Raksha A S   (Raksha hebbar)
18 Followers · 14 Following

Joined 31 March 2020


Joined 31 March 2020
8 APR 2022 AT 19:49

ಕೇವಲ ದೃಷ್ಟಿಕೋನದ ಕೊರತೆಯಷ್ಟೆ.!!
ಎಲ್ಲರಲ್ಲೂ ತಮ್ಮದೇ ಆದ ಸಾಮರ್ಥ್ಯವಿದೆ
ಒಳ್ಳೆಯ ಮನಸ್ಸಿರಬೇಕಷ್ಟೆ..
ತಾರತಮ್ಯ ಸಮಾಜಕ್ಕೆ ಮಾರಕ..!!

-


16 DEC 2021 AT 17:53

ಹಕ್ಕಿಗಳು ಹಾರುತಿವೆ ಮುಗಿಲಾಚೆಗೆ...
ಒಂದೊಂದು ಕನಸಿನ ಸಂಕೇತದಂತೆ
ಹೊತ್ತೊಯ್ಯಿರಿ ಎನ್ನ ಸಂದೇಶವ
ಮುಗಿಲಾಚೆಗಿನ ದೇವರಿಗೆ ತಿಳಿಸಲು.
ಆಸೆಗಳು ಈಡೇರಲು
ಅದೃಷ್ಟಕ್ಕೂ ರೆಕ್ಕೆ ಬೇಡವೇ...??!!

-


2 DEC 2021 AT 18:31

ಅವರವರೇ ಅನುಭವಿಸಬೇಕು
ಕರ್ಮಕ್ಕೆ ತಕ್ಕಂತೆ ದೊರಕುವುದು ಫಲ.
ನೂರು ದೇವರ ಪೂಜಿಸಿದರೇನು..!!
ಹೊಟ್ಟೆಕಿಚ್ಚೆಂಬ ವಿಷವು ಮನದೊಳಗಿರಲು
ಬದಲಾಗದು ಹಣೆಬರಹ
ದುರಾಲೋಚನೆಯ ಬಿಡದ ವಿನಹ...

-


2 DEC 2021 AT 18:10

ಸೋಲು ಗೆಲುವಿನ ಪಾಠ
ಸಿಗದೇ ಇರುವುದರ ಬಗ್ಗೆ ಹುಡುಕಾಟ
ಸಮಸ್ಯೆಗಳ ಎದುರಿಸಿ ಹಾರಬೇಕು ಸಹನೆಯ ಪಟ

-


27 JUL 2021 AT 16:08

ಹಾಗಂತ ದಾರಿಯೇ ಮುಳ್ಳೆಂದರೆ.....???!!
ಕಷ್ಟ ಪಟ್ಟು ದುಡಿಯುವವರಿಗೆ
ಅವಮಾನಗಳೂ ಸಹಜ
ಆದರೆ ಪರಿಶ್ರಮಕ್ಕೆ ಪ್ರತಿಫಲ ದೊರೆಯುವುದು
ಮುಂದೊಂದು ದಿನ...

-


27 JUL 2021 AT 15:53

ಹಾಗೆಯೇ ಎಲ್ಲರ ಗುರಿಯೂ ವಿಭಿನ್ನ
ಆಲೋಚನೆಗೆ ತಕ್ಕಂತೆ ಅನುಭವಗಳು
ಆದ್ದರಿಂದ ಇತರರ ಆಲೋಚನೆಗಳಿಗೆ ನಾವೆಂದೂ
ಅಭಿಪ್ರಾಯಿಗಳಾಗಲು ಸಾಧ್ಯವಿಲ್ಲ

-


27 JUL 2021 AT 15:25

ಸೃಷ್ಟಿಯ ನಿಯಮಗಳೊಂದಿಗೆ
ನಿರೀಕ್ಷೆಗಳೆಲ್ಲಾ ಪರೀಕ್ಷೆಗಳಾಗಿ
ತನ್ನಿಷ್ಟದಂತೆ ತಿರುಗುತ್ತಿದೆ
ಆದರೆ....
ಕಾಲಚಕ್ರವು ಉರುಳಿ ಬದಲಾಗುವುದು
ನೂರು ಗೊಂದಲಗಳ ಪ್ರಶ್ನೆಗೆ
ಯಾವುದೂ ಶಾಶ್ವತವಲ್ಲ ಎಂಬ ಉತ್ತರದೊಂದಿಗೆ

-


22 MAY 2021 AT 22:19

The new journey has begins... 👫
We made a promise And yet it is love ❤
That fullfill the promise
From fingers to heart 💕
From heart to life..
And now I can't wait to move into the
New innings together with you..

- Rakshavivek

-


1 APR 2021 AT 15:39

ಬದುಕಿನ ಜಂಜಾಟದಲ್ಲಿ ಹತ್ತಿರವಾದ
ಮನಸುಗಳು ಬದಲಾಗದಂತೆ ಕಾಪಾಡಿಕೊಳ್ಳಿ
ಒಮ್ಮೆ ಕಳೆದುಕೊಂಡ ವಿಶ್ವಾಸ
ಮತ್ತೆಂದೂ ಹಿಂದಿರುಗಿಬಾರದು
ಬಂದರೂ ಮೊದಲಿನಂತಿರದು

-


30 MAR 2021 AT 17:51

Every journey have a lesson too
It's good Or bad full of suspenses..
Some unforgettable memories
Which can't be erased from heart

-


Fetching Raksha A S Quotes