☕️☕️☕️ಸವಿನೆನಪಿನ ಸಿಹಿಸಂಜೆ☕️☕️☕️
☕️☕️☕️☕️☕️☕️☕️☕️☕️☕️☕️☕️☕️☕️☕️
☕️ಮುಸ್ಸಂಜೆಯಂಗಳದಿ ಹೊಂಬಣ್ಣದೋಕುಳಿ ಆಡುತಾ☕️
☕️ಆತುರದಿ ಧರೆಯ ತೊರೆಯಲು ಸಾಜ್ಜಾದ ಅರುಣ,ಮಿತವಾಗಿ☕️
☕️ಬೀಸೋ ಹಿತವಾದ ತಂಗಾಳಿ,ತಂಗಾಳಿಯ ನರ್ತನಕೆ ಶಾಂತಿ ಮುರಿದು☕️
☕️ಅಬ್ಬರಿಸಿ ಬೊಬ್ಬಿರಿದು ಕಡಲ ತೀರಕಪ್ಪಳಿಸೋ ಅಲೆಗಳು ಹಳೇ☕️
☕️ಅಧ್ಯಾಯವ ಮುಗಿಸಿ ಹೊಸತನದ ನಿರೀಕ್ಷೆಯಲಿ☕️
☕️ಈ ದಿನದ ಕ್ಷಣಗಳ ನಾಳೆಯ ಪುಟಗಳಲಿ☕️
☕️ಅಚ್ಚಳಿಯದ ನೆನಪುಗಳಾಗಿ☕️
☕️ಬರೆದಿಡುವ ಸಲುವಾಗಿ☕️
☕️ಸಜ್ಜಾಗಿ ನಿಂತಿದೆ ☕️
☕️☕️☕️☕️☕️☕️☕️-
ಮತ್ತೊಬ್ಬರಿಂದ ಮರ್ಯಾದೆಯನ್ನು ಎದುರು
ನೋಡೋವ ಮೊದಲು ನೀನು ಮರ್ಯಾದೆಯ
ದಾರಿಯಲ್ಲಿ ನಡೆಯುವುದನ್ನೂ ಕಲಿತಿರಬೇಕು,ಆಗ ನೀ ಎದುರು ನೋಡದಿದ್ದರೂ ನಿನಗೆ ಸಲ್ಲುವ ಗೌರವ
ಮರ್ಯಾದೆ ತಾನಾಗೇ ಸಲ್ಲುವುದು ಬಿಡು-
ನೈಜ ಘಟನೆ ಆಧಾರಿತ ಬರಹ😬😬
***********************
ಅನಾಚಾರವನ್ನು ಅನಾವರಣಗೊಳಿಸು ಅಲ್ಲಿ ನೀನೇ ಅನಾಚಾರಿಯಾಗುವೆ,
ಅದೇ ಅನಾಚಾರವನ್ನು ಅಪ್ಪಿಕೋ ಅಲ್ಲಿ ನೀ ಎಲ್ಲರಿಗೂ ಒಪ್ಪಾಗುವೆ, ಇಲ್ಲಿ
ಕೆಟ್ಟವರ ಗುಂಪಿನ ಮಂಪರೊಳು ಮಿಂದವರೇ ಮರ್ಯಾದಸ್ಥರು,ನಿಜವಾದ
ಒಳ್ಳೆಯವರು ಅವರ ದೃಷ್ಟಿಯಲಿ ಮೂರು ಬಿಟ್ಟವರು, ಕಾರಣ ಆ ಕೊಚ್ಚೆಗೆ ಕಲ್ಲೆಸೆದು ನೀ ದೂರ ಉಳಿದದ್ದು,ಕೊಚ್ಚೆಯಲೆ ಬಿದ್ದು ಹೊರಳಾಡಿದ್ದರೆ ನೀ
ಅವರ ಪಾಲಿಗೆ ಮರ್ಯಾದಾಸ್ಥೆ (ಸ್ಥ) ಆಗಿರಬಹುದಿತ್ತೇನೋ ಬಹುಷಃ-
ಮದುವೆ
*********
ಚಂದಿರನ ಮೊಗದವ ಉಂಗುರವ ತೊಡಿಸಿ
ಕರಿಮಣಿಯ ಸಿರಿ ತಂದು
ಕುಂಕುಮವ ಕೈಗೆತ್ತಿ
ಹೆಣ್ ಹಣೆಯ ಸಿಂಗರಿಸಿ
ಸಪ್ತಪದಿ ತುಳಿದು
ಸಪ್ತ ವಚನಗಳ ಪಠಿಸುತ್ತ
ಅಗ್ನಿಸಾಕ್ಷಿಯಾಗಿ ಕೈ ಹಿಡಿದು
ಗಟ್ಟಿಮೇಳದ ನಾದದೊಳು
ಹಿರಿಯರ ಹಾರೈಕೆಯೊಳು
ಮನಸು ಮನಸುಗಳು ಮಿಲನವಾಗಿ
ಅರಿತು ಬೆರೆತು
ಬದುಕಿನ ಕಟ್ಟ ಕಡೆಯವರೆಗಿನ
ಬಿಟ್ಟು ಬಿಡದ ಪಯಣವದು
ಜನ್ಮಾಂತರದ ನಂಟದು
ದೇವ ಬರೆದ ಬ್ರಹ್ಮಗಂಟದು-
ಜೀವನದಲ್ಲಿ ಕಷ್ಟ ಕಲಿಸಿದ ಪಾಠವನ್ನು ಸುಖ ಎಂದೂ ಕಲಿಸಿಲ್ಲ, ಕೆಟ್ಟ ಸಮಯವೇ ನನ್ನ ದೊಡ್ಡ ಗುರು
-
ಮನುಷ್ಯನ ಮನವೆಂಬ ಕೊಚ್ಚೆ
********************
ಕೊಚ್ಚೆಗೆ ಕಲ್ಲೇಸೆಯಬೇಡಿ ಎಂಬ ಹಳೇ ಗಾದೆಯ ಎಲ್ಲರೂ ಅನ್ನೋರು,
ಇಲ್ಲಿ ಕೊಚ್ಚೆಗೆ ಕಲ್ಲೇಸೆಯೋ ಮೂರ್ಖರು ಯಾರೂ ಇಲ್ಲ ಬಿಡಿ, ಆದ್ರೆ ಒಂದ್
ನೆನಪಿರ್ಲಿ ಆ ಕೊಚ್ಚೆನಾ ಎಷ್ಟ್ ಹೊತ್ತು ನಾವು ಸ್ವಚ್ಛ ಮಾಡದೆ ಹಾಗೇ ಇಡ್ತೀವಿ ಅದು ಅಷ್ಟು ಜಾಸ್ತಿ ನಾರುತ್ತೆ, ನಾವ್ ಇರೋ ಪರಿಸರದ ಪರಿಶುದ್ಧತೆಯನ್ನು ಹಾಳು ಮಾಡುತ್ತೆ, ಹಾಗೇ ಎಲ್ಲರ ಮನವನ್ನೂ ಅನಾರೋಗ್ಯದ ಗುಂಡಿಗೆ ತಳ್ಳುತ್ತೆ ನೆನಪಿರಲಿ,ನೀವೂ ಶುದ್ಧವಾಗಿರಿ ನೀವಿರೋ ಪರಿಸರವನ್ನು ಸ್ವಚ್ಛವಾಗಿರಿಸಿ,,ಇಲ್ಲದಿದ್ದರೆ ಮುಂದಕ್ಕೆ ನಿಮಗೆ ತೊಂದರೆ
-
ಎಲ್ಲರಂತೆ ನಾವಿದ್ದರೆ ನಾವಿರೋದಕ್ಕೆ ಅರ್ಥವೇನಿದೆ ಇಲ್ಲಿ, ನಮ್ಮಂತೆ ನಾವಿರಬೇಕು ಆಗನ್ನುವರು ನೋಡಿ ಎಲ್ಲರಂತಲ್ಲ ಅವಳು ಎಂದು,ಅದು ಬೈದುಕೊಂಡೇ ಅನ್ನಲಿ, ಹೊಗಳಿಕೊಂಡೆ ಅನ್ಲಿ ಸ್ವಾಮಿ ನಮಗೇನು, ಬೈಕೊಳ್ಳೋರು ನಮ್ಮನ್ ಕಂಡ್ರೆ ಉರ್ಕೋಳ್ಳೋರೆ ಆಗಿರ್ತಾರೆ, ಹೊಗಳೋರು ನಮ್ಮತನವ ಮೆಚ್ಚಿಕೊಂಡು ಅಂದಿರ್ತಾರೆ ಅಷ್ಟೇ
-
ಇಲ್ಲಿ ಪಾಪವೇ ಮಾಡದ ಪುಣ್ಯಾತ್ಮರು ಯಾರೂ ಇಲ್ಲ
ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಪಾಪಿಗಳೇ,
ಅವರವರ ದೃಷ್ಟಿಕೋನದಲ್ಲಿ ಮಾತ್ರ
ಅವರವರು ಒಳ್ಳೆಯವರು ಅಷ್ಟೇ ,-