Manjunath K.R   (ಮಂಜುನಾಥ್.ಕೆ.ಆರ್)
122 Followers · 6 Following

9035970453
Joined 22 August 2018


9035970453
Joined 22 August 2018
1 OCT 2022 AT 8:38

ಶಾಪ!

ಶಾಪಗ್ರಸ್ಥ ನಾಯಿಗಳು, ‌
ಸಾರ್ವಜನಿಕ ಸ್ಥಳ,
ರಸ್ತೆಗಳಲ್ಲಿ, ಮಾಡುವಂತೆ!!

ಈ ಯುವ ಪ್ರೇಮಿಗಳು,
ಆ ನಾಯಿಗಳಿಗೆ ಸ್ಪರ್ಧೆ ನೀಡ್ತಿದ್ದಾರಂತೆ!
ಕಂಡಕಂಡಲ್ಲಿ, ರತಿಕ್ರೀಡೆ ಶುರುಮಾಡಿ.

ಸಾರ್ವಜನಿಕರಿಗೆ ಮಾತ್ರವಲ್ಲ,
ನಾಯಿಗಳಿಗೆ ನಾಚಿಕೆಯಾಗಿದೆಯಂತೆ!
ಈ ಯುವ ಕಾಮಿಗಳ ಆಟ ನೋಡಿ.

ಮಂಜುನಾಥ್. ಕೆ.ಆರ್

-


27 AUG 2022 AT 11:15

ಏಕಾಂಗಿ

ನಾವು ಬೇಟಿ ಮಾಡಿದ ಸಾವಿರ ಜನರಲ್ಲಿ,
ನೂರು ಜನ ಆತ್ಮೀಯರಾಗಬಹುದು!
ಆದರೆ ಮನಸ್ಸಿಗೆ ಹತ್ತಿರವಾಗುವವರು,
ಬೆರಳೆಣಿಕೆಯಷ್ಟು ಮಾತ್ರ!!

ಎಷ್ಟೇ ಜನ ಆತ್ಮೀಯರು ಇದ್ದರು,
ಹಿತೈಷಿಗಳು ಇದ್ದರು,
ಬದುಕಿನ ಹೋರಾಟದಲ್ಲಿ,
ಕೊನೆಗೆ ನೀ ಏಕಾಂಗಿ.

ಮಂಜುನಾಥ್. ಕೆ.ಆರ್

-


16 JUN 2022 AT 21:41



If you surrounded by
negative peoples.
you can't grow in your life.
Come out from negative circle
and Do what you think.

Manjunath K R

-


28 MAY 2022 AT 11:16

ಒಳ್ಳೆ ಹುಡುಗರ ಲಕ್ಷಣ!!

ಮಧ್ಯರಾತ್ರಿ ಕನಸಿನಲ್ಲಿ ಹಳೆ ಹುಡುಗಿ ಬಂದಾಗ!
ಒಮ್ಮೆಲೆ ಎಚ್ಚರವಾಗಿ,
ಅವಳ ಜೊತೆ ಮಾತನಾಡಬೇಕು ಎನಿಸಿ.
ಅವಳೀಗ ಮತ್ತೊಬ್ಬನ ಹೆಂಡತಿ!
ಎರಡು ಮಕ್ಕಳ ತಾಯಿ ಎಂದು ನೆನಪಾದಾಗ.
ದೇವರ ಮಂತ್ರ ಜಪಿಸಿ ಮತ್ತೆ ಮಲಗುವುದೇ ಒಳ್ಳೆ ಹುಡುಗರ ಲಕ್ಷಣ..😑
XYZ

-


12 MAY 2022 AT 23:33


ಮೂಲಭೂತ ಅವಶ್ಯಕತೆಗಳು,
ಮುಗಿದ ಬಳಿಕವಷ್ಟೇ,
ಭಾವನೆಗಳು, ಸಂಬಂಧಗಳು,
ಪ್ರೀತಿ ಎಲ್ಲವು!!

ಹಸಿದವನಿಗೆ ಅನ್ನ ಕೊಡದೆ,
ಭಾವನೆಗಳ ವರ್ಣಿಸಿದರೆ,
ಹೊಟ್ಟೆ ತುಂಬೀತೆ??

ಜೀವನವು ತುಂಬಾ
ಪ್ರಾಯೋಗಿಕವಾಗಿದೆ,
ಭಾವನೆಗಳಿಗೆ ಯಾವುದೇ ಮೌಲ್ಯವಿಲ್ಲ.

ಮಂಜುನಾಥ್. ಕೆ.ಆರ್



-


1 MAY 2022 AT 22:12

ಯೋಗ, ಯೋಗ್ಯತೆಯ
ಮೀರಿ ಆಲೋಚಿಸುತ.
ಹಗಲು ಕನಸನು, ಕಂಡೆ ನಾನು!!
ಹಂಬಲಸಿ ಕಾದಿರುವೆನು,
ಏನೊ ಕಳೆದುಕೊಂಡ ಭಾವ!!
ಜೊತೆ ಇರಬೇಕು,
ಸದಾ ನಿನ್ನ ಜೊತೆ ಇರಬೇಕು.

-


9 APR 2022 AT 8:00

ನ್ಯಾನೊ ಕಥೆ.

ನಿಜ ಪ್ರೀತಿ.

ಡಬಲ್ ಡಿಗ್ರಿ ಮಾಡಿ, ಒಳ್ಳೆಯ ಕೆಲಸದಲ್ಲಿದ್ದ ಹುಡುಗಿ ಒಬ್ಳು. ನನ್ನ ಗಂಡ ಆಗೋನು ಮಾಸ್ಟರ್ಸ್ ಆದ್ರು ಮಾಡಿರ್ಬೇಕು,
ಅಂತ ಬಂದ ಸಂಬಂಧಗಳನ್ನೆಲ್ಲ, ತಿರಸ್ಕರಿಸುತ್ತಿದ್ಲು.
ತಾನು ಕೆಲಸ ಮಾಡುವ ಕಂಪನಿಯ ಸಕ್ಸಸ್ ಮೀಟ್, ಆರ್ಟಿಕಲ್ ಓದಿದಾಗಲೆ ತಿಳಿದದ್ದು. 10th Fail ಹುಡುಗ, PhD ಮಾಡಿದ ಹುಡುಗಿಯ ನಿಜ ಪ್ರೀತಿ ಮತ್ತು ಪರಿಶ್ರಮದ ಸಂಕೇತ, ಈ ಕಂಪನಿ ಮತ್ತು ಸಕ್ಸಸ್ ಅಂತ.

-


8 APR 2022 AT 2:33



ಬಣ್ಣದ ಬದುಕಿನ, 
ಬಣ್ಣ ಬಣ್ಣದ 
ನಕಲಿ ಸಂಬಂಧಗಳಿಗಿಂತ!
ಕಪ್ಪು ಬಿಳುಪಿನ, 
ಅಸಲಿ ಏಕಾಂತವೆ ಉತ್ತಮ.

ಮಂಜುನಾಥ್. ಕೆ.ಆರ್

-


5 APR 2022 AT 14:25

ಇಲ್ಲಿ ಯಾರು ಯಾರಿಗೂ ಅನಿವಾರ್ಯವಲ್ಲ!
ಕೇವಲ ಅವಶ್ಯಕತೆಗಷ್ಟೆ,
ಈ ಸಂಸಾರ,ಸಂಬಂಧ, ಬಂಧನಗಳು!!
ಯಾರಿಲ್ಲದಿದ್ದರು ಬದುಕು ಸಾಗುತ್ತದೆ.

-


4 APR 2022 AT 21:02


ರೂಪ, ಗುಣ, ಆಸ್ತಿ, ಹಣ,
ಜ್ಞಾನ, ಘನತೆ!!!
ಇದಾವುದು
ಪ್ರಾಣಿಗಳಿಗೆ ತಿಳಿದಿಲ್ಲ.
ಅವುಗಳು ಬಯಸುವುದು,
ನಿಸ್ವಾರ್ಥ ಪ್ರೀತಿ ಮತ್ತು ಕಾಳಜಿ.

ಹೊಟ್ಟೆ ತುಂಬಿದ ಮೇಲೆ,
ಹುಲಿಯೂ ಹಸುವಿನಂತೆ!!
ಸೌಮ್ಯವಾಗಿ ಬಿಡುತ್ತದೆ.
ಆದರೆ
ಹೊಟ್ಟೆ ತುಂಬಿದ ಮೇಲು,
ತೃಪ್ತಿ ಇಲ್ಲದ ಮೃಗ ಈ ಮನುಷ್ಯ!

ಮಂಜುನಾಥ್. ಕೆ.ಆರ್


-


Fetching Manjunath K.R Quotes