ತಳಿರು -ತೋರಣ ಕಟ್ಟೋಣ
ಬೇವು- ಬೆಲ್ಲ ತಿನ್ನೋಣ
ನೋವು-ನಲಿವು ಬಾಳೋಣ
ನಿಮಗೂ ನಿಮ್ಮ ಕುಟುಂಬದವರಿಗೂ
ಯಗಾದಿ ಹಬ್ಬದ ಶುಭಾಶಯಗಳು,
-
ಅದುವೆ ನನಗೆ ಖುಷಿ.
ಕವಿತೆ ನನ್ನ ದ್ಯಾನ
ಕವಿತೆ ನನ್ನ ಗಾನ
ಕವಿತೆ ನನ್ನ ಯಾನ
ತೇರು
-----------
ತೇರು
ನಂಬಿಕೆಯ ಪ್ರತೀಕ
ಹಾಗೆ ಬದುಕು ಕೂಡ
ತೇರು
ಎಲ್ಲರ ಕೇಂದ್ರಬಿಂದು
ಹಾಗೆ ಬದುಕು ಕೂಡ
ತೇರು
ಭಕ್ತಿಯ ಭಾವ
ಹಾಗೆ ಬದುಕು ಕೂಡ
ತೇರು
ಚಲನೆಯ ಸಂಕೇತ
ಹಾಗೆ ಬದುಕು ಕೂಡ
~ಕೊಟ್ರೇಶ ಅಕ್ಕಿ
-
ಸೂರ್ಯನ
ಆರಾಧಿಸುವ
ಸಂಕ್ರಾಂತಿ
ಸುಗ್ಗಿ ಸಂಭ್ರಮ
ತರುವ
ಸಂಕ್ರಾಂತಿ
ಉತ್ತರಾಯಣ
ಹೊತ್ತು ತರುವ
ಸಂಕ್ರಾಂತಿ
ಎಳ್ಳು ಬೆಲ್ಲ
ಹಂಚಿ ತಿನ್ನುವ
ಸಂಕ್ರಾಂತಿ
ಹಸುಗಳಿಗೆ
ಕಿಚ್ಚು ಹಾಯಿಸುವ
ಸಂಕ್ರಾಂತಿ
ಮಾಗಿ ಚಳಿಯ
ಮಾಯವಾಗಿಸುವ
ಸಂಕ್ರಾಂತಿ
ದೀರ್ಘ ಹಗಲಿನ
ಗಾಳಿಪಟ ಹಾರಿಸುವ
ಸಂಕ್ರಾಂತಿ
ಮನ ಮನೆಗಳಲ್ಲಿ
ಚೈತನ್ಯ ಮೂಡಿಸುವ
ಸಂಕ್ರಾಂತಿ
~ ಕೊಟ್ರೇಶ.ಅಕ್ಕಿ— % &— % &-
ಆತ್ಮೀಯರೆ
ಹೊಸ ವರ್ಷವು
ನಿಮ್ಮ ಬದುಕಿಗೆ
ಹೊಸ ಹುಮ್ಮಸ್ಸು ತರಲಿ.
ಶುಭಾಶಯಗಳು
~ ಕೊಟ್ರೇಶ.ಅಕ್ಕಿ
-
ಈ ಜಗತ್ತಿನಲ್ಲಿ ಜರುಗಿದ ಕ್ರಾಂತಿಗಳಿಗೆ ಮಹಾಪುರುಷರೇ ಕಾರಣ ಎಂದು ಭಾವಿಸಲಾಗಿದೆ.ನಿಜವಾಗಿ ಹೇಳಬೇಕೆಂದರೆ ಜನರೇ ಅದಕ್ಕೆ ಕಾರಣರು
~ ಎಂ.ಕೆ.ಗಾಂಧಿ-
ಪಶುಪಕ್ಷಿಗಳಂತೆ
ಕೂಡಿ
ಹೊರಟು ಹೋಗಲಾರದ
ಮನುಷ್ಯ
ಪ್ರೇಮ,ಮದುವೆಗಳ
ದುರಂತ ಪಡೆದವನಲ್ಲವೆ ?
-ನೀಲು-
ಪ್ರೇಮವೆಂದರೆ
ಬೇಕು
ಎನ್ನುವಷ್ಟು
ಹತ್ತಿರವಾಗುವುದು
ಸಾಕು
ಎನ್ನುವಷ್ಟು
ದೂರವಾಗುವುದು-
ಮಹಾನಗರಿಯ
ಪ್ರತಿ ಗಗನಚುಂಬಿ
ಕಟ್ಟಡಗಳು
ಮಾತಾನಾಡಿಕೊಂಡಿದ್ದು
ಹೀಗೆ
"ಆ ಇಂಜಿನಿಯರಗಳು
ನಮ್ಮ ಪಾಲಿಗೆ ಅಪ್ಪ ಅಮ್ಮನ ಹಾಗೆ" .....
-
ಪಶುಪಕ್ಷಿಗಳಂತೆ
ಕೂಡಿ
ಹೊರಟು ಹೋಗಲಾರದ
ಮನುಷ್ಯ
ಪ್ರೇಮ,ಮದುವೆಗಳ
ದುರಂತ ಪಡೆದವನಲ್ಲವೇ?
~ನೀಲು-
ಒಂದೊಂದು ಋತು ಒಂದೊಂದು
ಹೂ,ಹಣ್ಣು ನೀಡಿ
ಮುದಗೊಂಡರೆ ಮನುಷ್ಯ
ನೀಡಿದ್ದು ಒಣ ಕುತಂತ್ರ ಮಾತ್ರ
~ನೀಲು-