಗಿರಬೇಕು,
ಆಗಲೇ ಕೆಲಸಗಳು ಪೂರ್ಣವಾಗೋದು...-
"ಯುವ ಮನಸ್ಥಿತಿ" ಪುಸ್ತಕದ ಲೇಖಕರು... read more
ಯಶಸ್ಸಿನದ್ದು ಯಾವತ್ತೂ ನಿಧಾನ ನಡಿಗೆ,
ಸಾಗುವುದನ್ನು ಮಾತ್ರ ನಿಲ್ಲಿಸಬಾರದು...!
ಮನಸ್ಸಿನದ್ದು ಯಾವತ್ತೂ ಯೋಚನೆಯ ಕಡೆಗೆ,
ಕಲಿಯುವುದನ್ನು ಮಾತ್ರ ನಿಲ್ಲಿಸಬಾರದು...!-
ಬೆಳೆಯುವಾಗ ನೂರಾರು ಸವಾಲುಗಳು,
ಬೆಳೆದಾಗ ಅವುಗಳೇ ಮೆಟ್ಟಿಲುಗಳು..!
ಗೆಲ್ಲುವಾಗ ನೂರಾರು ಅಡೆತಡೆಗಳು,
ಗೆದ್ದಾಗ ಅವುಗಳೇ ಜೀವನಪಾಠಗಳು..!-
ಒಗ್ಗಟ್ಟು ಬಲವಾಗಿದ್ದರೆ,
ಎಂತಹ ಕಾರ್ಯವಾದರೂ ಪರಿಪೂರ್ಣವಾಗುತ್ತದೆ...
ಮನಸ್ಸು ಗಟ್ಟಿಯಾಗಿದ್ದರೆ,
ಎಂತಹ ಸಮಸ್ಯೆಗಳಾದರೂ ಪರಿಹಾರವಾಗುತ್ತವೆ...
ಉದ್ದೇಶ ಸರಿಯಾಗಿದ್ದರೆ,
ಎಂತಹ ಗುರಿಯಾದರೂ ಈಡೇರುತ್ತದೆ..-
ಹಕ್ಕುಗಳನ್ನು ಮರೆಯದಿರಿ,
ನಮ್ಮತನವನ್ನು ಉಳಿಸಿಕೊಳ್ಳೋಣ..!
ನೆನಪುಗಳನ್ನು ಮರೆಯದಿರಿ,
ಖುಷಿಗಳನ್ನು ಉಳಿಸಿಕೊಳ್ಳೋಣ..!
ಜವಾಬ್ದಾರಿಗಳನ್ನು ಮರೆಯದಿರಿ,
ಭರವಸೆಗಳನ್ನು ಉಳಿಸಿಕೊಳ್ಳೋಣ..!-
ಅರ್ಥ ಮಾಡಿಕೊಳ್ಳುವ ಮನಸೊಂದಿದ್ದರೆ
ಬದುಕಿಗೆ ಸಮಸ್ಯೆಗಳೇ ಬರುವುದಿಲ್ಲ..!
ಪ್ರೀತಿ ಹಂಚಿಕೊಳ್ಳುವ ಜೀವವೊಂದಿದ್ದರೆ
ಖುಷಿಗೆ ಕೊರತೆಯೇ ಇರುವುದಿಲ್ಲ..!
ವಸ್ತು ಕೊಂಡುಕೊಳ್ಳುವ ಅರ್ಹತೆಯೊಂದಿದ್ದರೆ
ಚಿಂತೆಗೆ ಕಾರಣವೇ ಸಿಗುವುದಿಲ್ಲ..!-
ತಾಯಿ/ಅಮ್ಮ/ಅವ್ವ/ಜನನಿ/ಮಾತೆ
************************
ಮನೆಯ ಚಿಂತೆಗಳು ನನಗಿರಲಿ ಬದುಕಿನ ಖುಷಿಗಳು
ನಿನಗಿರಲಿ ಎಂದಳು... ಅವಮಾನಗಳ ಎದುರಿಸಿದಳು
ಮಕ್ಕಳಿಗಾಗಿ, ಕಷ್ಟಗಳ ಸಹಿಸಿಕೊಂಡಳು ಕುಟುಂಬಕ್ಕಾಗಿ...
ಜೀವ ನೀಡಿದ ಜನ್ಮದಾತೆಯು, ಜಗಕೆ ನನ್ನ
ಪರಿಚಯಿಸಿದವಳು.. ತಾಯಿಯ ನಗಿಸಿದರೆ
ಸಾರ್ಥಕ ಜನುಮವೂ,
ತಾಯಿಯೇ ಜೀವವು
ತಾಯಿಯೇ ದೈವವು...-
ಸೂಕ್ಷ್ಮ ಮನಸ್ಸಿಗೆ,
ಸಣ್ಣ ಮಾತು ಸಹ
ನೋವನ್ನು ನೀಡುತ್ತದೆ..!
ನೊಂದ ಬದುಕಿಗೆ,
ಸಣ್ಣ ಭರವಸೆಯು ಸಹ
ಧೈರ್ಯವನ್ನು ತುಂಬುತ್ತದೆ..!-
ಹವ್ಯಾಸ ಸರಿಯಾಗಿರಬೇಕು,
ಯಶಸ್ಸು ಅದರ ಮೇಲೆಯೇ ನಿಂತಿರುತ್ತದೆ...
ಮಾತು ಶುದ್ಧವಾಗಿರಬೇಕು,
ವ್ಯಕ್ತಿತ್ವ ಅದರ ಮೇಲೆಯೇ ನಿಂತಿರುತ್ತದೆ...
ನಿರ್ಧಾರ ಗಟ್ಟಿಯಾಗಿರಬೇಕು,
ಭವಿಷ್ಯ ಅದರ ಮೇಲೆಯೇ ನಿಂತಿರುತ್ತದೆ..-
ತಾಳ್ಮೆಯಿಂದ ಜೀವನ ಕಟ್ಟಬೇಕು,
ಕೋಪ ಏನನ್ನೂ ಸಾಧಿಸಲು ಬಿಡದು...
ಛಲದಿಂದ ಗುರಿಯ ತಲುಪಬೇಕು,
ಭಯ ಏನನ್ನೂ ಸಾಧಿಸಲು ಬಿಡದು...
ಪ್ರೀತಿಯಿಂದ ಜನರ ಗಳಿಸಿಕೊಳ್ಳಬೇಕು,
ಅಹಂ ಏನನ್ನೂ ಸಾಧಿಸಲು ಬಿಡದು...-