ಒಬ್ಬ ವ್ಯಕ್ತಿಯ ಮೌಲ್ಯ ನಿರ್ಧರಿತವಾಗುವುದು ಗಳಿಸಿದ ಮನೆ, ಆಸ್ತಿ, ಹಣ, ಅಂತಸ್ತು, ಐಶ್ವರ್ಯದಿಂದಲ್ಲ, ಹೊರತಾಗಿ ಆಡುವ ಒಳ್ಳೆಯ ಮಾತು, ನಡತೆ ಮತ್ತು ವ್ಯಕ್ತಿತ್ವಗಳಿಂದ!!!
- ರಂಜಿತ.ಸಿ-
ಸಾಗಲಿ ನಿಧಾನ
ಕಲ್ಲು ಮುಳ್ಳುಗಳ ತಾಣ
ಅಡೆತಡೆಗಳ ನಿಲ್ದಾಣ
ನನ್ನ ಜೀವಾಳವೇ ಗಾಯನ
ನಡೆಯಲಿ ವಿಜಯದ... read more
ಜೀವನದಲ್ಲಿ ನಾವು ತೆಗೆದುಕೊಳ್ಳುವ ಕೆಲವು ಅಸಂಬದ್ಧ ತಪ್ಪು ನಿರ್ಧಾರಗಳು ಬದುಕಿಗೆ ಸರಿಯಾದ ಪಾಠವನ್ನೇ ಕಲಿಸುತ್ತವೆ, ಎಲ್ಲವನ್ನೂ ಸಮಾನ ಮನಸ್ಥಿತಿಯಿಂದ ಸ್ವೀಕರಿಸಿ ಅರಿತು ಕಲಿತು ಮುನ್ನಡೆಯುತ್ತಿರಬೇಕಷ್ಟೇ!!!
- ರಂಜಿತ.ಸಿ
-
ನೀ ನೀನಾನಿಗು
ನಿನ್ನ ಸ್ವಾಭಿಮಾನ ಆತ್ಮಗೌರವಕ್ಕೆ
ಧಕ್ಕೆ ತರುವ ವ್ಯಕ್ತಿ ಅಥವಾ ವಿಷಯಕ್ಕಾಗಲೀ
ಸುಗಮ ದಾರಿಮಾಡಿಕೊಡದೇ
ನೀನು ನೀನಾಗಿರು!!
ನೀ ನಡೆವ ಹಾದಿಯಲ್ಲಿ
ಸಾವಿರಾರು ತೊಡಕಿನ ಮುಳ್ಳುಗಳಿದ್ದರೂ
ಧೃತಿಗೆಡದೆ ಮುನ್ನಡೆಯುತ್ತಾ
ನೀನು ನೀನಾಗಿರು!!
ಬಣ್ಣ ಬಣ್ಣದ ಬದುಕಿನಲ್ಲಿ
ಬೆಣ್ಣೆಯಂತೆ ಮಾತಾಡುವವರ ಮುಂದೆ
ಒಮ್ಮೆ ನಸುನಕ್ಕು ಮೌನಿಯಾಗಿ
ನೀನು ನೀನಾಗಿರು!!
ಮಿಥ್ಯದ ನಸುಕಿನ ಸೆರಗಲ್ಲಿ
ಸಹಸ್ರ ಸತ್ಯ ಸೊರಗುತ್ತಿದ್ದರೂ
ಸಮಯವೇ ಎಲ್ಲದಕ್ಕೂ ಉತ್ತರಿಸುವುದು
ನೀನು ನೀನಾಗಿರು!!
ಬಾಳ ಹಾದೀಲಿ ನೂರೆಂಟು
ಉದ್ವಿಗ್ನ ಸ್ಥಿತಿಗಳ್ಬಂದೊದಗಿದರೂ
ನಿನ್ನ ಸ್ವಂತಿಕೆಯೇ ಬದುಕಿನ ಜೀವಾಳ
ನೀನು ನೀನಾಗಿರು!!!
-ರಂಜಿತ.ಸಿ
-
ನಿನ್ನ ಪ್ರಗತಿಪರ ಸಕಾರಾತ್ಮಕ ಚಿಂತನೆಗಳೇ ನಿನ್ನ ಅಭ್ಯುದಯಕ್ಕೆ ನಾಂದಿ.
- ರಂಜಿತ.ಸಿ-
ನೋವಿನಲ್ಲಿ ಬಿಗಿದ ಗಂಟಲಿಗೆ ಗೊತ್ತು
ಮೌನದಲ್ಲಿ ಅಡಗಿಸಿಟ್ಟ ನೂರೆಂಟು ಮಾತುಗಳು
ನಗುವಿನಲ್ಲಿ ಮರೆಮಾಚಿದ ಮೊಗಕ್ಕೆ ಗೊತ್ತು
ಯಾರಿಗೂ ಹೇಳಲಾರದ ಯಾತನೆಯ ಗುಟ್ಟು
ಬರಿದಾದ ಭಾವನೆಗಳ ಬುಗ್ಗೆಯಲಿ ಜಿನುಗಿದ
ಕಣ್ಹನಿಗಳ ದುರಂತ ಕಥೆಯ ಚಿಲುಮೆಯಂತೆ
ನೆಪವಾದ ನೆನಪುಗಳಿಗೂ ಬಾರದ ಮರೆವು
ಬದುಕಿನಲ್ಲಿ ಇಡುವ ಪ್ರತಿ ಹೆಜ್ಜೆಗೂ ರೋಚಕ ತಿರುವು!!!
- ರಂಜಿತ.ಸಿ
-
ಶುಭೋದಯ
ಸ್ವಾರ್ಥಿಗಳ ತುಟ್ಟಿಯಾದ ಕಾಳಸಂತೆಯಲ್ಲಿ
ಸರಿಯಾದ ಸಮಯಕ್ಕೆ ಪರಿಚಯವಾಗುವುದು
ಸಲೀಸಾಗಿ ನಂಬಿದ ನಕಲಿ ಮುಖವಾಡಗಳ
ಅಸಲಿ ಮುಖ ತಾಳ್ಮೆಯಿಂದಿರು ಎಂದಿಗೂ
ಅಸಲಿಯ ಮೌಲ್ಯ ಅಸಲಿಗೆ ನಕಲಿಯ ಮೌಲ್ಯ ನಕಲಿಗೆ..
-ರಂಜಿತ.ಸಿ
-
ಜೀವನದಲ್ಲಿ ಎದುರಾಗುವ ಕಷ್ಟ-ಕಾರ್ಪಣ್ಯಗಳೆಲ್ಲಾ ಒಂದು ರೀತಿಯ ಪೂರ್ವಭಾವಿ ಪರೀಕ್ಷೆಗಳಿದ್ದಂತೆ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಅವನ್ನು ದಾಟಿಯೇ ಅಂತಿಮ ಪರೀಕ್ಷೆಗೆ ಸಿದ್ಧರಾಗಬೇಕು!!!
- ರಂಜಿತ.ಸಿ-
ನಿದ್ರೆಯಿರದ ರಾತ್ರಿಗಳು
ಲಗಾಮಿಲ್ಲದ ಆಲೋಚನೆಗಳು
ಮರೆಯಲಾಗದ ನೆನಪುಗಳು
ಚುಚ್ಚಿ ಕೊಲ್ಲುವಷ್ಟು ವೇದನೆಗಳು
ಹೇಳತೀರದ ಯಾತನೆಗಳು
ಬಾಡಿ ಹೋದ ಭಾವನೆಗಳು
ಎಲ್ಲದರ ನಡುವೆ ಮಾತೆಲ್ಲವೂ ಮೌನ
ಮನಸೊಂದು ಸ್ಮಶಾನ!!!
- ರಂಜಿತ.ಸಿ-
ನವ ಸಂವತ್ಸರವು
ನವ ಚೇತನದೊಂದಿಗೆ
ನವ ಆಲೋಚನೆಗಳುದಯದಿ
ನವ್ಯ ಅಧ್ಯಾಯವ ಬರೆಯುತ
ನವನವೀನ ಬದುಕು ಹಸನಾಗಿ ಸಾಗಲಿ
ಸರ್ವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 💐
- ರಂಜಿತ.ಸಿ.ಕನ್ನಡತಿ
-
ನಿನ್ನ ಅಸ್ತಿತ್ವದ ಬಗ್ಗೆ ನಿನಗೆ ಸ್ಪಷ್ಟ ಚಿತ್ರಣವಿರುವಾಗ ಅವರಿವರಿಗೆ ಅದನ್ನು ನಿರೂಪಿಸುವ ಅವಶ್ಯಕತೆ ನಿನಗೇನಿಲ್ಲವೆಂಬುದರ ಅರಿವಿರಲಿ ಸಾಕು.
- ರಂಜಿತ.ಸಿ-