ನಿನ್ನ ಸೌಂದರ್ಯದಲ್ಲಿರುವ ಸಾವು
ಸೋನೆ ಮಳೆಯನ್ನು ಸುರಿಸಿತಲ್ಲ.
ನಿನ್ನ ಕಂಡ ನನ್ನ ದೇಹ
ದಾಹ ದಿಂದ ನಿನ್ನ ಬೇಡಿತಲ್ಲ...-
ಮೆತ್ತನೆಯ ಹಾಸಿಗೆಯ ಮಾಯೆಯೋ
ಕತ್ತಲೊಳಗವಿತಿರುವ ಛಾಯೆಯೋ
ಸುತ್ತ ಬಯಸುವ ಹಣ್ಣಿದ್ದರು,ಚಿತ್ತ ಬಯಸದ ಹಿಂದೇಕೆ
ಮುತ್ತು ಉದುರದ ಮಾತು ಬೇಕೆ
ಸ್ನೇಹ ಪ್ರೀತಿ ಸೇರಿಸಿ ಮಣ್ಣು ಕೊಟ್ಟರೆ ಸಾಕೇ
ಮುಂದೆ ದಾರಿಗೆ ಮಂದ ಬೆಳಕು
ಮನದ ಒಳಗೆ ನೂರು ಹುಳುಕು
ನಿಜ ನೀ ಹೇಳಿದಂತೆ ಮೋಹದ ಪ್ರೀತಿಯೇ
ಆಶ್ಚರ್ಯವೆನಿಲ್ಲ ಈಗ ಸಿಗುವುದು ಬರಿ ಅದೆಯೆ
ಅರಿಯದ ಮನಗಳ ಮೇಲೆ
ಆಗಾಗ ಮೋಹದ ದಾಳಿ
ನಿಜಕ್ಕೂ ತಪ್ಪೇ ಇದು
ಆದರೂ ಮೈ ಮನಕಂಟಿದೆ ಚಾಳಿ-
ಜಗವೆಲ್ಲ ಮೋಹ ಮಾಯೆ
ಕುರುಡು ಕಣ್ಣು,ಬರಡು ಮನಸು
ಹುಟ್ಟುತ್ತಲೇ ಸಾಯುವ ಭಾವನೆ
ಇದ್ದದ್ದನ್ನು ಬಿಟ್ಟು ಇಲ್ಲದ್ದರ ಬಗ್ಗೆ ಯೋಚನೆ
ಪ್ರೇಮ,ಕರುಣೆ,ವಾತ್ಸಲ್ಯ,ಮಾನವೀಯತೆ
ಇವೆಲ್ಲದರ ಮೇಲೆ ಹಿಡಿ ಮಣ್ಣು ಸುರಿದಂತೆ
ಹೊನ್ನು ಹೊಟ್ಟೆ ತುಂಬಿಸಿ,ಆಸೆ ಹುಟ್ಟಿಸಿ
ಹೆಣ್ಣು ಆಸೆ ತೀರಿಸಿ,ಮೋಹ ಹೆಚ್ಚಿಸಿ
ಮಣ್ಣು ನಕ್ಕು ನಲಿಯಿತು
ನಮ್ಮಲ್ಲಿನ ಮೋಹ ಸಾಯಿಸಿ
-
ಹೆಣ್ಣನ್ನ ಬರೀ ಹಾಸಿಗೆಗಾಗಿ
ಪ್ರೀತಿಸಿದ್ರೆ ಅವ್ಳ್ ಬರೀ ಮೋಹದ ಮಾಯಾಂಗಿನಿಯಾಗಿ
"ಕಾಡ್ತಾಳೆ,"😶
ಅದೇ ಹೆಣ್ಣನ್ನ ಜೀವನಕ್ಕಾಗಿ
ಪ್ರೀತಿಸಿದ್ರೆ ಅವ್ಳ್ ಕೊನೆವರೆಗೂ ದೇವತೆ ಹಾಗೆ ಜೊತೆಗಿದ್ದು
"ಕಾಪಾಡ್ತಾಳೆ"😊-
ನಾಡಿನೆಡೆಯಿಂ ಕಾನನದೆಡೆಗೆನ್ನ ಕೂಗಿಹುದು ದೇಹ
ಸಂಸಾರ ಮೋಹಕ್ಕಿಲ್ಲದಂತಿದೆ ಅಂತ್ಯ, ನನ್ನೋಳಗಿನ
ಮಾಯಾಜಿಂಕೆಯ ಸೋಲಿಸಬೇಕಿದೆ!-
ನಿನ್ನೊಲವ ಮೋಹದ ಸುಳಿಗೆ
ನನ್ನನ್ನೇಕೆ ಸಿಲುಕಿಸಿದೆ🤦♀
ಈಗ ಹೊರಬರುವ ದಾರಿಯೆ
ಕಾಣದಂತಾಗಿದೆ.🤷♀.
-ಮನ
-
ಮೋಹದ ನೆರಳಲ್ಲಿ ಗರ್ಭಿಸಿದ ನಂಬಿಕೆಯಡಿ, ಹಾದರವೊಂದು ಚಾದರ ಹೊದ್ದು ಮಲಗಿತ್ತು.
ಮುಗ್ಧ ಜೀವಿಯೊಂದು ಮೋಸದ ಜಾಲಕ್ಕೆ
ಸಿಲುಕಿ ನಲುಗುತ್ತಿತ್ತು...-
ಪಕ್ಕದಲಿ ಇರುವಾಗ ಚೊಕ್ಕವೆನಿಸಿತ್ತು.
ಮಂಗನಾಟಗಳೆಲ್ಲ ಮರಕೋತಿಯಾಡಿತ್ತು.
ಅತ್ತ ಸರಿದಂತೆ..,ಇತ್ತ ಏನಾಯ್ತು?
ಎತ್ತೆತ್ತಲೂ ಯಾರಿಲ್ಲದಂತಾಯ್ತು.
ಎದ್ದು ಹೋದವನನ್ನು ಕೇಳಿತ್ತು...,
ಮೋಹದ ಭ್ರಮೆ ನಿನಗಾಗಿತ್ತೋ?
ನನಗಾಗಿತ್ತೋ?-
ಮೋಹಕ್ಕಿಲ್ಲ ಮದ್ದು
ಹಾರುವುದು ಎಲ್ಲೆಡೆ
ಮೀರಿ ಸರಹದ್ದು.
ಈ ಪ್ರೀತಿಯ ಹದ್ದು
ಮೇರೆಗಳ ಮೀರಿದರೂ
ಮುದ್ದು ಮುದ್ದು.
ಮೋಹದಿ ಈ ಮನವ ಕದ್ದು
ಕೈಗೆ ಸಿಗದೆ ಹೊದರೂ
ಅದು ನನ್ನ ಮುದ್ದಿನ ಪೆದ್ದು.
ಈ ಹೃದಯ ಗೆದ್ದು
ನನ್ನ ಸೋಲಿಸಿದರೂ
ಗೆಲ್ಲುವಂತೆ ಮಾಡಿದ್ದು
ನಾನೇ ಖುದ್ದು.-