ಅಮ್ಮ ಪ್ರಪಂಚಕ್ಕೆ ನಿನ್ನನ್ನು ಪರಿಚಯಿಸುತ್ತಾರೆ
ಅಪ್ಪ ಪ್ರಪಂಚವನ್ನು ನಿನಗೆ ಪರಿಚಯಿಸುತ್ತಾರೆ-
ಎಡಬಿಡದೆ ಕಾಡುತ್ತಿದೆ ನೋವು
ಕರೆದುಕೊಂಡು ಹೋಗೆ ಸಾವು
ಖುಷಿಯಿಂದ ಹೇಗಿರಲಿ
ನೀನಿರದ ನನ್ನ ಮನದಲಿ
ಕಾರಣವಿಲ್ಲದ ದೂರ
ನಾನಾಗಲಾರೆ ನಿಷ್ಠುರ
ಹೃದಯವು ಬಯಸಿದೆ ಆರೈಕೆ
ನಿನ್ನ ಮಾತೇ ಸಾಕೆಂಬ ಬಯಕೆ-
ಬರಹಗಾರನಿಗೆ ಅಕ್ಷರದ ಮೌಲ್ಯ
ದುಡಿದವನಿಗೆ ದುಡ್ಡಿನ ಮೌಲ್ಯ
ಕಷ್ಟಪಡುವವನಿಗೆ ಬದುಕಿನ ಮೌಲ್ಯ
ರೈತನಿಗೆ ಬೆಳೆಯ ಮೌಲ್ಯ
ಜವಾಬ್ದಾರಿ ಇದ್ದವನಿಗೆ ಬಂಧನ ಮೌಲ್ಯ
ಭವಿಷ್ಯದಾಸೆ ಇದ್ದವನಿಗೆ ವಿದ್ಯೆಯ ಮೌಲ್ಯ
ಗುರಿಯಿದ್ದವನಿಗೆ ಜೀವನದ ಮೌಲ್ಯ ತಿಳಿದಿರುತ್ತೆ.-
ಮನುಷ್ಯನನ್ನು ಹೊರತುಪಡಿಸಿ ಉಳಿದೆಲ್ಲಾ ಜೀವರಾಶಿಗಳು Happyಯಾಗಿ ಇರುತ್ವೆ.
ಕಾರಣ, ನಮ್ಗೆ ಜೀವನದಲ್ಲಿ Unhappyಯಾಗಿ ಇರೋದ್ಹೇಗಂತ ಗೊತ್ತು.
ನಮ್ಗೆ ಸಿಗದೇ ಇರೋದೆಲ್ಲಾ ನೆನಪಿಸಿಕೊಳ್ಳುತ್ತಾ ದುಃಖ ಪಡುವ ಬದಲು
ಸಿಕ್ಕಿದ್ದನ್ನು ಕಂಡು ಸುಖ ಸಂತೋಷ ಪಡಿ.-
ಪ್ರಪಂಚ ನಿನ್ನನು ದೂರವಿಟ್ಟರೆ ನೀನು ಏಕಾಂಗಿ.
ನೀನು ಪ್ರಪಂಚವನ್ನು ಬಿಟ್ಟು ದೂರವಿದ್ದರೆ ಏಕಾಂತ.-
ಗತಿಸಿದ ಕಾಲ
ಕಳೆದುಕೊಂಡ ನಂಬಿಕೆ
ಕಳಂಕಗೊಂಡ ಗೌರವ.
ಇವುಗಳನ್ನು ಪ್ರಪಂಚದಲ್ಲಿ ಯಾವ ಸಿರಿಸಂಪತ್ತು ನೀಡಲ್ಲ.-
ಎಂದಿಗೂ ಒಪ್ಪಿಕೊಳ್ಳದಿರು ಸೋಲನು
ಎಂದಿಗೂ ಬಿಡದಿರು ತಾಳ್ಮೆಯನು.
ನೋವು ಇರದ ನಿಮಿಷವೆಲ್ಲಿ
ಜನನವಾದ್ರು ಮರಣವಾದ್ರು ಜೀವನ್ದ ಹೆಜ್ಜೆ ಹೆಜ್ಜೆಗೂ.-