❤️ಒಲವ ಜೀವ❤️
ನನ್ನೊಳಗೆ ನಿನ್ನೊಲವ ತುಂಬಿ
ನೀ ನಕ್ಕಾಗೆಲ್ಲ ಅರಳುವ ಆನನಕೆ
ಸವಿ ಮುತ್ತೊಂದನಿತ್ತು ನಸು ನಾಚಿ
ಕಣ್ ಸನ್ನೆಯಲೇ ಬಂದಿಸಿಬಿಡಲೇ?
ಹೃದಯ ಬಡಿದಾಗೆಲ್ಲ, ನಿನ್ನ ನೆನಪೂಂದು
ನನ್ನೊಳಗೆ ನುಸುಳಿ ಸವಿ ಭಾವಲಹರಿಯ
ಸ್ಫುರಿಸುವ ಆ ಘಳಿಗೆ, ಮತ್ತೆ ಮತ್ತೆ ನನ್ನ
ಕಾಡಿಸುವ ಒನಪು, ಒಯ್ಯಾರಕೆ ನಾ ಶರಣೆನ್ನಲೇ?🥀
ತಂತಿಯ ವೀಣೆಯೊಂದು ನುಡಿಯಲಾರದೆ
ಬೇಸತ್ತು ಮೂಲೆಯಲಿ ತನ್ನುಸಿರ ಚೆಲ್ಲಿರಲು
ವೈಣಿಕನಾಗಿ ಮೀಟಬಲ್ಲೇನೆ ನಾನು ಅನುರಕ್ತನಾಗಿ
ಪ್ರೀತಿಯ ಹೊಂಗಿರಣಕೆ ಹೊಸ ಚೈತನ್ಯವಾಗಿ?
ಹೊಂಬಿಸಿಲೆ ಹೊಂಬಣ್ಣವ ಬೀರಿ
ಅನುರಾಗದ ಅಲೆಯೊಳಗೆ ಅಮಲೇರಿ
ಅಂಬರದ ಚಂದಿರನ ತಂಪಾದ ಭವದೊಳಗೆ
ಪ್ರಣಯ ಸಿಂಚನವ ಸಿಡಿಸಿ ಬಿಡಲೇ ?
ಸವಿ ನುಡಿಗಳ ಅರುಹಿ, ಭಾವತರಂಗವ ಹರಡಿ
ಪ್ರತಿ ನಾಡಿ ಮಿಡಿತದಲೂ ,ನಿ ಎನಗೆ ಹಿತವಿರಲು
ನನ್ನಾವರಿಸಿ, ಎದೆಗೊರಗಿ ಮೋಹಿತಳಾಗಿ ನೀ
ರಮಿಸುತಿರಲೆನಗೆ ಈ ಬಾಳು ನಿನಕೂಡಿ ಹಸನಾಗದೇನೂ?
-
ಅಜ್ಜಾನದಲೊಂದು ಜ್ಞಾನದ ಮಾಧುರ್ಯವ ಹುಡುಕ ಹೊರಟಿರುವೆ🙏🙏🙏
ಬರೆಯ ಹೊರಟಿರುವೆ ನಾ
ನನ್ನ... read more
ಇರುವಿಕೆಗೊಂದು ಅಸ್ತಿತ್ವವ ಕೊಟ್ಟು
ಬದುಕಿನ ರೀತಿಗೆ ಹೊಸತನವಿಟ್ಟು
ಸರಳ, ಸುಂದರ ಜೀವನದಲ್ಲಿ
ಬಾಳನು ಬೆಳಗಿಸು ಹರುಷವ ಚೆಲ್ಲಿ..!!
ಕಷ್ಟ ನಷ್ಟಗಳು ಬರುವುದು ಎಂದು
ಕುಗ್ಗದೆ,ಕುಂದದೆ ಸಾಗು ನೀ ಮುಂದು
ಜಗದಗಲವೂ ವ್ಯಾಪಿಸಿದೆ ಮೋಹದ ಜಾಲ
ಅರಿತು ನಡೆದರೆ ಇಹುದು ಒಳ್ಳೆಯ ಕಾಲ..!!-
🌧️ಅಯ್ಯೋ ಮಳೆಯೇ 🌧️
ಬಹಳ ವರುಷಗಳೆ ಸಂದಿತು
ಬರದೆ ಇಂತಹ ಮಳೆ
ತಿಂಗಳು ಪೂರ್ತಿ ಸುರಿದು
ಉರುಳಿಸಿತು ಅಲ್ಲಲ್ಲಿ ಧರೆ..!
ಪಟ್ಟಿಗೆ ಸಿಗದಾಯ್ತು
ತೊಂದರೆ ತೊಡಕುಗಳು
ಸಾಲು ಸಾಲಾಗಿ ಬಿದ್ದವು
ಕರೆಂಟಿನ ಕಂಬಗಳು..!
ಅತಿ ವಿರಳ ಈ ಸೃಷ್ಟಿಯಲಿ
ಅತಿವೃಷ್ಟಿ ಅನಾಹುತ
ಎಲ್ಲೆಲ್ಲೂ ಹರಡಿತು ಡೇಂಗ್ಯುವೆಂಬ
ಮಹಾಮಾರಿಯ ಕಡಿತ..!
ಊರಿಗೆ ಊರೆ ಮುಳುಗಿ
ಗುರುತು ಸಿಗದಾಯ್ತು
ಅವರಿವರ ಕಳಕೊಂಡ
ನೋವಿಗೆ ಕಣ್ಣೀರು ಜೊತೆಯಾಯ್ತು
ಕೊಳು ಬಂತು ಅಡಿಕೆಗೆ ಹೆಚ್ಚಿದ ಮಳೆಗೆ
ಉಳಿಗಾಲವಿಹುದೇ ಇಂದಿನಾ ಸ್ಥಿತಿಗೆ
ಅನಾಥವಾದವು ಹಲವು ಬೆಳೆಗಳು
ಬೆಲೆ ಇಲ್ಲದೆಯೆ ಬೆವರಿನ ಹನಿಗೆ..!
ಮೋಡಗಳ ಬಿತ್ತಿ ಮಳೆಯಾಗಿಸಬೇಡ
ನಿಲ್ಲಿಸು ಗಂಗೆಯೇ ಈ ಮುನಿಸು
ಮಾಡಿದ ತಪ್ಪುಗಳ ನೀ ಮನ್ನಿಸುತಾ
ಇಳೆಯಲಿ ಸೂರ್ಯನನು ನೀ ಬೆಳಗಿಸು..!-
🙏ವಂದಿಪೆ ಗಣಪ🙏
ಏಕದಂತನೆ ಸೊಂಡಿಲ ಗಣಪನೆ
ಆನೆಯ ಮುಖವನು ಧರಿಸಿಹನೆ
ಪ್ರಥಮ ಪೂಜಿತ ವಿದ್ಯಾದಾಯಕ
ಭಜಿಸುವೆ ನಿನ್ನನು ವಿನಾಯಕ..!!
ಮಣ್ಣಿನ ಮೂರುತಿ ವಿಧ ವಿಧ ಆಕೃತಿ
ಬೀದಿ ಬೀದಿಯಲಿ ನಿನಗೆ ಆರತಿ
ಪ್ರಾರ್ಥಿಸಿ ನಿನ್ನನು ಪೂಜೆಯ ಗೈವರು
ಹಾಡಿ ಹೊಗಳುತ್ತಾ ನಿನ್ನನೆ ನೆನೆವರು..!!
ಚೌತಿಯ ದಿನದಿ ಪ್ರತಿ ಮನೆಯಲ್ಲಿ
ಇರುವುದು ನಿನ್ನ ಸಾನಿಧ್ಯ
ಕೊಡುವರು ನಿನಗೆ ನೈವೇದ್ಯ
ವಿಧ ವಿಧ ವಾಧ್ಯ ವಿಧ ವಿಧ ಖಾದ್ಯ..!!
ಪಸರಿಸು ಎಲ್ಲೆಡೆ ಭಕ್ತಿಯ ಸಾರ
ನಂಬಿದವರಿಗೆ ವಿಜಯದ ಹಾರ
ಸಂಭ್ರಮ ತುಂಬುವ ಸುಂದರ ಘಳಿಗೆ
ಸಿಗುವುದು ವರುಷಕ್ಕೊಮ್ಮೆ ಬಾಳಿಗೆ..!!
ಕರವನು ಜೋಡಿಸಿ ದೈನ್ಯದಿ ಬೇಡುವೆ
ಭಕ್ತವಂದ್ಯನೆ ಗಜಮುಖನೆ
ಅಗ್ರಗಣ್ಯನೆ ಆದಿ ವಂದ್ಯನೆ
ಕರುಣಿಸು ವರಗಳ ಹೇ ಪ್ರಭುವೆ..!!-
ನಡೆ ನುಡಿಯಲ್ಲಿ ಎಡವದೆ
ಮನದ ಹೊಯ್ದಾಟಕ್ಕೆ ಕರಗದೆ
ಇಬ್ಬಗೆಯ ಬದುಕಿನಲಿ
ಸವೆಸಿದಳು ಬಾಳ ದಾರಿ
ಅವಳೆನ್ನ ಹೃದಯದರಸಿ
ಈ ಮನದ ರೂಪಸಿ-
♥️ಗೆಳತಿಯ ಕನಸು♥️
ತಿರುಕನಂತೆ ಕಂಡೆ ನಾನು ಒಂದು ಕನಸು
ಹದಿಹರೆಯಕೆ ತಿರುಗಿತು ಮತ್ತೆ ನನ್ನ ವಯಸು
ನೀಳ ಜಡೆ, ಸೀರೆ ಸೆರಗು , ಮೈ ಮಾಟದ ಬೆಡಗು
ನನ್ನೆ ನಾನು ನೋಡಿದಾಗ , ನಾಯಕಿಯ ಸೊಗಸು
ಕೇಳುತ್ತಿತ್ತು ಗೆಳತಿ ಕೂಗು , ಆಲಿಸಿದೆ ಅವಳ ನಗು
ಮೆಟ್ಟಿಲೇರಿ ಓಡಿಬಿಟ್ಟೆ ಸೀರೆ ನೆರಿಗೆ ಕೈಯಲಿಟ್ಟು
ಅತ್ತ ಇತ್ತ ಸುತ್ತ ಮುತ್ತ ನನ್ನ ನೋಡಿ ನಕ್ಕಳು
ನೀನೆ ನನ್ನ ಮುದ್ದು ಗೆಳತಿ ಬಾರೆ ಹತ್ತಿರ ಎಂದಳು
ಸಂದಿಸಿತು ಎರಡು ಹೃದಯ ಬಾಚಿ ತಬ್ಬಿದ ತೊಳಲಿ
ಎದೆಯ ಬಡಿತ , ಉಸಿರವೇಗ ಹಿತವೆನಿಸಿತು ಆ ಸ್ಪರ್ಷದಲಿ♥️-
ಮಾಗೋಡಿನ ನಾಟಕದ ಸುತ್ತ ಒಂದು ಕಿರುನೋಟ
👇👇👇
ನನ್ನ ನೆನಪಿನಂಗಳದಲ್ಲಿ ಮಾಸದಿರಲೆಂದು ಬರೆದಿಟ್ಟಿರುವ ಬರಹವಿದು.
ಓದುವ ಪ್ರೀತಿ ಇದ್ದವರು ಓದಿ👍-
❣️ನನ್ನವಳು❣️
ನೀನಿಲ್ಲದೀ ಮೌನ
ನನ್ನೆಕೆ ಸೆಳೆಯುತಿದೆ
ಬಾಬಾರೆ ನಗುವ ಚೆಲ್ಲಿ
ಎತ್ತೆತ್ತ ನೋಡಿದರೂ
ನಿನ್ನತ್ತ ಈ ಚಿತ್ತ
ನೀನೇಕೆ ಮರೆತೆ ನಲ್ಲೆ
ಹುಡುಕುವ ಕಂಗಳಿಗೆ
ಹುಡುಗಾಟ ಹೆಚ್ಚಾಗಿ
ನಿನ್ನನ್ನೆ ನೆನೆಯುತಿದೆ ಇಲ್ಲಿ
ನಾ ಮರೆವೆ ನನ್ನನ್ನೆ
ನಿನ್ನೊಲವ ಬುತ್ತಿಯಲಿ
ಹೀಗೇಕೆ ಮೌನ ನೀನೀಗ ನನ್ನಲ್ಲಿ-
ಅದೇಕೋ ಗೊತ್ತಿಲ್ಲ ನಿನ್ನ ನೋಡಿದಾಗೆಲ್ಲ ಕಣ್ತುಂಬಿಕೊಳ್ಳುವೆ ನಾನು. ಸಜ್ಜಾಗಿ ನಿಂತು, ವೈಭವದಿಂದ ಮೆರೆವ ನಿನ್ನೊಳಗೆ ಅದೆಷ್ಟು ಜನರ ಕರತಾಡನ, ಹೆಜ್ಜೆಯ ಸಪ್ಪಳ,ಮಾತಿನ ಮಾಧುರ್ಯತೆ ಧ್ವನಿಪೆಟ್ಟಿಗೆಯಿಂದ ಹೊರಗೆ ಬರುವ ಆ ನಾದ ಕೇಳಲೊಂಥರ ಇಂಪು. ಅವನ್ನೆಲ್ಲಾ ತುಂಬಿಕೊಂಡು ನಿಲ್ಲುವ ನಿನ್ನೊಳಗೆ ನಾನು ಒಬ್ಬಳಾಗಬೇಕು ಎನ್ನುವ ಆಸೆ. ಅದೆಷ್ಟೋ ಬಾರಿ ಕಲ್ಪನೆಯ ಹೊತ್ತು ನಿನ್ನ ಮೇಲೇರಿ ಧ್ವನಿವರ್ಧಕದೆದುರು ನಿಂತು ನನ್ನ ಹಾವಾ ಭಾವವನ್ನು ಪ್ರದರ್ಶೀಸಿದ್ದೇನೆ, ಖುಷಿಯನ್ನು ಪಟ್ಟಿದ್ದೇನೆ. ಆದರೆ ಅದು ನನಸಾಗದ ಕನಸಾಗಿದೆ ಎನ್ನುವುದು ವಿಷಾದನೀಯ. ಆ ಯೋಗ ಯೋಗ್ಯತೆ ನನ್ನೊಳಗೆ ಇಲ್ಲದೆ ಹೋಯಿತೇ? ಈ ದೇಹವೆಂಬ ಮಾಂಸದ ಮುದ್ದೆಗೆ ಭಯವೆಂಬ ಬಾಣವ ಕೊಟ್ಟು, ಮರೆವು ಎಂಬ ಬಿಲ್ಲನು ಜೊತೆಗಿಟ್ಟು ಗುರಿಮುಟ್ಟದೆ ಮರೆಯಾಗುವಂತೆ ಸೃಷ್ಟಿಯಲಿ ಅಸ್ಪಷ್ಟವಾಗಿಸಿ ಬಿಟ್ಟೆ.. ಆದರೆ ಕಲ್ಪನೆಯಲ್ಲಿ ಸದಾ ನೀ ನನ್ನ ಜೊತೆಗಿರುವೆ ನನ್ನ ಪ್ರೀತಿಯ ವೇದಿಕೆ.
-