ಎಲ್ಲರೂ ಜೀವನ ನಡೆಸುತ್ತಾರೆ,
ಕೆಲವರಷ್ಟೆ ಅನುಭವಿಸುತ್ತಾರೆ!-
ಗುರಿ ಸೇರುವ ದಾರಿ ದೂರವಿದ್ದರೂ, ಹತ್ತಿರವಿದ್ದರೂ, ತೊಡಕುಗಳು ಇದ್ದದ್ದೇ. ಆದರೆ, ಸಾಗುವ ದಾರಿ ಹೇಗಿರಬೇಕೆಂಬ ಆಯ್ಕೆ ನಮ್ಮದಾಗಿರಬೇಕು!
-
ಗೆಳೆತನ ಎಂಬುದು ಆಯ್ಕೆಯಲ್ಲ,
ಅದೊಂದು ನಮ್ಮ ಜೊತೆಗಿರುವ ಶಕ್ತಿ!
ಅದು ಒಳ್ಳೆಯದೊ ಕೆಟ್ಟದ್ದೊ ಎಂಬುದು
ಅವರವರ ವೈಯಕ್ತಿಕ!-
ಅದೆಷ್ಟು ನಿರೀಕ್ಷೆಗಳು ಸುಳ್ಳಾದವೊ
ಅದೆಷ್ಟು ಕಾತುರತೆಗಳು ಕರಗಿಹೋದವೊ
ಅದೆಷ್ಟು ಆಸೆಗಳು ಅಸು ನೀಗಿದವೊ
ಅದೆಷ್ಟು ಮಾತುಗಳು ಮೌನವಾದವೊ
ಅದೆಷ್ಟು ನಗು ಮೊಗವು ಮರೆಯಾದವೊ
ಅದೆಷ್ಟು ಮನಸುಗಳು ಛಿದ್ರಗೊಂಡವೊ
ಅದೆಷ್ಟು ಪ್ರೀತಿ, ಚಿಗುರುವ ಮುನ್ನ ಚಿವುಟಿದವೊ
ಅದೆಷ್ಟು ಬದುಕು ಕತ್ತಲಾದವೊ
ನಶ್ವರ ಬದುಕೇ ಹಾಗೆ
ಅನಿರೀಕ್ಷಿತ ಸುಖ ದುಃಖಗಳ ಗುಚ್ಛ-
ಮನದಲ್ಲಿ ರಣ ಕಹಳೆ
ಮೊಗದಲ್ಲಿ ನಗುವಿನ ಸೆಲೆ
ಬದುಕಿನ ಯುದ್ಧವೆ ಹಾಗೆ,
ತೀರದ ಬವಣೆಯ ಬಾಣದ ಬರೆ
ಮುಗಿಯದ ಕನಸಿನ ಗಾಯದ ಕಲೆ-
ಅಲಂಕಾರವಿಲ್ಲ, ಆಡಂಬರವಿಲ್ಲ,
ಅಹಂಕಾರವಿಲ್ಲದ ಅವಳ ಬದುಕು ಬಲು ಸರಳ.
ಹಣೆ ಬೊಟ್ಟು ಮರೆಯಲ್ಲ,
ತುಂಡುಡುಗೆ ಹಾಕಲ್ಲ,
ಪ್ರೀತಿಸಲಿಷ್ಟೆ ಸಾಕು, ಇನ್ನೇನು ಬೇಕಿಲ್ಲ ಬಹಳ!-
ನಿದ್ದೆ ಚೆನ್ನಾಗಿ ಬಂದರೆ ಎಲ್ಲವನ್ನೂ ಮರೆಸುತ್ತದೆ, ಬಾರದಿದ್ದರೆ ಎಲ್ಲವನ್ನೂ ನೆನಪಿಸುತ್ತದೆ!
#ನಿದ್ದೆಯೆಂಬ ಅದ್ಭುತ #-
ಹೊತ್ತು ಹೆತ್ತವಳು ಅವಳು,
ನೋವನಡಗಿಸಿ ನಗುತಲಿರುವವಳು ಅವಳು,
ತ್ಯಾಗದ ಬೇಗುದಿಯಲಿ ಮಿಂದು ಎದ್ದವಳು ಅವಳು, ನಡೆದಾಡುವ ದೇವರು ತಾಯಿ ಅವಳು!-