ಅವನು ಮನದರಸಿಗೆ
ಮುತ್ತಿನರಮನೆ ಕಟ್ಟಲು
ಮುತ್ತು ಗಳಿಸಲು ಹೋಗಿದ್ದ
ರಾಜನಂತೆ,,
ಇವಳು ಮುತ್ತಿನಂತ
ಅವನ ಮಾತಿಗಾಗಿ
ಕಾತರಿಸಿ ಕಾಯುತಿಹಳು
ಶಬರಿಯಂತೆ..-
ತಾಳ್ಮೆಯೂ
ಸೋಲನೊಪ್ಪಿಕೊಂಡಿತ್ತಂತೆ!
ಶ್ರೀ ರಾಮನ ದರ್ಶನಕ್ಕಾಗಿ ಕಾಯ್ದ
ಶಬರಿಯ ಪರಮ ಭಕ್ತಿಯ ಮುಂದೆ..-
ಶಬರಿಯಂತೆ ಕಾಯುತ್ತಿದ್ದರೆ ರಾಮ ಸಿಗುತ್ತಿದ್ದನೆನೊ
ಅವಳು ಕಾಯಲಿಲ್ಲ,ಅವನು ರಾಮನಾಗಿ ಉಳಿಯಲಿಲ್ಲ-
ಸಖಿ.. ಪ್ರತಿ ಸಂಜೆ
ನಿನಗಾಗಿ ಕಾಯುತಲಿರುವೆ
ನಿನ್ನ ನೆನಪಲ್ಲಿಯೇ
ಕಾಲ ಕಳೆಯುತಲಿರುವೆ
ನಿನಗಾಗಿ ಕಾಯುತ
ಕುಳಿತಿರುವೆ ದೀರ್ಘಾವಧಿಯಿಂದ
ಇಂದು ನನಗಾಗಿ ಸಂದೇಶವನ್ನು
ಒತ್ತು ತರುವೆಯೆಂದು...!!-
ನೀನು ಬರುತ್ತಿಯೋ
ಇಲ್ಲವೋ ಗೊತ್ತಿಲ್ಲ,
ಆದರೂ ಕಾಯುವೆ ಸಖಿ..
ನಾ ಮಾಡುತ್ತಿರುವುದು ಪ್ರೀತಿಯೇ
ಹೊರತು ಯಾವುದೇ ಒಪ್ಪಂದವಲ್ಲ..
-
ಹಾಡುಗಾರ ನಿನ್ನ ಹಾಡಿಗೆ
ಮನಸೋತು ಬಂದೆ ನಾನಿಲ್ಲಿ
ಈಗ ನನ್ನ ಒಂಟಿಯಾಗಿಸಿ
ಬಿಟ್ಟು ಹೋದೆಯಲ್ಲೋ
ಎಂದು ಬರುವೆ ನೀನು
ಕಾದಿಹಳು ಈ ಶಬರಿ
ನಿನಗಾಗಿ ಇಲ್ಲಿ
-
ಹಳೆಯ ತೋಟದ
ತುಕ್ಕು ಹಿಡಿದ ನಲ್ಲಿಯ ಮೇಲೆ
ಅದೆಂಥ ಭರವಸೆ ಗುಬ್ಬಿಗೆ
ರಾಮನಿಗಾಗಿ ಕಾದ ಶಬರಿಯಂತೆ
ಹನಿ ನೀರಿಗೆ ಕಾದಿದೆ,ಕಾತರಿಸಿದೆ.-
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ,
ಹೀಗೆ ನಿನ್ನ ಬರುವಿಕೆಗೆ ಕಾಯುವೆ ನಾ ಶಬರಿ ತರ.
-
ಇಂದು ಅವಳಿಗೂ ಬೇಕಾಗಿದೆ
ಮುತ್ತಿನರಮನೆಯು.
ಕಾಲ ಕಲಿಸಿದ ಪಾಠ,
ವ್ಯವಸ್ಥೆಯ ಪ್ರತಿಬಿಂಬ
ಬಯಸಿದೇ ಸಿರಿತನವ ವಿನಃ
ಖಾಲಿ ಮಾತನಲ್ಲ.
-