ಮುದ್ದು ಗೊಂಬೆ
ಕಾರಣವೆ ಹೇಳದೆ ಮೂಡಿದೆ ಮುಗುಳುನಗೆ
ಮುದ್ದು ಮಗಳ ಮನದಿ ನೆನೆಯಲು!
ಗೆದ್ದು ಬೀಗುವೆ ಅವಳ ಪುಟ್ಟ ಪುಟ್ಟ ಹೆಜ್ಜೆಗೆ
ಮತ್ತೆ ಮಗುವಾಗುವೆ ಅವಳ ಜೊತೆ ಆಡಲು!!
ಅವಳ ನಗುವಲ್ಲೇ ಮರೆಯುವೆ ಈ ಜಗವ
ಪ್ರತಿಬಾರಿ ಕಾರಣವ ಹುಡುಕುವೆ ನಿನ್ನ ನಗಿಸಲು!
ಮಹಾದೇವ ನೋಯಿಸದಿರು ಮಗಳ ಮನವ
ಖುಷಿಯಾಗಿರುವೆ ನನ್ನ ಗೊಂಬೆಯು ನಗಲು!!-
ನನ್ನದೆ ಪದಜೋಡಣೆಯ ಬರಹಗಳು
ಉತ್ತಮ ಸಲಹೆಗಳಿಗೆ ಅಭಿನಂದನೆಗಳು
💐ಪ್ರಸಂಗ💐
ಪದಗಳು ಮರೆತಂತಿದೆ ಲೇಖನಿಯ ಸಂಗ
ಕಾರಣವ ಹುಡುಕಲು ಸಮಯ ಬಿಡುತ್ತಿಲ್ಲ !
ನಿಲ್ಲದೆ ಬದಲಾಗುವ ಬದುಕಿನ ಪ್ರಸಂಗ
ಮನದ ಭಾವನೆಯ ಹಿಡಿಯಲು ಕೈಗೆ ಸಿಗುತ್ತಿಲ್ಲ !!-
ಪರರ ಮಾತಿನ ಚಿಂತೆ ಮಾಡಿ
ನಮ್ಮ ಖುಷಿಯ ಮಾರಬೇಕೇ ಗಾಲಿಬ್....
ನಿನ್ನಿಷ್ಟದಂತೆ ಮುನ್ನಡೆದರೆ
ಕೈಹಿಡಿದು ನಡೆಸಲು ಮಹದೇವನಿರುವನು....!!
-
🙏ಮೌನದ ಮಾತು 🙏
ಬರೆಯದ ಪದಗಳು ಮೌನದಿ ಕೊರಗಿರಲು
ಅರಿಯದೇ ಕಣ್ಣೀರು ಮೆರವಣಿಗೆ ಹೊರಟಿದೆ...
ನೆನಪಿನ ಅಂಗಳದಿ ರಸನಿಮಿಷ ಬಂದಿರಲು
ಭಾವನೆಗಳು ಮತ್ತೆ ರೆಕ್ಕೆ ಕಟ್ಟಿ ಹಾರಬಯಸಿದೆ..!!-
👍👍ಅವನು 👍👍
ಕನಸಿನ ಲೋಕದ ಮಾಲೀಕ ನಾನು
ಬರೆಯದ ಕಥೆಯ ನಾಯಕಿ ನೀನು..
ಹಣೆಬರಹ ಬರೆದ ಸೂತ್ರಧಾರಿ ಅವನು
ಪಾತ್ರಕ್ಕೆ ತಕ್ಕಂತೆ ಬಣ್ಣಹಚ್ಚಿ ನಟಿಸುವ ನಾವು....!!-
👍 ಮೌನ 👍
ಬರೆಯದೇ ಉಳಿದ ಕವಿತೆಯೊಂದು
ಮನದಲ್ಲಿನ ಭಾವನೆಗಳ ಕೆದಕುತ್ತಿದೆ..!
ಮಾತಲ್ಲಿ ಅಳಿಸಿದ ನೆನಪೊಂದು
ಮೌನದಿ ಕೊರಗಿ ಮರೆತಂತೆ ನಟಿಸುತ್ತಿದೆ..!!-
💐 ಜೀವನ 💐
ಬರೆದರೂ ಮುಗಿಯದ ಕವಿತೆಯೇ ಜೀವನ
ಸೋತರೂ ಮುನ್ನಡೆಯುವ ಛಲವೇ ಆತ್ಮವಿಶ್ವಾಸ !
ಮಂದಹಾಸ ಮೊಗದಲ್ಲಿರಲು ಬದುಕೇ ಪಾವನ
ಮುನ್ನಡೆಸಲು ದೇವನಿರುವನೆಂಬುದೇ ವಿಶ್ವಾಸ !!-
🤩 ಜೀವನ. 🤩
ಆಕಾಶವ ನೋಡಿ ನಡೆಯದಿರು ಚೆಲುವೆ
ನಾ ಭೂಮಿಯಲ್ಲಿ ನಿನಗಾಗಿ ಕಾದಿರುವೆ...!
ಸಾಗರದ ಅಲೆಗಳಿಗೆ ಹೆದರದಿರು ಒಲವೇ
ದಡಸೇರುವ ವರೆಗೂ ಜೊತೆಗೆ ನಾನಿರುವೆ..!!-
ಪುಗೆ
ಒಂಜಿಕೈಟ್ ಸಿಗರೇಟ್ ನನೊಂಜಿ ಕೈಟ್ ಕಾಫಿ
ಬಾಯಿಡ್ ಪುಗೆದಿಂಜಾದ್ ಕಾಫಿ ಪರ್ಪಿ ಜವನೆ..
ಅಪ್ಪೆ ಬೆಂದರ್‌ದಿಕ್ಕೆಲ್‌ಡ್ ಬಂಗೊಡ್ ಕಾಯ್ತಿನ
ನೀರ್ ಮೀನಾಗ ಪನ್ಪೆ ಪುಗೆಟ್ ಕೆರ್ಪರ ಎಂಚ..
( 15 ಅಚ್ಚರದ ಸಾಲ್)
- ಪ್ರೀತಮ್ ಶೆಟ್ಟಿ
ಆಕಾಶಭವನ , ಕುಡ್ಲ
-
ಅರ್ಥವಾಗದ ವಿಷಯ
ಪ್ರತಿಬಾರಿ ಅತ್ಯಾಚಾರವಾದಗ ಮೇಣದ ಬತ್ತಿಯ
ಉರಿಸೀದರೇನು ಪ್ರಯೋಜನ....
ಒಂದು ಬಾರಿ ಅತ್ಯಾಚಾರಿಯ ಸುಟ್ಟು ನೋಡೋಣವೆ ?!!-