ಅಭಿಸಾರಿಕೆ  
1.6k Followers · 46 Following

read more
Joined 21 July 2018


read more
Joined 21 July 2018

ಬದುಕಿನ ಮೇಲೊಂದು
ಕಡು ಜಿಗುಪ್ಸೆ ಹುಟ್ಟಿದಾಗ
ಎದೆ ಕದವ ತಟ್ಟಿದವ ನೀನು,
ಅದಕ್ಕೇ ಏನೋ ಈಗಂತೂ
ಬದುಕೆಂದರೆ ನೀನು;
ನೀನೆಂದರೆ ಬದುಕು.!

-ಪ್ರೇಮದ ಅಸಲಿ ಸುಖ ಸನಿಹ
ಮತ್ತು ಚುಂಬನಗಳಲಿಲ್ಲ ಗಾಲೀಬ್,
ದೊರೆಯದ ಸಾನಿಧ್ಯವ ಬೇಡುತಾ
ಹರಿವ ಕಣ್ಣೀರ ಆಹ್ಲಾದಿಸುವುದೇ
ಪ್ರೇಮದ ಪರಮೋಚ್ಛ ಸುಖ.!

-ನಿನಗೆ ಬೇಸರಾದರೆ
ನನಗೂ ಬೇಡ ಬಿಡು ಹುಡುಗ;
ಸೂತಕದ ಸಂಕಟ,
ಭೇದಿಸದ ಬಂಧ ಬಂಧನ,

ದಾರಿಯಲಿ ನೀ ಚೆಲ್ಲಿದ
ನಗುವಿದೆ ಹೆಕ್ಕುತ್ತೇನೆ
ಎದೆ ಪೂರ್ತಿ ಹರವಿದ
ನೆನಪಿದೆ ಅಪ್ಪುತ್ತೇನೆ
ನಿನ್ನ ಸಾವಿರದ
ಸಾವೇ ಇರದ
ಕವಿತೆಯಿದೆ ಹೊಕ್ಕುತ್ತೇನೆ
ಸಾಕು.. ಹೊಟ್ಟೆ ತುಂಬುತ್ತದೆ
ಗೋರಿಯೊಳಗೂ ಬದುಕುತ್ತೇನೆ.!

-ಪ್ರೇಮ ಪಗಡೆಯಲಿ
ಸೋಲಲಾರೆನೆಂಬ ಹುಂಬಿನಲಿ
ಎಲ್ಲವನ್ನೂ ಅಡವಿರಿಸಿದ್ದೇನೆ.,
ಸ್ವಾಭಿಮಾನವೊಂದನು
ಉಳಿಸಿಕೊಂಡಿರುವೆ,
ಇದನ್ನೂ ಬೇಡದಿರು
ಬೇಕಿದ್ದರೆ ಉಸಿರ ಕೇಳು
ಕ್ಷಣದಲ್ಲೇ ಕೈಗಿಡುವೆನು.!

-ಅವಳಿಗೆ ಜೀವವೂ ಜೀವನವು ಅವನೇ ಆಗಿದ್ದನು,
ಅವನೋ ಜೀವದಿಂದ ಜೀವನವ ತೂಗಿ ಅಳೆದು
ಬದುಕು ದೊಡ್ಡದೆಂದು ಮೈಮನ ಕೊಡವಿ ನಡೆದನು!

-ನಂಬಿಕೆ ಮತ್ತು ಪ್ರಾಮಾಣಿಕತೆ
ಪ್ರೀತಿ ಗರ್ಭದೊಳಗಿನ
ಅವಳಿ ಕುಡಿಗಳಿದ್ದಂತೆ
ಇವರೀರ್ವರ ಹೆರದ ಪ್ರೀತಿ
ಒಣ ಬಂಜೆಯಂತೆ.!

-ನೀ ಕಲಿಯಲೇ ಬೇಕು ಹುಡುಗಿ.,
ಸೊಡರಿನಂತೆ ಸುಟ್ಟು ಬೆಳಗುವುದನು
ಗಂಧದಂತೆ ತೇಯ್ದು ಘಮಿಸುವುದನು
ಸುಣ್ಣದಂತೆ ಬೆಂದು ಹದವಾಗುವುದನು
ಅವನಿಯಂತೆ ನೊಂದು ನಲಿಯುವುದನು.,
ಶಿಶಿರನಂತೆ ಬೆರೆತು ಒಂಟಿಯಾಗುವುದನು
ಕತ್ತಲಂತೆ ಕಲೆತು ಕರಗಿ ಮುಗಿಯುವುದನು.!

-ನಾ ರಾಧೆಯಾಗಲೊಲ್ಲೆ ಮುರಾರಿ.!
ಮೀರಾಳ ಬಿರುದು ಬೇಕಿಲ್ಲ ಮಾಧವ,
ಪಟ್ಟದರಸಿಯರ ಭೋಗವೂ ಬೇಡ.,
ಸಿರಿ ಭಾಗ್ಯವ ಬೇಡಿ ಬಂದವಳಲ್ಲ ನಾನು
ಗೋಪ ನಿನ್ನ ನಿನ್ನಂತೆಯೇ ಪ್ರೀತಿಸುವೆ
ನನ್ನನು ನನ್ನಂತೆಯೇ ಸ್ವೀಕರಿಸು ಸಾಕು.!

-ಅವನು ನಿನ್ನ ಹೂವೆನ್ನುವ
ನವಿಲೆನ್ನುವ, ಬಳುಕಿ ಹರಿವ
ನದಿಯೆನ್ನುವ, ಲತೆಯೆನ್ನುವ
ತುಂಬು ಹುಣ್ಣಿಮೆಯು ನೀನೆ
ಕಲ್ಪನೆಯು, ಕಾವ್ಯವು ನೀನೆನ್ನುವ.,
ನೆನಪಿಡು ಗೆಳತಿ., ಯಾವೊಬ್ಬ
ನಿನ್ನನು ಹೆಣ್ಣಾಗಿ ಕಾಣ್ವನೋ
ಅವನಷ್ಟೇ ನಿನ್ನವನಾಗಲು ಅರ್ಹ.!

-ನಾನೆಂದರದೇನೆಂದು ಸಂಪೂರ್ಣ
ಮರೆತು ಪ್ರೇಮಿಸಿದೆ ನಿನ್ನ ನಾ.,
ಮಾಧವ ನನ್ನಾಣತಿಯ
ಕೇಳದೆ, ನನ್ನದೇ ಅಸ್ತಿತ್ವವ
ಮರೆಸುವ ವೇದನೆಯಿದನೇ
ಪ್ರೇಮವೆನಬೇಕೇ ನಾನಿಂದು.!

-


Fetching ಅಭಿಸಾರಿಕೆ Quotes