ಕಲ್ಲು ಮನಸ್ಸು ಕರಗುವುದೆ.?ಎಂದು ಜರಿದಿದ್ದೇ
ಕರಗಿ ನಿನ್ನತ್ತ ಹರಿದದ್ದು ನಿನ್ನ ಗಮನಕ್ಕೆ ಬರಲಿಲ್ಲ
ನಿನ್ನ ಸೇರಿ ಸಂಗಮವಾಗಬೇಕೆಂದಿದ್ದೆ
ನಿನ್ನ ನಿರ್ಲಕ್ಷ್ಯ ಜೀವಂತ ಸಮಾದಿಯಾಗಿರುವೆ
-
"ತುಟಿಗೆ ತುಟಿ ತಾಕಲು ಸಮಸಂಖ್ಯೆ ನಾಲ್ಕು
ಗೋಡೆಗಂಟಿ ಪಾದ ಭೂಮಿ ತಾಕಲು ಬೆಸಸಂಖ್ಯೆ ಮೂರು"
(no offense)-
"ಒಲವ ಮಳೆ ಸುರಿಸುತಲೆ ಇರುವೆ
ನೀ ಇಷ್ಟ ಪಟ್ಟರು,ಪಡದೆ ಇದ್ದರೂ
ನೆಮ್ಮದಿಯ ಉಸಿರು ನಿನ್ನದಾಗಿರಬೇಕು
ನಾ ಇದ್ದರು,ಇಲ್ಲದೆ ಇದ್ದರೂ"-
ಮೂರುಸಂಜೆ ಮಬ್ಬಾಗುವುದೇಕೆ ಮನ
ತಬ್ಬಿಬ್ಬುಗೊಳ್ಳುವ ಗೊಂದಲದ ಮಧ್ಯೆ
ಹಬ್ಬಿರುವ ಬೆಳಕು ಅಬ್ಬರಿಸುವುದಿಲ್ಲ
ಇಣುಕುವ ಕತ್ತಲೆಯ ಕ್ರೂರತೆಯಿಲ್ಲ
ಆದರೂ ಬೊಬ್ಬಿರಿವ ಮನಸೆಂಬ ಹುಚ್ಚು
ಅದಕೂ ಹತ್ತಿರಬಹುದು ಇಳಿಸಂಜೆ ಕಿಚ್ಚು-
"ಮತ್ತೆ ಮಳೆ ಬಂತು
ನೆನೆಗುದಿಗೆ ಬಿದ್ದಿದ್ದ ಹಳೇ ನೆನಪುಗಳ ಹೊತ್ತು
ಹಗುರಾಗಿ ಬೀಡಬೇಕಿದೆ
ಎದೆ ಭಾರ ಇಳಿಸಿ,ಬಿಕ್ಕಳಿಸಿ ಅತ್ತು"-
ಉಸಿರು ತಾಕಲು ನಡುಗುವೆ ಏಕೆ
ಬೆಚ್ಚಗೆ ಜೊತೆಗೆ ನಾನಿರಲು
ಮುತ್ತು ಕೊಡಲು ಅವಸರವೇಕೆ
ಕಳೆಯಲು ಪೂರ್ತಿ ರಾತ್ರಿಯಿರಲು
-
ಕಲ್ಲು ಎಸೆಯುವವರು ಇದ್ದೇ ಇರುವರು ಸುತ್ತ
ಕುಗ್ಗದಿರು ಮನವೆ
ಎಸೆದ ಕಲ್ಲಿನ ಕೋಟೆ ಕಟ್ಟಿಕೊ ಛಲದಿ
ಕಲ್ಲು ಎಸೆದವರು ಕೆಳಗೆ ನೀ ಕೋಟೆಯ ಮೇಲೆ
-
ತಡರಾತ್ರಿ ಎದೆಯೆರುವ ಅವಳ ನೆನಪುಗಳ ಕಥೆ
ಏರಿಳಿಯುವ ಬಿಸಿಯುಸಿರಿಗಷ್ಟೇ ಗೊತ್ತು
ಇದ್ದ ಪ್ರೀತಿಯ ವ್ಯಾಖ್ಯಾನ ಅವರಿಬ್ಬರಿಗೆ ಅರಿವಿಗೆ
ಮಿಕ್ಕವರಿಗೆ ಗೊತ್ತಿರುವುದು ಅಡಿಬರಹವಷ್ಟೆ
"ಪ್ರೀತಿ ಕಮಲದಂತೆ,ಅದು ಸಹ ಕೆಸರಲ್ಲೆ ಹುಟ್ಟುವುದು"-