ಪರಿಸರವನ್ನು ಈಗಾಗಲೇ ನಾಶ
ಮಾಡುತ್ತಿರುವ ಮಾನವರಾದ
ನಮಗೆ, ವಿಶ್ವ ಪರಿಸರ ದಿನದ
ಶುಭಕೋರುವ ಹಕ್ಕಿಲ್ಲ..-
ಈ ಪರಿಸರವ ಉಳಿಸಿದರೆ ಉಳಿಯುವುದು ನಮ್ಮೆಲ್ಲರ ಆತ್ಮ
ಹಸಿರಾದ ಈ ಪ್ರಕೃತಿಯಲ್ಲಿ ಜೀವಿಸುವ ನಾವೇ ಪುಣ್ಯಾತ್ಮರು
ಈ ಪ್ರಕೃತಿಯ ಸೊಬಗು ನಮಗೆಲ್ಲ ಮೆರುಗು
ಸದಾ ತುಂಬಿರಲಿ ಪ್ರಕೃತಿಯಲ್ಲಿ ನಗು
ಎಂದಿಗೂ ನಶಿಸದಿರಲಿ ಇದರ ಸೊಬಗು.
ಎಲ್ಲರಿಗೂ ವಿಶ್ವ ಪರಿಸರ
ದಿನದ ಶುಭಾಶಯಗಳು 🙏💐💐💐🌳🌲🌳-
ಮರೆಯದಿರು ಈ ಅದ್ಭುತವ ಕೊನೆಯ
ಕ್ಷಣದವರೆಗೂ ಜೀವಾತ್ಮ,
ಮುದ್ದು ಮಗುವಂತೆ ನಿಸರ್ಗವ
ನೀ ನೋಡಿಕೋ
ಹೆತ್ತ ತಾಯಂತೆ ನಿಸ್ವಾರ್ಥದಿ ಪ್ರೀತಿಯ
ತೋರಿ ಬದುಕಿನುದ್ದಕ್ಕೂ ನಮ್ಮೆಲ್ಲರ ಪೊರೆಯುವಳು.
-
ಪ್ರಕೃತಿ ನಿನ್ನೆಷ್ಟು ಅದ್ಬುತ
ನಿನ್ನೊಮ್ಮೆ ನೋಡಿದರೆ ಸಾಕು
ಮನಸಿನ ಗೊಂದಲಗಳೆಲ್ಲ ಕರಗಿ
ಮನಸು ನಿರಾಳವಾಗುವುದು
ನಿನ್ನ ನೋಡುತ ಮತ್ತೆ ಮತ್ತೆ
ನಿನ್ನಲ್ಲೇ ಕಳೆದುಹೋಗುವ ಆಸೆ.
-
ಮರಗಳ ಬೆಳೆಸಿದ
ನೀವೆ ಹೆಮ್ಮರವಮ್ಮ
ನೀವ್ ಒಂದು ಚೂರು
ತೊರಿಕೆಗಾಗಿ ಮೆರೆದವರಲ್ಲ
ಆದರೆ, ಈ ಜನ
ಪುಟ್ಟದೊಂದು ಸಸಿ ನೆಟ್ಟು
ಬೆಳೆಯಿತೊ ಇಲ್ಲವೊ
ಎನ್ನುವ ಪರಿ ಗೊತ್ತಿಲ್ಲದ
ಹೊರತು ಮೆರಯುತ್ತಿರುವರಲ್ಲ,
ನಿಮಂತೆ ಆಗಬೇಕು ಆದರೆ ಮರಗಳ
ತಾಯಿ ಹೆಮ್ಮರವಮ್ಮ-
ಹಸಿರನ್ನು ಉಸಿರು ಮಾಡಿದ್ದು
ಸಾಲುಮರದ ಅಜ್ಜಿ, ತಿಮ್ಮಕ್ಕ.
ಕೆಲವರು ಉಸಿರ್ಕೊಡುವ ಹಸಿರು
ಮರಗಳನ್ನು ಕೊರೆದು ಮಾಡಿಕೊಂಡರು ರೊಕ್ಕ.
ಉಸಿರಿಗಾಗಿ ಮರಗಳನ್ನು ಮಕ್ಕಳಂತೆ
ಸಾಕಿದವಳು ಶುದ್ದ ಉಸಿರಿಗೆ ಕಾರಣಳಾದಳು,
ಭಾರತದ ರತ್ನ ಆದಳು.
ಹಸಿರು ಮರಗಳನ್ನು ಕೊರೆಸಿದವರು
ಬಾರಿನಲ್ಲಿ ಬಿಯರ್ಗಾಗಿ ಕುಳಿತರು,
ನಾಶವಾದರು, ನಾಶವನ್ನೂ ಮಾಡಿದರು.-
ನೀ ಎಲ್ಲವ ಕೊಟ್ಟೆ
ನಾವು ನಿನ್ನನ್ನೆ ತುಳಿದು ಬಿಟ್ಟೆವು
ನಾವೇನು ಕೊಟ್ಟೆವು ನಿನಗೆ
ನೀ ಕೊಟ್ಟಿದ್ದನ್ನು ಉಳಿಸಿಕೊಳ್ಳುವ
ಯೋಗ್ಯತೆಯೂ ಇಲ್ಲಾ ನಮಗೆ
ಬದುಕಲು ಬಿಟ್ಟವಳು ನೀನು
ನಿನ್ನೆ ನಾಶಮಾಡಲು ಹೊರಟಿಹೆವು ನಾವು
ಮಾತು ಬಾರದ ಮೌನಿ ನೀನು
ನಿನ್ನೊಡಲ ಮಕ್ಕಳ ಕೊಚ್ಚಿ ಕೊಲ್ಲುತಿಹೆವು ನಾವು
ಈಗ ಎಚ್ಚರಿಕೆಯ ಕರೆ ಘಂಟೆ ಭಾರಿಸಿರುವೆ ನೀನು
ಇನ್ನಾದರೂ ನಿನ್ನ ರಕ್ಷಿಸಲಿ ಮನುಜನು
ಪರಿಸರದೊಡಲಲಿ ಹಾಯಾಗಿ ಮಲಗಲು..-