ಬದುಕಿನ ಮದರಂಗಿ ಕೆಂಪೇರಿದಾಗ
ತಂಪಾಗಿ ಕೂರುವ ಹೊತ್ತಿಗೆ ಕಾಲನಾಡಿಸುವ
ಆಟ ಬೇರೆಯೇ ಇರುವುದು,ಲೆಕ್ಕಾಚಾರವ
ಹಾಕಿ ಚೊಕ್ಕವಾಗಿ ಕೂರದಿರು ಮನುಜ
ವಿಧಿಯಾಡಿಸುವ ದೊಂಬರಾಟದ
ಬೊಂಬೆಗಳು ನಾವೆಲ್ಲ-
ವಿವಾದಗಳ ನಡುವೆ
ವಿಧಿ ಬಂದು ಕೇಳಿತು
ಇರುವೆಯಾ, ಹೊರಡುವೆಯಾ
ಆಸರೆಯಾದ ಸೃಷ್ಟಿಗೆ
ಮೋಸಮಾಡಲಾರೆ ನಾ
ಇರುವೆ ನೀ ಹೊರಡು ಎಂದೆ-
ವಿಧಿಯ ನಾಟಕದಲ್ಲಿ
ಸೂತ್ರಧಾರನ ಸೂತ್ರಕ್ಕೆ
ತಕ್ಕಂತೆ ನಟಿಸುವ
ನಾವೆಲ್ಲ ಪಾತ್ರಧಾರಿಗಳಷ್ಟೇ...-
ಜೀವನ ಎನ್ನುವ ರಂಗಸ್ಥಳದಲ್ಲಿ ಮೈಮರೆತು ಜೀವಿಸುವ ಪಾತ್ರಗಳು ಎಷ್ಟೋ,ಅದೆಷ್ಟೋ....
ಆ ಪಾತ್ರದ ಹಿಂದೆ ಭಾವನೆಗಳು ಎಷ್ಟೋ,
ಆ ಭಾವನೆ ಹಿಂದೆ ಕಾರಣಗಳು ಎಷ್ಟೋ,
ಆ ಕಾರಣಗಳ ನಡೆಸುವ ಪರಿಸ್ಥಿತಿಗಳು ಎಷ್ಟೋ,
ಆ ಪರಿಸ್ಥಿತಿಗಳ ಬದಲಾವಣೆಗೆ ವಿಧಿಬರಹ ಎಷ್ಟೋ...
ಆ ವಿಧಿಬರಹದಿಂದ ಅರ್ಥಾಂತರಂಗ ಕಾಣದೆ ಮಾಯವಾದ ಪಾತ್ರಗಳು ಎಷ್ಟೋ,ಅದೆಷ್ಟೋ....-
ಕೊಟ್ಟ ಪಾತ್ರವನ್ನು ಸರಿಯಾಗಿ
ಆಲೋಚಿಸಿ ನಿರ್ವಹಿಸದೇ
ವಿಧಿಯ ಹಣೆಬರಹವನ್ನು
ದೂಷಿಸಿದರೆ ಫಲವೇನು.. !!-
ವಿಧಿ ಬರಹ
ವಿಧಿಯ ಆಟವನ್ನು ಬಲ್ಲವರಾರು
ವಿಧಿಬರೆದಂತೆ ನಡೆಯ ಬೇಕೆಲ್ಲರು
ಅವನಾಟದ ಕೈಗೊಂಬೆಗಳು ನಾವೇಲ್ಲರೂ...
ವಿಧಿಯಲ್ಲಿ ಬರೆದಿರುವ ಬ್ರಹ್ಮನಿಚ್ಛೆಯಂತೆ
ಅಳಿಸಲು ಸಾಧ್ಯವೇ ನಮ್ಮಿಚ್ಛೆಯಂತೆ
ಅನುಭವಿಸ ಬೇಕಿದೆ ಎಲ್ಲ ಅವನಿಚ್ಛೆಯಂತೆ ..
ಒಳ್ಳೆಯದೋ ಕೆಟ್ಟದ್ದೋ ಅರಿಯೆವು
ಒಳಿತನು ಬಯಸಿ ಸಾಗಬೇಕು ನಾವು
ದೇವರಿಚ್ಛೆಯಂತೆ ನಡೆಯುವುದು ಎಲ್ಲವೂ...
ವಿಧಿ ಬರಹಕ್ಕೆ ಹೊಣೆ ಯಾರು
ದೂಷಿಸುವುದು ಯಾರಿಗೆ ಯಾರು
ಮಂಡಿಯೂರಲೆ ಬೇಕಲ್ಲ ವಿಧಿಯೆದುರು...
✍🏻_ತೇಜಸ್ವಿನಿ ಕೇಸರಿ-
ಕಾಲಚಕ್ರವು ತಿರುಗುತಿಹುದು
ನಿನ್ನ ಉದಯಾಸ್ತದಲಿ
ಉರುಳುತಿಹುದು ದಿನಗಳು
ವಿಧಿಯ ಹಸ್ತದಲ್ಲಿ....
-
ಎಲ್ಲವೂ ಇದೆ ಎಂದು ಗರ್ವ ಪಡಬಾರದು
ಮೇಲಿರುವವನು ಕೊಟ್ಟೂ ನೋಡುತ್ತಾನೆ
ಕಿತ್ತುಕೊಂಡು ನೋಡುತ್ತಾನೆ
"ವಿಧಿಯ ಮುಂದೆ ಎಲ್ಲವುಾ ಕ್ಷಣಿಕ"-